ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?

Date:

ಕತ್ರಿಗುಪ್ಪೆಯಲ್ಲಿ ಯುವತಿಯನ್ನು ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಕ್ಯಾಬ್ ಡ್ರೈವರ್ ಅಕ್ಷಯ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ಅವನ ವಿಚಾರಣೆಯೂ ನಡೆಯುತ್ತದೆ. ಕೋರ್ಟ್ ಶಿಕ್ಷೆಯನ್ನೂ ಕೊಡುತ್ತದೆ. ಅಲ್ಲಿಗೆ ಇಂತಹ ಘಟನೆಗಳಿಗೆ ಕಡಿವಾಣ ಬೀಳುವುದಿಲ್ಲ. ಮಹಿಳೆಯರು ಒಂಟಿಯಾಗಿ ರಾತ್ರೋರಾತ್ರಿ ಅಡ್ಡಾಡುವುದನ್ನು, ರಕ್ಕಸರ ಕೈಗೆ ಅನಾಯಾಸವಾಗಿ ತಗಲಾಕಿಕೊಳ್ಳುವುದನ್ನು ಕಡಿಮೆ ಮಾಡದ ಹೊರತು ಇಂತಹ ಕ್ರೈಂಗಳಿಗೆ ಕಡಿವಾಣ ಬೀಳುವುದಿಲ್ಲ. ಎರಡನೇ ಪಾಳಿ, ರಾತ್ರಿ ಪಾಳಿ ಕೆಲಸ ಮಾಡುವ, ರಾತ್ರಿಯ ಪಾರ್ಟಿಗಳಿಗೆ ಅಡ್ಡಾಡುವ, ಕೆಣಕುವಂತಹ ಡ್ರೆಸ್ ಗಳಿರಲಿ, ಯಾವುದೇ ತೆರನಾದ ಸಂದರ್ಭಗಳಿರಲಿ ಹೆಣ್ಣುಮಕ್ಕಳು ಒಂಟಿಯಾದಷ್ಟು ಅಪಾಯ ಗ್ಯಾರಂಟಿ. ಇವತ್ತಿಗೆ ಹೆಣ್ಣು ಗಂಡಿಗೆ ಸರಿಸಮಾನಳು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅವಳು ಮಾನಸಿಕವಾಗಿ ಗಂಡಿಗೆ ಸರಿಸಮಾನಾಗಿ ನಿಲ್ಲುತ್ತಾಳೆಯೇ ಹೊರತು ದೈಹಿಕವಾಗಿ ಅಲ್ಲ. ಯಾರೋ ಬೆರಳೆಣಿಕೆಯ ಹೆಣ್ಣುಮಕ್ಕಳು ಕರಾಟೆಪಟ್ಟುಗಳನ್ನು, ಇನ್ನಿತರೆ ರಕ್ಷಣಾತ್ಮಕ ತಂತ್ರಗಳನ್ನು ಕಲಿತಿರುತ್ತಾಳೆ. ಈ ಕೆಟಗರಿಯ ಹೆಣ್ಣುಮಕ್ಕಳು ವಿದೇಶದಲ್ಲಿ ಹೆಚ್ಚಾಗಿ ಕಾಣಬಹುದಷ್ಟೆ. ಭಾರತದ ಹೆಣ್ಣುಮಕ್ಕಳು ಈ ರೀತಿಯ ರಕ್ಷಣಾತ್ಮಕ ತಂತ್ರಗಳಿಗೆ ಒಗ್ಗಿಕೊಂಡಿಲ್ಲ. ಇವತ್ತಿಗೆ ಬೆಳೆದ ನಗರಗಳಲ್ಲಿ ಹೆಣ್ಣುಮಕ್ಕಳ ಸ್ವೇಚ್ಛಾಚಾರಗಳು ಮಿತಿಮೀರಿವೆ. ಪ್ರತಿದಿನ ಪೊಲೀಸರು ಸೇರಿದಂತೆ ಅನೇಕರ ಜೊತೆ ಮಧ್ಯರಾತ್ರಿ ರಸ್ತೆ ಮಧ್ಯೆ ಜಗಳಕ್ಕೆ ನಿಲ್ಲುವ ಹೆಣ್ಣುಮಕ್ಕಳನ್ನು ಕಾಣುತ್ತೇವೆ.

ಸೋದರಿಯರಂತ ಹೆಣ್ಣುಮಕ್ಕಳಿಗೆ ಬುದ್ಧಿಮಾತನ್ನು ಹೇಳುವುದಾದರೇ, ಸಮಾಜ ನಿಮ್ಮನ್ನು ಮುಂಚೂಣಿಗೆ ತಂದು ನಿಲ್ಲಿಸಿದೆ. ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವ ಛಾತಿಯಿದ್ದರೇ ಮಾತ್ರ ನೀವು ಸೇಫ್. ಎಲ್ಲಾ ಸಮಯದಲ್ಲೂ ಪೊಲೀಸರು, ಕುಟುಂಬಸ್ಥರು, ಬಾಯ್ಫ್ರೆಂಡ್ಗಳು ಕಾವಲು ಕಾಯುವುದಿಲ್ಲ. ನಿಮ್ಮ ಮೈಮರೆಯುವಿಕೆಗೆ ಅವರನ್ನು ಹೊಣೆ ಮಾಡುವುದು ಅಷ್ಟು ಸಮಂಜಸವಲ್ಲ. ನಿಮ್ಮಲ್ಲಿ ಒಬ್ಬ ಕಿತ್ತೂರು ಚೆನ್ನಮ್ಮ ಇದ್ದರೇ ಮಾತ್ರ ಲೀಲಾಜಾಲವಾಗಿ ಅಡ್ಡಾಡಿ…! ಜೊತೆಗೆ ಯಾರಾದರೂ ಇರಲಿ ಎನ್ನುವುದಾದರೇ ಅದಕ್ಕೂ ಸಮಯ- ಸಂದರ್ಭ ಎನ್ನುವುದಿದೆ. ಏಕೆಂದರೇ ದೆಹಲಿಯಲ್ಲಿ ನಿರ್ಭಯಳ ಮೇಲೆ ಘೋರ ಅತ್ಯಾಚಾರವಾದಾಗ ಅವಳ ಜೊತೆ ಆಕೆಯ ಬಾಯ್ಫ್ರೆಂಡ್ ಇದ್ದ. ಆದರೂ ಅವಳ ಮೇಲೆ ಅತ್ಯಾಚಾರ ನಡೆಯಿತಲ್ಲವೇ..? ಬಾಯ್ಫ್ರೆಂಡ್ಗಳು, ಕುಟುಂಬಸ್ಥರು ಇದ್ದಮಾತ್ರಕ್ಕೆ ಕ್ರೈಂಗಳು ನಡೆಯುವುದಿಲ್ಲ ಎನ್ನುವುದು ಮೂರ್ಖತನ. ಏಕೆಂದರೇ ಬದುಕು ಸಿನಿಮಾವಲ್ಲ. ಅಲ್ಲಿ ಹತ್ತು ಜನರನ್ನು ಒಬ್ಬ ಹೀರೋ ಹೊಡೆಯುತ್ತಾನೆ, ನಿಜ ಬದುಕಿನಲ್ಲೂ ಹೀಗಾಗುತ್ತೆ ಎಂಬ ಭ್ರಮೆ ಬೇಡ. ಮಾಲಾಶ್ರೀ ಫೈಟು ನೋಡಿ, ನಾನು ಫೈಟ್ ಮಾಡ್ತೀನಿ ಅಂತ ಹೊರಡುವ ಬುದ್ಧಿಹೀನ ಆಲೋಚನೆಗಳು ಬೇಡ. ವಾಸ್ತವ ಅರ್ಥ ಮಾಡಿಕೊಳ್ಳಿ. ಹೊತ್ತಿಗೆ ಮುಂಚೆ ಮನೆ ಸೇರಿಕೊಳ್ಳುವುದರಿಂದ ತಕ್ಕಮಟ್ಟಿಗಾದರೂ ನಿಮ್ಮ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಡಿವಾಣ ಹಾಕಿಕೊಳ್ಳಬಹುದು. ಇನ್ನು ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳು ರಾತ್ರಿ ಹೊತ್ತು ಸೇಫಾಗಿ ಮನೆ ಸೇರಲು ಕೆಲಸ ಮಾಡುವ ಕಂಪನಿಗಳ ಜವಬ್ಧಾರಿಯಾಗಿರುತ್ತದೆ. ಅವರು ಸಹಕರಿಸದಿದ್ದರೇ ಪ್ರತಿಭಟಿಸಿ, ನ್ಯಾಯ ಕೇಳಿ..? ಅವರ ಮೇಲೂ ಕೇಸ್ ಹಾಕಬಹುದು. ಕೋರ್ಟ್ ಆದೇಶಗಳಿವೆ. ಕತ್ರಿಗುಪ್ಪೆ ಕೇಸಿನಲ್ಲಿ ದೌರ್ಜನ್ಯ ಅನುಭವಿಸಿದ ಯುವತಿಯನ್ನು, ಅವಳು ವಾಸವಿದ್ದ ಪಿಜಿಯಿಂದ ಅನತಿ ದೂರದಲ್ಲಿ ಆಕೆಯ ಬಾಯ್ ಫ್ರೆಂಡ್ ಡ್ರಾಪ್ ಮಾಡಿದ್ದ. ಅದೇ ಅವನು ಪಿಜಿ ಗೇಟ್ ಬಳಿ ಬಿಟ್ಟರೇ ಆಗುತ್ತಿರಲಿಲ್ಲವೇ..?. ಅಷ್ಟಕ್ಕೂ ಆತ ಬಿಟ್ಟುಹೋದ ನಂತರ ಪಿಜಿ ಎದುರಿಗೆ ನಿಂತು ರಾತ್ರಿ ಒಂಬತ್ತು ಮುಕ್ಕಾಲರ ಹೊತ್ತಿಗೆ ಫೋನಿನಲ್ಲಿ ಮಾತಾಡಿಕೊಂಡು ನಿಲ್ಲುವ ಬದಲು ಪಿಜಿಗೆ ಹೋಗಿಯೇ ಮಾತಾಡಬಹುದಿತ್ತಲ್ಲವೇ..? ಇದೇನಪ್ಪಾ ಹಿಂಗೆಲ್ಲಾ ಮಾತಾಡ್ತಾರೆ ಇವ್ರು ಅಂತ ಸಿಟ್ಟಾಗಬೇಡಿ. ನಮ್ಮ ರಕ್ಷಣೆ, ನಮ್ಮ ಹೊಣೆ. ನಮ್ಮ ನಮ್ಮ ತೋಳ್ಬಲದ ಮೇಲೆ ನಂಬಿಕೆಯಿದ್ದರೇ ಮಾತ್ರ ಮುಂದಿನ ಹೆಜ್ಜೆಯಿಡಿ..!

https://www.youtube.com/watch?v=EzlLasjv9ME

  •  ರಾ ಚಿಂತನ್.

POPULAR  STORIES :

ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!

ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!

ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..

ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗು ಬಿಳಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಬಾಲ್ ಉಪಯೊಗಿಸುವುದರ ಉದ್ದೇಶವೇನು?

ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ

5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!

ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

Share post:

Subscribe

spot_imgspot_img

Popular

More like this
Related

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ?

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ? ದೇಹದ ಮೇಲೆ ಹುಟ್ಟುಮಚ್ಚೆಗಳು ಇರುವುದು...

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...