ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ ತಿಂಗ್ಳು ಕಳೆಯಿತು..! ಇಷ್ಟು ದಿನವಾದರೂ ಇವರನ್ನು ಹತ್ಯೆಗೈದ ಹಂತಕರು ಪತ್ತೆಯಾಗಿಲ್ಲ..! ಆದ್ರೆ, ಓರ್ವ ಹಂತಕನ ಹಣೆಯಲ್ಲಿ ತಿಲಕ ಇತ್ತು ಎಂಬುದು ಗೊತ್ತಾಗ್ಬಿಟ್ಟಿದೆ..!
ಅಷ್ಟಕ್ಕೂ ಸಿಸಿ ಟಿವಿಯಲ್ಲಿ ಸರಿಯಾಗಿ ಕಾಣದ, ಹೆಲ್ಮೆಟ್ ಧರಿಸಿದ್ದ ಉಗ್ರರ ಹಣೆಯಲ್ಲಿಟ್ಟಿದ್ದರೆನ್ನಲಾಗಿರೋ ತಿಲಕವನ್ನು ಕಂಡವರ್ಯಾರು? ಎನುವುದು ಬಹುತೇಕರನ್ನೀಗ ಕಾಡ್ತಿರೋ ಪ್ರಶ್ನೆ.
ಶನಿವಾರ ಗೌರಿ ಲಂಕೇಶ್ ಹಂತಕರ ರೇಖಾಚಿತ್ರವನ್ನು ಬಿಡುಗಡೆಮಾಡಲಾಗಿದೆ. ಇದರಲ್ಲಿ ಓರ್ವನ ಹಣೆಯಲ್ಲಿರೋ ತಿಲಕ ಕಂಡಿದ್ದು ಎಲ್ಲಿಂದ ಎಂದು ಹಿಂದೂ ಸಂಘಟನೆಗಳು ಪ್ರಶ್ನಿಸ್ತಿವೆ. ಇದರಲ್ಲಿ ಸರ್ಕಾರದ್ದು ಷಡ್ಯಂತ್ರ ಇದೆ ಅನ್ನೋ ಆರೋಪ ಕೂಡ ಕೇಳಿಬಂದಿದೆ..!
ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್, ಸಿಸಿಟಿವಿ ದೃಶ್ಯಾವಳಿಯಲ್ಲಿ ಹಂತಕನ ಹಣೆಯಲ್ಲಿ ತಿಲಕ ಇರೋದನ್ನು ತೋರಿಸಲೆಂದು ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ ಕ್ಷೇತ್ರಿಯಾ ಸಂಘಟನಾ ಕಾರ್ಯದರ್ಶಿ ಗೋಪಾಲ್ ಕೂಡ ಶಂಕಿತ ಹಂತಕನ ರೇಖಾಚಿತ್ರ ರಚನೆ ಹಿಂದೆ ರಾಜಕೀಯ ಇರ್ಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ..!
ಹೀಗೆ ಹಂತಕನ ಹಣೆಯ ತಿಲಕ ಎಲ್ಲಿಂದ ಕಂಡಿತು..? ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.