ಸಿದ್ದು ಸ್ಪರ್ಧಿಸೊದು ಇಲ್ಲಿಂದಾನಾ ?

Must read

ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಲು ಚಿಂತನೆ ನಡೆಸಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮೈಸೂರಿನಲ್ಲಿ ಸಿದ್ದರಾಮಯ್ಯರನ್ನ ಕೋಲಾರದ ಬೋವಿ ಸಮಾಜದ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿದ್ದಾರೆ.

ರಾಮಕೃಷ್ಣನಗರದ ಪಾರ್ಕ್ನಲ್ಲಿ ಮುಂಜಾನೆ ಸಿದ್ದರಾಮಯ್ಯ ವಾಕಿಂಗ್ ಮಾಡುವ ವೇಳೆ ಕೋಲಾರದ ಕಾಂಗ್ರೆಸ್ ನಿಯೋಗ, ಹಾರತುರಾಯಿ ಸಮರ್ಪಿಸಿ ಕೋಲಾರದಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ಸದ್ಯದಲ್ಲೇ ಕೋಲಾರಕ್ಕೆ ಭೇಟಿ ನೀಡುತ್ತೇನೆ, ಅಲ್ಲೇ ಒಂದು ದಿನ ಇದ್ದು ಮಾತನಾಡುತ್ತೇನೆ ಎಂದು ಸಿದ್ದು ಭರವಸೆ ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article