ಹಲಸೂರು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಗಾಂಜಾ ಮತ್ತಲ್ಲಿ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆದಿದೆ.
ಹುಡುಗಿಯ ವಿಚಾರಕ್ಕೆ ಸಂಬಂಧಿಸಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ವಿಕೆಟ್, ಬ್ಯಾಟ್ ಮೂಲಕ ಹೊಡೆದಾಡುವ ಮಟ್ಟಿಗೆ ತಲುಪಿದೆ. ಘಟನೆ ವೇಳೆ ದುಷ್ಕರ್ಮಿಗಳು ಎರಡು ಕಾರುಗಳಿಗೆ ಹೊಡೆದಿದ್ದಾರೆ. ಇಷ್ಟೆಲ್ಲಾ ಆದ್ರೂ ಪೊಲೀಸರಿಗೆ ಮಾತ್ರ ಘಟನೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಗಾಂಜಾ ಮತ್ತಿನಲ್ಲಿ ಹುಡುಗರು ನಡೆಸಿದ ಹಾವಳಿಯಿಂದ ಸಾರ್ವಜನಿಕರು ಭಯಭೀತರಾಗಿದ್ದರು.
ಗಾಂಜಾ ಮತ್ತಲ್ಲಿ ಗುಂಪುಗಳ ನಡುವೆ ಮಾರಾ ಮಾರಿ…!
Date:






