ಅಮೆರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಎಚ್ ಡಬ್ಲ್ಯೂ ಬುಷ್ ವಿಧಿವಶ..
ರಷ್ಯಾ ಮತ್ತು ಅಮೆರಿಕಾ ನಡುವಿನ ಶೀತಲ ಸಮರಕ್ಕೆ ಅಂತ್ಯ ಹಾಡಲು ಪ್ರಯತ್ನ ಪಟ್ಟಿದ್ದ, 2ನೇ ಮಹಾಯುದ್ಧವನ್ನ ಸಮರ್ಥವಾಗಿ ಎದುರಿಸಿ, ನಾಯಕರ ನಾಯಕ ಎಂದೇ ಗುರುತಿಸಿಕೊಂಡಿದ್ದ ಅಮೆರಿಕಾದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್ ಎಚ್.ಡಬ್ಲ್ಯು ಬುಷ್ (94) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.. ಈ ವಿಚಾರವನ್ನ ಬುಷ್ ಕುಟುಂಬದ ವಕ್ತಾರರಾದ ಜಿಮ್ ಮ್ಯಾಗ್ರಥ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ…
1989 ರಿಂದ 93ರ ವರೆಗೆ ಆಡಳಿತ ನಡೆಸಿದ್ದ ಬುಷ್ 41ನೇ ಅಮೆರಿಕಾ ಅಧ್ಯಕ್ಷರಾಗಿ ಹಲವು ಪ್ರಮುಖ ತೀರ್ಮಾನಗಳನ್ನ ಕೈಗೊಂಡಿದ್ರು.. ತನ್ನ ಪತ್ನಿ ಬಾರ್ಬರಾ ರನ್ನ ಹೆಚ್ಚು ಪ್ರೀತಿಸಿದ್ದ ಬುಷ್, ಈ ಹಿಂದೆ ಅಂದ್ರೆ ಏಪ್ರಿಲ್ ನಲ್ಲಿ ಅವರನ್ನ ಕಳೆದುಕೊಂಡಿದ್ರು.. ಮಡದಿ ಇಲ್ಲದ ನೋವಿನಲ್ಲೇ ಹಾಸಿಗೆ ಹಿಡಿದಿದ್ದ ಬುಷ್ ಹೂಸ್ಟನ್ ಮೆಥೋಡಿಸ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ರು.. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.. ಬುಷ್ ಅವರಿಗೆ 5 ಜನ ಮಕ್ಕಳು 17 ಮೊಮ್ಮಕ್ಕಳು ಇದ್ದಾರೆ..