⁠⁠⁠ಗಣೇಶ ಚತುರ್ಥಿ ದಿನ ಚಂದ್ರನ ಯಾಕೆ ನೋಡ್ಬಾರ್ದು?

Date:

ಓದುಗರಿಗೆಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು. ವಿಘ್ನನಿವಾರಕ ಗಣೇಶ ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಸಿದ್ಧಿಸಲಿ ಎಂದು ಮನತುಂಬಿ ಹಾರೈಸುತ್ತಾ… ಗಣೇಶನ ಚತುಥಿಱಯ ಬಗ್ಗೆ ಸಣ್ಣದೊಂದು ಬರಹ.
ಸ್ನೇಹಿತರೆ,ಮೊದಲಿಗೆ ಎರಡೇ ಎರಡು ಪ್ರಶ್ನೆಗಳು..ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ರೆ..ಮುಂದೆ ಓದ್ ಬೇಡಿ..ಗೊತ್ತಿಲ್ದೇ ಇರೋರು ತಿಳ್ಕೊಳ್ಳಿಯಂತ ಶೇರ್ ಮಾಡಿ ಉದಾರಿಗಳಾಗಿ..!
ಪ್ರಶ್ನೆ ಸಂಖ್ಯೆ1) ಗಣೇಶನ ಆನೆಯ ತಲೆ ಏನನ್ನು ಸೂಚಿಸುತ್ತೇ ಗೊತ್ತಾ?
ಪ್ರಶ್ನೆ ಸಂಖ್ಯೆ2)ಗಣೇಶನ ಚತುರ್ತಿಯಂದು ಚಂದ್ರನ ನೋಡಬಾರದು ಏಕೆ?
ಗಣೇಶನಿಗೆ ಆನೆ ತಲೆ ಏಕೆ ಬಂತು ಎನ್ನುವುದು ಮಾತ್ರ ಗೊತ್ತು.. ಆ ತಲೆ ಏನನ್ನು ಸೂಚಿಸುತ್ತದೆ ಎನ್ನುವುದು ಗೊತ್ತಿಲ್ಲ ಅನ್ನುವುದು ಮೊದಲ ಪ್ರಶ್ನೆಗೆ ನೀವು ಕೊಡೊ ಉತ್ತರ..?
ಎರಡನೇ ಪ್ರಶ್ನೆಗೆ ಗಂಟಲಲ್ಲಿದೆ ಬಾಯಿಗೆ ಬರ್ತಿಲ್ಲ ಅನ್ನುವುದು ನಿಮ್ಮ ರೆಡಿಮೇಡ್ ಆನ್ಸಾರ್…!

ಆದರೆ, ನಿಮ್ ಮಕ್ಕಳೋ , ತಂಗಿನೋ, ತಮ್ಮನೋ ಅಥವಾ ಇನ್ಯಾರದ್ದೋ ಮಕ್ಕಳು..! ಒಟ್ನಲ್ಲಿ ಪ್ರಶ್ನೆ ಕೇಳೋ ಒಳ್ಳೇ ಪುಟಾಣಿಗಳು ಕೇಳಿದ್ರೆ..ನೀವು ಹೀಗೆ ಉತ್ತರ ಕೊಟ್ಟರೆ..? ಮರ್ಯಾದೆ ಮೂರು ಖಾಸಿಗೆ ಹರಾಜು..?😫
ಅವೆಲ್ಲಾ ಆಗೋದು ಬೇಡ..! ಈ ಇಲ್ಲಿ ಮೇಲಿನ ಪ್ರಶ್ನೆಗಳಿಗೆ ಉತ್ತರವಿದೆ.
ಓದಿ..
ಈ ನಮ್ಮ ಗಣೇಶನ ಆನೆಯ ತಲೆ ನಂಬಿಕೆ,ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯನ್ನು ಸೂಚಿಸುತ್ತದೆ.
ಸರಿ, ಗಣೇಶನ ಚತುರ್ತಿಯಂದು ಚಂದ್ರನ ನೋಡಬಾರದು ಏಕೆ ಅನ್ನುವುದು ಇನ್ನೊಂದು ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಮುಂದಿದೆ ಓದಿ..ಇನ್ನೊಮ್ಮೆ ಹೇಳ್ತೀದಿನಿ ಇಂತಹ ವಿಚಾರಗಳನ್ನು ಎಲ್ಲರೂ ತಿಳ್ಕೊಂಡಿರ್ಬೇಕು..! ಸೋ…ಬೇರೆ ಬೇರೆ ಕಡೆ ಶೇರ್ ಮಾಡಿ
ಗಣೇಶ ಒಳ್ಳೇದ್ ಮಾಡ್ಲಿ😀
ಒಂದ್ಸಲ ಚಂದ್ರನು ಗಣಪತಿಗೆ ”ನಿನ್ನ ದೊಡ್ಡ ಹೊಟ್ಟೆ ಏನು, ಬೀಸಣಿಗೆ ರೀತಿ ಇರುವ ಕಿವಿಗಳೇನು, ಆ ಸೊಂಡಿಲು, ಆ ಚಿಕ್ಕ ಕಣ್ಣುಗಳೇನು..?!’ ಎಂದು ಕಿಂಡಲ್ ಮಾಡ್ತಾನೆ..ತಮಾಷೆ ಮಾಡ್ತಾನೆ..
ಇಷ್ಟೆಲ್ಲಾ ಕೇಳಸ್ಕೊಂಡು ಸುಮ್ನೆ ಇರೋ ಜಾಯಮಾನನ ಗಣಪತಿದು..? ಖಂಡಿತಾ ಅಲ್ಲ..!ಗಣಪತಿಯು ಅದನ್ನು ಕೇಳಿ ಚಂದ್ರನನ್ನು ಸಂಬೋಧಿಸುತ್ತ ‘ಇನ್ನು ಮುಂದೆ ನಿನ್ನನ್ನು ಯಾರು ಕಣ್ಣೆತ್ತಿ ನೋಡಲಾರರು, ಒಂದೊಮ್ಮೆ ನೋಡಿದರೆ ಅಂಥವರ ಮೇಲೆ ಕಳ್ಳತನದ ಆರೋಪ ಬರುತ್ತೆ ಎಂದು ಶಪಿಸಿದ…! ಆಮೇಲೆ ಎಲ್ಲರಿಗೂ ಭಯ ಆಗುತ್ತೆ..! ಗಣೇಶನ ಶಾಪ ಅಂದ್ರೆ ಹುಡುಗಾಟಿಕೆನಾ..?
ಯಾರೂ ಕೂಡ ಚಂದ್ರನನ್ನು ನೋಡದೆ, ಚಂದ್ರನು ತಮ್ಮ ಕಣ್ಣಿಗೆ ಬೀಳದ ಹಾಗೆ ಓಡಾಡಲಿಕ್ಕೆ ಶುರುವಿತ್ರು..! ಚಂದಿರನಿಗೆ ಎಲ್ಲಿಯೂ ಹೋಗಲು ಆಗುತಿರ್ಲಿಲ್ಲ..!ಒಂಟಿ ಜೀವನ ಚಂದ್ರಂಗೆ ಕಷ್ಟ ಆಗ್ಬಿಡ್ತು..!
ಅದಕ್ಕಾಗಿ ಕಠಿಣ ತಪಸ್ಸನ್ನು ಆಚರಿಸಿ ನಮ್ ಗಣಪತಿಯನ್ನು ಪ್ರಸನ್ನಗೊಳಿಸಿದ..!ಗಣಪತಿಯ ಹತ್ತಿರ ತನಗೆ ಕೊಟ್ಟ ಶಾಪವನ್ನು ಹಿಂಪಡೆಯುವಂತೆ ಪ್ರಾರ್ಥನೆ ಮಾಡಿದ.!
ಅದ್ಕೆ ಗಣೇಶ, ಕೊಟ್ಟಿರುವ ಶಾಪವನ್ನು ಸಂಪೂರ್ಣವಾಗಿ ವಾಪಸ್ಸು ಪಡೆಯೋಕೆ ಆಗಲ್ಲ..! ಸ್ವಲ್ಪ ಪ್ರಮಾಣದಲ್ಲಿ ಮೂಲ ಶಾಪವು ಉಳಿಯುತ್ತದೆ, ಇನ್ನುಳಿದ ಶಾಪವನ್ನು ಹಿಂಪಡೆಯಬಹುದು’ ಎಂದು ವಿಚಾರ ಮಾಡ್ಬಿಟ್ಟು “ಗಣೇಶ ಚತುರ್ಥಿ”ಯಂದು ಯಾರೂ ನಿನ್ನ ದರ್ಶನವನ್ನು ಪಡೆಯಲಾರರು..!ಆದರೆ, ಸಂಕಷ್ಟ ಚತುರ್ಥಿಯಂದು ನಿನ್ನ ದರ್ಶನವಾಗದೆ ಯಾರೂ ಭೋಜನವನ್ನು ಸ್ವೀಕರಿಸುವುದಿಲ್ಲ’ ಎಂದು ಚಂದ್ರನಿಗೆ ನೀಡಿದ ಶಾಪವನ್ನು ವಾಪಸ್ಸು ಪಡೀತಾನೆ..
ಇದು.ನಿಮಗೆ ಗೊತ್ತಿಲ್ಲ ಅಂತಲ್ಲ..ಗೊತ್ತಿರ್ಲಿ,ಗೊತ್ತಿರ್ಬೇಕು ಅಂತ ಹಬ್ಬದ ಪ್ರಯುಕ್ತ..!
ಮತ್ತೊಮ್ಮೆ ಹಬ್ಬದ ಶುಭಾಶಯಗಳೊಂದಿಗೆ..!

  • ರಘುಭಟ್

POPULAR  STORIES :

ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...