ಕ್ರಿಸ್ ಗೇಲ್ ಅದೆಂಥಾ ದೈತ್ಯ ಪ್ರತಿಭೆ ಅನ್ನೋದು ಜಗತ್ತಿಗೆ ಗೊತ್ತಿದೆ. ಗೇಲ್ ಹತ್ತು, ಹದಿನೈದು ಓವರ್ ಕ್ರೀಸ್ ನಲ್ಲಿ ನಿಂತರೇ ಸುನಾಮಿ ಬಂದುಹೋದಂತೆ ಲೆಕ್ಕ. ಅದ್ಯಾರೇ ಬೌಲರ್ ಇರಲಿ ಬೆವರಿ ಬಸವಳಿದು ತಲೆ ಕೆರೆದುಕೊಳ್ಳುವವರೆಗೆ ಬಿಡುವುದಿಲ್ಲ. ಆದರೆ ಈ ಐಪಿಎಲ್ ನಲ್ಲಿ ಆರಂಭದ ಹಲವು ಪಂದ್ಯಗಳಲ್ಲಿ ಗೇಲ್ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅನಿವಾರ್ಯವಾಗಿ ಕೊಹ್ಲಿ ಒಂದೆರಡು ಪಂದ್ಯಗಳಿಂದ ಗೇಲ್ ನನ್ನು ಹೊರಗಿಟ್ಟಿದ್ದರು. ಹಾಗೆ ಹೊರಗೆ ಕೂತು ವೀಕ್ಷಕನಂತೆ ಆಟ ನೋಡುತ್ತಿದ್ದ ಗೇಲ್ ಗೆ ಕೊಹ್ಲಿ, ವಿಲಿಯರ್ಸ್ ಆಟ ನೋಡಿ ಮೈ ಚಳಿ ಬಿಟ್ಟುಹೋಗಿತ್ತಂತೆ. ತನ್ನಲ್ಲೂ ಇಷ್ಟು ಶಕ್ತಿಯಿದ್ದರೂ ನಾನೇಕೆ ಚೆನ್ನಾಗಿ ಆಡುತ್ತಿಲ್ಲ. ನಾನೂ ಅವರಂತೆ ಸ್ಫೋಟಿಸಬೇಕು. ಅಭಿಮಾನಿಗಳು ನನ್ನಿಂದ ನಿರೀಕ್ಷಿಸಿದ್ದನ್ನು ಪೂರೈಸಬೇಕು ಎಂದು ದೃಢ ನಿರ್ಧಾರ ಮಾಡಿದ್ದರಂತೆ. ಕೂಡಲೇ ಕೊಹ್ಲಿ ಬಳಿ ತೆರಳಿ, ಗೀವ್ ಮಿ ಒನ್ ಚಾನ್ಸ್, ನೆಕ್ಸ್ಟ್ ಮ್ಯಾಚಿಂದ ನಿನ್ನ ಮನಸ್ಸನ್ನು ಮಾತ್ರವಲ್ಲ, ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಆಟವಾಡುತ್ತೇನೆ ಅಂದರಂತೆ. ಕೊಹ್ಲಿ ಖುಷಿಯಿಂದ ಕುಣಿದು ಕುಪ್ಪಳಿಸಿದರಂತೆ. ಮೊನ್ನೆ ಗೇಲ್ ಪಂಜಾಬ್ ವಿರುದ್ಧ ಅರ್ಧಶತಕ ಬಾರಿಸಿದಾಗ ಕೊಹ್ಲಿ, ಗೇಲ್ ಸಂಭ್ರಮಿಸಿದ್ದನ್ನು ನೀವೇ ನೋಡಿರಬಹುದು
POPULAR STORIES :
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video
ಮುಳುಗಲಿದೆ ಮುಂಬೈ..! ಕೋಲ್ಕತಾಕ್ಕೂ ಅಪಾಯ ತಪ್ಪಿದಲ್ಲ..!
ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?
ಕಾಮನ್ ಮ್ಯಾನ್ ಅಮಾಂಗ್ ದ ಅನ್ ಕಾಮನೆಸ್ಟ್..!
ಹೆಚ್ ಎಂ ರೇವಣ್ಣನಿಗೆ ಹತ್ತು ಕೋಟಿ ಕೇಳ್ದಾ..!? ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದು ಯಾರು..!?
ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?