ರಾಜ್ಯಾದ್ಯಂತ ‘ಗಂಧದಗುಡಿ’ ಸಿನಿಮಾ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದ್ದು, ಪ್ರಸಿದ್ಧ ನಿಮಿಷಾಂಬ ದೇಗುಲಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಭೇಟಿ ನೀಡಿದ್ರು. ಶ್ರೀರಂಗಪಟ್ಟಣದ ಗಂಜಾಮ್ನ ಶ್ರೀ ನಿಮಿಷಾಂಬ ದೇಗುಲಕ್ಕೆ ಅಶ್ವಿನಿ ಭೇಟಿ ನೀಡಿ ಗಂಧದಗುಡಿ ಸಕ್ಸಸ್ಗೆ ವಿಶೇಷ ಪೂಜೆ ಸಲ್ಲಿಸಿದ್ರು.
ಈ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ‘ಗಂಧದಗುಡಿ’ ನಿರ್ದೇಶಕ ಅಮೋಘವರ್ಷ ಸಾಥ್ ನೀಡಿದ್ರು. ಬಳಿಕ ಮಾತ್ನಾಡಿದ ಅಮೋಘವರ್ಷ, ಅಪ್ಪು ಅಂದ್ರೆ ಪ್ರೀತಿ, ಅದನ್ನು ಅವರ ಅಭಿಮಾನಿಗಳ ಹೃದಯದಲ್ಲೇ ಕಾಣಬಹುದು. ಅಭಿಮಾನಿಗಳು ಸಿನಿಮಾವನ್ನು ನೋಡಿ ಖುಷಿಪಟ್ಟರೆ ನಮಗೆ ಅದೇ ಸಂತೋಷ. ಅಪ್ಪು ಅವರು ಹೇಳಿದ್ದನ್ನ ಅಳವಡಿಸಿಕೊಂಡ್ರೆ, ನಮ್ಮಲ್ಲೆ ಅಪ್ಪು ಸರ್ ನಾ ಕಾಣ್ತೇವೆ. ಅಪ್ಪು ಸರ್ ಜೊತೆ ಶೂಟಿಂಗ್ ಸಮಯದಲ್ಲಿ ನಾನು ಕಾಲ ಕಳೆದಿದ್ದು, ಈ ಸಮಯದಲ್ಲಿ ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಗಂಧದಗುಡಿ ನಿರ್ದೇಶಕ ಅಮೋಘವರ್ಷ ತಿಳಿಸಿದರು .