ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ನಾಗಣ್ಣ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾವೊಂದು ಬರಲಿದ್ದು, ಈ ಸಿನಿಮಾಕ್ಕೆ ಪಂಜಾಬ್ ಬೆಡಗಿ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ.
ಪಂಜಾಬಿಯ ‘ರಮ್ತಾ ಜೋಗಿ’ ಎಂಬ ಸಿನಿಮಾದಲ್ಲಿ ನಟಿಸಿದ್ದ ರೋನಿಕ ಸಿಂಗ್ ಗಣೇಶ್ ಜೊತೆಗೆ ತೆರೆ ಹಂಚಿಕೊಳ್ಳಲು ರೆಡಿಯಾಗಿರೋ ನಟಿ.
ಗಣೇಶ್ ಹಾಗೂ ನಾಗಣ್ಣ ಅವರ ಕಾಂಬಿನೇಷನ್ ನಲ್ಲಿ ಬರ್ತಿರೋ ಮೊದಲ ಸಿನಿಮಾವಿದು. ರೋನಿಕಾಗೆ ಇದು ಮೊದಲ ಸ್ಯಾಂಡಲ್ ವುಡ್ ಚಿತ್ರ.
ಇದೊಂದು ಹಾರರ್ ಸಿನಿಮಾವಾಗಿದ್ದು, ಸಾಧುಕೋಕಿಲಾ, ಗುರುದತ್, ಸುಂದರ್ ರಾಜ್, ಶೋಭರಾಜ್ ಮೊದಲಾದರನ್ನೊಳಗೊಂಡ ದೊಡ್ಡ ತಾರಾಗಣವಿದೆ.