ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!

Date:

ಬಣ್ಣದ ಬದುಕಿನ ಜೀವನ ಬಣ್ಣ ಕಳ್ಚೋದ್ದ್ರೊಳ್ಗೆ ಮುಗ್ದೋಗತ್ತೆ ಅಂತಾರೆ.ಆದ್ರೆ ಇಲ್ಲಿ ಒಬ್ಳ ಜೀವ್ನ ಬಣ್ಣದ ಬದುಕಿಂದ್ಲೆ ಆರಂಭವಾಗಿದೆ.ಅದೂ ತೆರೆಯ ಮರೆಯಲ್ಲಿ ಅನ್ನೋ ತರಹ: ನಿಜ!ತೆರೆಯ ಮೇಲೆ ಬಂದು ಹೋಗೊ ವಿಭಿನ್ನ ಮುಖಗಳ ಅರಿವು ನಮಗಿರುತ್ತೆ; ನಾವು ಅವ್ರ ಅಭಿಮಾನಿಗಳೂ ಆಗ್ಬಿಟ್ಟಿರ್ತೀವಿ, ಆದ್ರೆ ತೆರೆಯ ಹಿಂದೆ ಇರೋ ಮುಖಗಳ ಪರಿಚಯ ಅದೆಷ್ಟು ಜನ್ರಿಗಿರೋಕ್ ಸಾಧ್ಯ? ಈ ತೆರೆ ಮರೆಯ ಹಿಂದಿರೋ ಮುಖಗಳಲ್ಲಿ ಒಂದು ಮುಖ ಬಾಲಿವುಡ್ ನ ಖ್ಯಾತ ಸ್ಟಂಟ್ ಮಹಿಳೆ ಗೀತಾ ಟಂಡನ್.ಈ ಮಹಿಳೆಯ ಬಗ್ಗೆ ಹಾಗೂ ಅವಳ ಜೀವನ ಯಾನದ ಬಗೆಗಿನ ಒಂದು ಪುಟ್ಟ ಪರಿಚಯ ಇಲ್ಲಿದೆ ನೋಡಿ.
ಈ ಪ್ರಪಂಚ ನಾವು ತಿಳ್ಕೊಂಡಂಷ್ಟು ಸುಲಭ ಇಲ್ಲ, ಪ್ರಯಾಸ ಪಟ್ಟು ನಡ್ ದ್ರೇನೇ ಮುಂದಿನ ಹಾದಿ ಸಿಗೋಕೆ ಸಾಧ್ಯ ಅನ್ನೊದನ್ನು ಕೆಲವರು ಬೇಗನೆ ಅರ್ಥ ಮಾಡ್ಕೋತಾರೆ ಇನ್ನೂ ಕೆಲವ್ರು ನಿಧಾನವಾಗಿ. ಗೀತಾ ಈ ಸತ್ಯನ ಬೇಗನೆ ಅರ್ಥ ಮಾಡ್ಕೊಂಡವ್ರಲ್ಲಿ ಒಬ್ಬ್ಳು.ನಾವು ಅನೇಕ ಬಾರಿ ಈಕೆನ್ನ ಬಾಲಿವುಡ್ ಸಿನಿಮಾದಲ್ಲಿ ನೋಡಿರ್ತೀವಿ. ಆದ್ರೆ ಎಂದೂ ಗುರುತಿಸಿರಲಾರೆವು.ಸಮಯಕ್ಕೆ ತಕ್ಕಂತೆ ಈಕೆ ಬಾಲಿವುಡ್ ನ ಅನೇಕ ದೇವತೆಗಳ ಯಶಸ್ಸಿಗೆ ಪ್ರತ್ಯಕ್ಷವಾಗಿನೋ ಪರೋಕ್ಷವಾಗಿನೋ ಕಾರಣವಾಗಿದ್ದಾಳೆ; ಈ ನಿಟ್ಟಿನಲ್ಲಿ ಅವಳೂ ಒಂದು ಕಥೆ ಮಾಡುವುದರಲ್ಲಿ ಬ್ಯುಸಿಯಾಗ್ಬಿಟ್ಳು; ಇದು ನಮ್ಮಂತಹವರಿಗೆ ಸ್ಫೂರ್ತಿನೀಡಲು
ಕಾಯುತ್ತಿತ್ತು.ಇದೇ ನಮ್ಮ ಗೀತಾ ಕಥೆ,ಇಷ್ಟ್ರ ಮೇಲೆ ಈ ಕಥೆನ ಕೇಳ್ದೇ ಇರಲು ನಮ್ಗೆ ಸಾಧ್ಯನೇ ಇಲ್ಲ.
ಗೀತಾಳ ಜೀವನ ಯಾನ ತುಂಬಾ ಪ್ರಯಾಸದ್ದಾಗಿತ್ತು. ಪತಿ ಪತ್ನಿ ಸಂಬಂಧ ಏನೂ ಅಂತ ಅರ್ಥ ಆಗ್ದೇ ಇರೋ ವಯಸ್ಸಿನಲ್ಲೇ ಅವಳ ಮದುವೆಯಾಯ್ತು. ಅದೂ 14 ನೇ ವಯಸ್ಸಿಗೆ. ಗೀತಾ ಅನ್ನೋ ಪ್ರಕಾರ ತನ್ನ ಅತ್ತೆ ಅನ್ನಿಸ್ಕೊಂಡೋವ್ಳು ತನ್ನ ಮಗನಿಂದಲೇ ಬಲಾತ್ಕಾರ ಮಾಡೊಕೆ ಹೇಳ್ತಿದ್ಲು. ತನ್ನ ಗಂಡನಾದವ್ನು ತೀರ ಕುಡುಕ. ದಿನಾ ಕುಡ್ಕೊಂಡು ಬಂದು ಹೊಡಿಯೋನು ಬಲಾತ್ಕಾರ ಮಾಡೊವ್ನು. ಜೀವನ ಗೀತಾ ಪಾಲಿಗೆ ನರಕ. ಇನ್ನೂ ಅರಳ್ ಬೇಕಾಗಿರೋ ಮೊಗ್ಗು ಆವಾಗ್ಲೇ ಬಾಡಿ ಹೋಗೊಕೆ ತಯಾರಾಗಿತ್ತು. ಈ ನಡುವೆ ಗೀತಾ 3 ತಿಂಗಳ ಬಸುರಿ. ಗಂಡನ ಚಿತ್ರಹಿಂಸೆ ತಾಳಲಾರದೆ ಹೇಗೋ ಧೈರ್ಯ ಮಾಡಿ ಪೋಲಿಸ್ ಸ್ಟೆಷನ್ ಗೆ ಓಡಿ ಹೋದಾಗ ಅಲ್ಲಿ ಅವ್ರಿತ್ತ ಉತ್ತರ 10 ದಿನ ಅಕ್ಕನ ಮನೆಗೆ ಹೋಗಿರು, ಆಮೇಲೆ ಎಲ್ಲ ಸರಿ ಹೋಗುತ್ತೆ ಎಂಬುದಾಗಿತ್ತು. ಮತ್ತೆ ದಾರಿ ಕಾಣದೆ ಮನೆಗೆ ಹಿಂತಿರುಗಿದಳು. ದಿನಕಳೆಯುತ್ತಿದ್ದಂತೆ ಅವಳ ಪತಿಯ ಹಿಂಸೆ ತೀರ ಶೋಷಣೀಯ ವಾಗ್ತಾ ಹೋಯ್ತು. ಹೀಗೊಮ್ಮೆ ಅವಳ ಪತಿ ಕತ್ತಿಯಿಂದ ಹೊಡೆಯಲು ಹೋದಾಗ ಅವಳು ತನ್ನ 2 ಮಕ್ಕಳ ಜೊತೆಗೆ ರಸ್ತೆಯಲ್ಲಿ ಓಡತೊಡಗಿದಳು. ಕಡೆಗೆ ಅವಳಿಗೆ ಅಚಾನಕ್ಕಾಗಿ ಗುರುದ್ವಾರದ ಆಶ್ರಯ ಪಡೆಯಬೇಕಾಗಿ ಬಂತು. ಆಗ ಗೀತಾಳ ವಯಸ್ಸು ಕೇವಲ 20.
ಸಾಕಷ್ಟು ವಿದ್ಯಾಭ್ಯಾಸ ಇಲ್ಲದ ಕಾರಣದಿಂದ ಕೆಲಸ ಸಿಗುವಂತಿರಲಿಲ್ಲ. ಕೆಲಸಕ್ಕಾಗಿ ಎನೂ ಮಾಡಲು ತಯಾರಿದ್ದ ಗೀತ ಎದುರಿಸಿದ ಎಲ್ಲಾ ಸಂದರ್ಶನದಲ್ಲೂ ಕೊಟ್ಟ ಉತ್ತರ “ಮೈನ್ ಕುಛ್ ಭೀ ಕಾಮ್ ಕರ್ನೆಕೇಲಿಯೇ ತಯ್ಯಾರ್ ಹೂಂ”ಎಂಬುದಾಗಿತ್ತು. ಅವಳಿಗೇ ಅರಿವಿಲ್ಲದೇ ಅವಳ ಈ ಮಾತು ಅವಳ ಜೀವನ್ದಲ್ಲಿ ದೊಡ್ದ ಬದಲಾವಣೆಗೆ ನಾಂದಿ ಹಾಡಿತು. ಮತ್ತೆ ಗಂಡನ್ನ ತೊರೆದು ಹೊಸ ಜೀವನಕ್ಕೆ ಕಾಲಿಟ್ಟ ಗೀತಾಳ ಬದುಕು ಈಕೆ ಭಾರೀ ಅವಕಾಶ ಪಡೆಯುವಂತಾಯ್ತು. ಕೆಲವೊಂದು ಸ್ನೇಹಿತೆಯರ ಸಲಹೆಯಂತೆ ಸಿನಿಮಾಗಳಲ್ಲಿ ಆಕ್ಷನ್ ಪಾತ್ರ ಮಾಡಲು ಒಪ್ಪಿಕೊಂಡಳು.
ಅಲ್ಲಿಂದಾಕೆ ಹಿಂತಿರುಗಿ ನೋಡಿದ್ದೇ ಇಲ್ಲ. ಒಂದರ ಮೇಲೆ ಒಂದು ಆಕ್ಷನ್ ಸಿನಿಮಾದಲ್ಲಿ ಪಾತ್ರಮಾಡಿ, ಕತ್ರೀನ, ದೀಪಿಕಾ, ಬಿಪಾಶ ಮತ್ತು ಪರಿಣೀತಿ ಚೊಪ್ರ ಮೊದಲಾದವರ ಪಾತ್ರಗಳಿಗೆ ತನ್ನ ವಿಭಿನ್ನ ಸ್ಟಂಟ್ ಗಳಿಂದ ಜೀವ ತುಂಬಿದಳು.ಈಗಿನ ಸಿನಿಮಾದಲ್ಲಿ ಕಟ್ಟಡದಿಂದ ಜಿಗಿಯುವುದಾಗಲೀ, ಮೋಟಾರ್ ಬೈಕ್ ಠಕ್ಕರ್ ಆಗಲೀ ಇಲ್ಲವೇ ಕಾರ್ ರೇಸ್ ಆಗಲೀ ಯಾವುದೇ ಪಾತ್ರಕ್ಕೂ ಈಕೆ ಸೈ ಅನ್ನಿಸಿಕೊಂಡಿದ್ದಾಳೆ.
ರೊಹಿತ್ ಶೆಟ್ಟಿ ಭಾಗವಹಿಸಲು ಅವಕಾಶ ನೀಡಿದ “ಖತ್ರೋಂ ಕೇ ಕಿಲಾಡಿ ” ಯಿಂದ ಈಕೆ ಭಾರೀ ಅವಕಾಶ ಪಡೆಯುವಂತಾಯ್ತು; ಇದು ಟಿ.ವಿ ಯ ಅತ್ಯಂತ ಭಯಾನಕ ಸ್ಟಂಟ್ ಷೊ ಅಗಿರುವುದು. ರೋಹಿತ್ ಶೆಟ್ಟಿನ ತನ್ನ ಜೀವನದ ದೇವರು ಎನ್ನುತ್ತಾಳೆ ಗೀತಾ. ಇಲ್ಲಿ ಅವಳಿಗೆ ಭಾರಿ ಸಂಭಾವನೆ ಲಭಿಸಿ ಸ್ವಂತ ಮನೆ ಖರೀದಿಸಿದಳು. ನಿರ್ಭಯದ ಹೆಣ್ಣೀಕೆ ಎಂದೂ ಸಾಬೀತು ಮಾಡಿಕೊಟ್ಟಳು.
ಈಗ ಗೀತಾಳ ವಯಸ್ಸು 33.ಗೀತಳ ಕನಸು ಏನಂದ್ರೆ ತಾನು ಬಾಲಿವುಡ್ ನ ಮೊತ್ತ ಮೊದಲ ಮಹಿಳಾ ಆಕ್ಷನ್ ನಿರ್ದೇಶಕಳಾಗಬೇಕೆಂಬುದಾಗಿದೆ ಹಾಗೂ ತನ್ನ 2 ಮಕ್ಕಳಿಗೆ ಅತೀ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ ಅವರ ಭವಿಷ್ಯವನ್ನು ಸುಂದರ ಮಾಡುವುದಾಗಿದೆ. ತನ್ನಿಂದ ಕಲಿಯಲಾಗದ ವಿದ್ಯೆಯನ್ನು ಅವರ ಮೂಲಕ ನೋಡುವಾಸೆ ಆಕೆಗೆ.
ಸಮಾಜದಲ್ಲಿ ಎಲ್ಲ ರೀತಿಯ ದೌರ್ಜನ್ಯಕ್ಕೆ ಬಲಿಯಾದ ಎಲ್ಲಾ ಮಹಿಳೆಯರಿಗೂ ಗೀತಾಳ ಪುಟ್ಟ ಸಂದೇಶವೇನೆಂದರೆ “ಜೀವನದಲ್ಲಿ ಸೋಲಬೇಡಿ,ನಿಮ್ಮ ಕೊನೆ ಕ್ಷಣದ ವರೆಗೂ ಹೋರಾಡಿ. ಒಮ್ಮೆ ಎಲ್ಲ ಸಂಕೋಲೆಗಳಿಂದ ಬಂಧ ಮುಕ್ತವಾದ ಮೇಲೆ ಜೀವನ ಒಂದು ಸುಂದರ ವಸ್ತು ಎಂಬುದನ್ನು ನೀವೆ ಕಂಡು ಕೊಳ್ಳಲು ಆರಂಭಿಸ್ತೀರಿ.ತಾಳ್ಮೆಯಿಂದಿರಿ,ಒಳ್ಳೇ ದಿನಗಳು ನಿಮ್ಮದಾಗುತ್ತವೆ.ಎಲ್ಲ ಹೆಣ್ಣು ಮಕ್ಕಳಿಗೂ ಸ್ಫೂರ್ಥಿಯಾಗಿರುವ ಗೀತಳಿಗೆ ನಾವು ಮನದುಂಬಿ ಶುಭ ಹಾರೈಸೋಣ.

  • ಸ್ವರ್ಣಲತ ಭಟ್

POPULAR  STORIES :

ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!

ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!

7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!

ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ

ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?

ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!

ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?

ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!

ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್

ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...