ತರಕಾರಿ ತರುವ ನೆಪದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿ ಕಾಮುಕರು ಸಾಮೂಹಿಕ ಅತ್ಯಾಚರ ಎಸಗಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ದ ಸೋಲಂಪುರದಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ಮಹಿಳೆ ಮನೆ ಕೆಲಸಕ್ಕಾಗಿ ನೋಯ್ಡಾದ ಸ್ವರ್ಣ ನಗ್ರಿ ಪ್ರದೇಶಕ್ಕೆ ಬಂದಿದ್ದಾರೆ. ಇದೇ ದಿನ ಸಂಜೆ ಮಾಲೀಕ ವ್ಯಕ್ತಿಯೊಬ್ಬನ ಜೊತೆ ತರಕಾರಿ ತರಲೆಂದು ಕಳುಹಿಸಿದ್ದಾನೆ.
ತರಕಾರಿ ತರಲು ಮಹಿಳೆಯನ್ನು ಕರೆದುಕೊಂಡು ಹೋದ ವ್ಯಕ್ತಿ ಸೋಲಂಪುರಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರು ಮೊದಲೇ ಹಾಜರಿದ್ದರು. ಮೂವರು ಕಾಮುಕರು ಸೇರಿ ಅತ್ಯಾಚಾರ ಎಸಗುದ್ದಾರೆ ಎನ್ನಲಾಗಿದೆ. ಕಸ್ನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.