ದೇಶದ ಪ್ರತಿಷ್ಠಿತ ಕ್ರೀಡೆ ಅಂದ ಕೂಡ್ಲೆ ಥಟ್ ಅಂತ ತಲೆಗೆ ಹೊಳಿಯೋದು ಕ್ರಿಕೆಟ್. 1999-2000ರ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಕಳಂಕ ಹೊತ್ತ ಭಾರತ ತಂಡ ತತ್ತರಿಸಿ ಹೋಗಿತ್ತು..! ಆ ಟೈಮ್ನಲ್ಲಿ ಭಾರತದ ಮರ್ಯಾದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿ ಹೋಗಿತ್ತು. ಇದೇ ಸಮಯದಲ್ಲಿ ನಾಯಕತ್ವ ಸ್ಥಾನ ಅಲಂಕರಿಸಿದ ಶ್ರೇಷ್ಠ ಕ್ರಿಕೆಟಿಗ ಭಾರತದ ಮರ್ಯಾದೆಯನ್ನು ಕಾಪಾಡಿ ಯಶಸ್ವಿಯ ಶಿಖರಕ್ಕೆ ಕೊಂಡೊಯ್ದು ಮತ್ತೆ ಕ್ರಿಕೆಟ್ ಕ್ರೇಜ್ ಹೆಚ್ಚುವಂತೆ ಮಾಡಿದ್ದ ನಾಯಕ ಅಂದ್ರೆ ಅದು ಬೇರ್ಯಾರೂ ಅಲ್ಲ ನಮ್ಮ ಬಂಗಾಳದ ಹುಲಿ ದಾದ..!
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಸೌರವ್ ಗಂಗೂಲಿಯ ಆಟಕ್ಕೆ ಅಭಿಮಾನಿಗಳು ದಾದ ಅಂತಾನೆ ಬಿರುದು ನೀಡಿದ್ರು.. ಗಂಗೂಲಿ ಕ್ರೀಸ್‍ಗೆ ಬಂದ್ರು ಅಂದ್ರೆ ಎದುರಾಳಿ ತಂಡದ ಬೌಲರ್‍ಗೆ ನಡುಕು ಶುರುವಾಗ್ತಾ ಇದ್ದಿದ್ದಂತೂ ಸುಳ್ಳಲ್ಲ..! ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ ಮ್ಯಾನ್ ಈ ಬಿಗ್‍ಹಿಟ್ಟರ್, ಕ್ರೀಸ್‍ಗೆ ಬಂದು ನಿಂತ್ರು ಅಂದ್ರೆ ಇಡೀ ಸ್ಟೇಡಿಯಂನಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳು ದಾದ.. ದಾದ ಅಂತ ಕೊಂಡಾಡ್ತಾ ಇರ್ತಾರೆ. ಆ ಮಟ್ಟಿಗೆ ಪ್ರೇಕ್ಷಕರನ್ನ ಸೆಳೆದಿದ್ರು ಈ ಸೌರವ್..!
ಎದುರಾಳಿ ಅದೆಂಥಾ ಪ್ರಭಾವಿ ಬೌಲರ್ ಆಗಿದ್ರೂ ಡೊಂಟ್ ಕೇರ್ ಎಂದು ನೆಲಕಚ್ಚಿ ಬ್ಯಾಟ್ ಬೀಸುತ್ತಾ ಎದುರಾಳಿಯ ದೊಡ್ಡ ಶತ್ರು ಆಗಿದ್ದ ದಾದಾಗೆ ಕೊಲೆ ಬೆದರಿಕೆ ಪತ್ರವೊಂದು ಬಂದಿದೆಯಂತೆ. ಜನವರಿ 19ಕ್ಕೆ ಅವರದೇ ಜಿಲ್ಲೆಯಲ್ಲಿ ನಡೆಯಬೇಕಿರುವ ಕ್ರೀಡಾ ಸನ್ಮಾನ ಕಾರ್ಯಕ್ರಮಕ್ಕೆ ಭಾಗವಹಿಸೋಕು ಮುಂಚೆಯೆ ಗಂಗೂಲಿಗೆ ಇಂತಹ ಬೆದರಿಕೆ ಪತ್ರ ಬಂದಿರೋದು ಎಲ್ಲರಲ್ಲೂ ಇನ್ನಿಲ್ಲದ ಆತಂಕ ಹುಟ್ಸಿದೆ..! ಕಾರ್ಯಕ್ರಮಕ್ಕೆ ನೀವು ಭಾಗವಹಿಸಿದ್ದೇ ಆದ್ರೆ ನಿಮ್ಮನ್ನು ಹತ್ಯೆ ಮಾಡುವುದಾಗಿ ಅನಾಮಧೇಯ ಪತ್ರದಲ್ಲಿ ಬರೆಯಲ್ಪಟ್ಟಿದೆಯಂತೆ..! ಈ ಕುರಿತಾಗಿ ಗಂಗೂಲಿ ಪೊಲೀಸರಿಗೆ ದೂರು ದಾಖಲಿಸಿದ್ದಾರಂತೆ ನೋಡಿ..!
ಲೋಧಾ ಶಿಫಾರಸ್ಸನ್ನು ಅಳವಡಿಸಿಕೊಳ್ಳಲು ವಿಫಲವಾಗಿದ್ದ ಬಿಸಿಸಿಐಗೆ ಸಖತ್ ಶಾಕ್ ನೀಡಿದ್ದ ಸುಪ್ರೀಂ ಕೋರ್ಟ್ ಮಂಡಳಿಯ ಅಧ್ಯಕ್ಷ ಅನುರಾಗ್ ಠಾಕೂರ್ ಅವರನ್ನು ವಜಾ ಮಾಡುವ ಮೂಲಕ ಮಂಡಳಿಯ ಇತರೆ ಸದಸ್ಯರಿಗೆ ವಾರ್ನಿಂಗ್ ಕೊಟ್ಟಿದ್ರು. ಅದಾದ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿಯ ಧಿಡೀರ್ ನಾಯಕತ್ವ ಸ್ಥಾನಕ್ಕೆ ರಾಜಿನಾಮೆಯ ಸುದ್ದಿ ಇನ್ನಿಲ್ಲದ ಅಚ್ಚರಿಯನ್ನುಂಟು ಮಾಡಿತ್ತು. ಹೀಗೆ ಈ ಎಲ್ಲಾ ಘಟನೆಯನ್ನು ನೋಡಿದಾಗ ಒಂದಕ್ಕೊಂದು ಸಂಬಂಧ ಇದೆ ಎನ್ನುವ ಅನುಮಾನವನ್ನು ಸೃಷ್ಠಿ ಮಾಡಿದೆಯಂತೆ..! ಗಂಗೂಲಿಗೆ ಕೊಲೆ ಬೆದರಿಕೆ ಬರುವುದಕ್ಕೂ ಮತ್ತು ಬಿಸಿಸಿಐಗೂ ಏನಪ್ಪಾ ಸಂಬಂಧ ಅಂಥ ಕನ್ಫೂಶನ್ ಆಗ್ತಿರಬಹುದು ಅಲ್ವಾ..! ಇಲ್ಲಿದೆ ನೋಡಿ ಅನುಮಾನಕ್ಕೆ ಕಾರಣವಾಗಿರಬಹುದಾದ ಸಂಗತಿ..! ಬಿಸಿಸಿಐ ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ ದಾದರನ್ನೇ ಕೂರಿಸಬೇಕು ಎನ್ನುವ ಕೂಗು ಈಗ ಎಲ್ಲೆಡೆ ಕೇಳಿಬರುತ್ತಿದೆ..! ಈ ಕಾರಣಕ್ಕಾಗಿಯೆ ಗಂಗೂಲಿಗೆ ಕೊಲೆ ಬೆದರಕೆ ಪತ್ರ ಬಂದಿರಬಹುದು ಎನ್ನುವ ಅನುಮಾನಗಳು ಹುಟ್ಟಿವೆ. ಆದ್ರೆ ಗಂಗೂಲಿ ಮಾತ್ರ ಬಿಸಿಸಿಐ ಅಧ್ಯಕ್ಷ ಸ್ಥಾನ ಏರೋದಕ್ಕೆ ನಾನು ಸೂಕ್ತ ವ್ಯಕ್ತಿ ಅಲ್ಲ ಎಂದು ಹೇಳಿಕೊಂಡು ಕೈ ತೊಳೆದುಕೊಂಡಿದ್ದಾರೆ. ಇನ್ನು ಗಂಗೂಲಿಗೆ ಕೊಲೆ ಬೆದರಿಕೆ ಬಂದಿರುವುದು ಇದೇನು ಮೊದಲೇನಲ್ಲ ಜೊತೆಗೆ ಗಂಗೂಲಿ ಇಂತಹ ಬೆದರಿಕೆಗಳಿಗೆ ಸೊಪ್ಪು ಹಾಕುವಂತಹ ವ್ಯಕ್ತಿಯೂ ಅಲ್ಲ ಎನ್ನುವುದು ಗೊತ್ತಿರುವ ವಿಷ್ಯ..!
ಅದಕ್ಕೆ ಸೂಕ್ತ ಉದಾಹರಣೆಯಾಗಿ ಲಂಡನ್ ಅಂಡರ್‍ಗ್ರೌಂಡ್‍ನಲ್ಲಿ ನವಜೋತ್ ಸಿಂಗ್ ಸಿಧು ಜೊತೆ ಟ್ರೈನ್‍ನಲ್ಲಿ ಪ್ರಯಾಣಿಸುತ್ತಿರುವಾಗ ಅವರ ಎದ್ರಿಗೆ ಬಿಯರ್ ಕುಡಿಯುತ್ತಾ ಕುಳಿತ್ತಿದ್ದ ಹುಡುಗರ ಗುಂಪೊಂದರಲ್ಲಿ ಒಬ್ಬ ಗಂಗೂಲಿ ತಲೆಗೆ ಗನ್ ಇಟ್ಟಿದ್ದನಂತೆ, ಗಂಡೆದೆಯ ಬಂಡ ದಾದಾ ಸ್ವಲ್ಪವೂ ಜಗ್ಗದೆ ಆ ಟೈಮ್‍ನಿಂದ ತಪ್ಪಿಸಿಕೊಂಡರಂತೆ..!
- ಹಾಲೇಶ್ ಎಂ.ಎಸ್ ಹುಣಸನಹಳ್ಳಿ
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!
ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!
ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?
ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film