ಉನ್ನತ ಶಿಕ್ಷಣ ಸಚಿವ ಜಿ. ಟಿ ದೇವೇಗೌಡ ಅವರು ಮಾತಾಡಿರುವ ಬಟ್ಲರ್ ಇಂಗ್ಲಿಷ್ ಕುರಿತು ಮಾತಾಡಿರುವ ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ಜಿಟಿಡಿ ಕನ್ನಡದಲ್ಲೇ ಮಾತಾಡಲಿ ಎಂದಿದ್ದಾರೆ.
ಜಿ.ಟಿ.ಡಿ ಅವರು ಇಂಗ್ಲಿಷ್ ಮಾತಾಡುವ ಅವಶ್ಯಕತೆ ಇಲ್ಲ. ಕನ್ನಡದಲ್ಲೇ ಮಾತಾಡಬೇಕು. ಅವರಿಗೆ ಇಂಗ್ಲಿಷ್ ಬರಲ್ಲ ಎನ್ನುವ ಮಾತುಕೇಳಿ ಬೇಜಾರಾಗಿದೆ.ನಾವೇನು ಇಂಗ್ಲಿಷ್ ಗುಲಾಮರಾ, ಜಿ.ಟಿ ಡಿ ಕನ್ನಡದಲ್ಲೇ ಮಾತಾಡಲಿ.
ಕನ್ನಡ ಮಾತಾಡಿದರೆ ಕೀಳು, ಇಂಗ್ಲಿಷ್ ಮಾತಾಡಿದರೆ ಉತ್ತಮನಾ..? ನಂಗೆ ಬಹಳ ಕೋಪ ಇದೆ. ನಾನು ದೇವೇಗೌಡರಿಗೆ ಸಪೋರ್ಟ್ ಮಾಡ್ತೀನಿ. ಖಾತೆ ಹೇಗೆ ನಿರ್ವಹಿಸುತ್ತಾರೆ ಅನ್ನೋದು ಮುಖ್ಯ, ಭಾಷೆ ಅಲ್ಲ ಎಂದು ರೆಡ್ಡಿ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳೀದರು.