ನಾವು ಹುಡುಗಿಯರೇ ಹೀಗೆ! ಪ್ರೀತಿ ಇದ್ದರೂ, ಹುಡುಗರೇ ಹೇಳಲಿ ಅಂತ ಕಾಯ್ತಾ ಇರ್ತೀವಿ!

Date:

ಹೇಗೆ ಹೇಳಲಿ, ಅವನೆಂದರೆ ಇಷ್ಟ! ಅವನೇ ಹೇಳುತ್ತಾನೆ ಎಂದು ಕಾದು ಕಾದು ಸಾಕಾಗಿದೆ! ನಾನೇ ತಡಮಾಡದೇ ಹೇಳಿ ಬಿಡಲೇ? ಇಲ್ಲ, ಅವನೇ ಹೇಳುತ್ತಾನೆ!
ಅಲ್ಲಿ ತನಕ ಕಾಯುವ ತಾಳ್ಮೆಯೂ ಈಗ ನನ್ನಲಿಲ್ಲ! ಅವನೋ ನನ್ನ ಮಾತನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ! ಕೆಲವೊಮ್ಮೆ ಅರ್ಥವಾಗುವಂತೆಯೇ ನಾನು ಪ್ರೀತಿ ನಿವೇಧಿಸಿಕೊಂಡರೂ ಅವನು ಮಾತ್ರ,ಗೊತ್ತಿದ್ದರೂ ಗೊತ್ತಿಲ್ಲದಂತೆ ನಾಟಕ ಆಡುತ್ತಾನೆ! ಎಷ್ಟೇ ಆದರೂ ನನ್ನ ಹೃದಯದಿ ಪ್ರೀತಿ ಚಿತ್ತಾರ ಬಿಡಿಸಿದ ಕಲಾವಿದ ಅವನಲ್ಲವೇ?
ಅವನು, ಸ್ವೀಕಾರ್. ತುಂಬಾ ದಿನದಿಂದ ಇಷ್ಟು ಪಡುತ್ತಿದ್ದೇನೆ! ಅವನೂ ಇಷ್ಟಪಟ್ಟಿದ್ದಾನೆ! ಅದು, ಅವನ ಮಾತು, ಚಡಪಡಿಕೆಯಲ್ಲೇ ಅರ್ಥವಾಗುತ್ತೆ! ಆದರೆ, ಹೇಳಿಕೊಳ್ಳಲು ದೈರ್ಯವಿಲ್ಲದೆ ಸುಮ್ಮನಿದ್ದಾನೆ ಅಂತಲೂ ಗೊತ್ತು! ತಾಳಲಾಗದೆ, ನಾನೇ ಹೇಳಿ ಬಿಡಲೇ? ಇಲ್ಲ, ನಾನೇ ಪ್ರೀತಿ ನಿವೇಧಿಸಿಕೊಂಡರೆ ಕ್ಷಣ ಮಾತ್ರದಿ ಒಪ್ಪಿ, ಅಪ್ಪಿ ಮುದ್ದಾಡಿ.ಬಿಡುತ್ತಾನೆ! ಅವನ ಸಂತೋಷಕ್ಕೆ ಪರಾವೆ ಇರಲ್ಲ!
ಇನ್ನೂ ಕಾಯತ್ತೇನೆ, ಕಾಯಿಸುತ್ತೇನೆ! ಅವನೇ ಹೇಳುತ್ತಾನೆ, ಹೇಳಿದಾಗಲೂ ಸ್ವಲ್ಪ ಸಮಯ ಆಟ ಆಡಿಸುತ್ತೇನೆ! ಅವನ ಚಡಪಡಿಕೆ, ಕುತೂಹಲ, ಒದ್ದಾಟ ನೋಡಲು ಮತ್ತೆ ಆಗುತ್ತದೆಯೇ? ಇಲ್ಲ!
ಅದಕ್ಕೇ ಸ್ವಲ್ಪ ದಿನ ಈಗಿನಂತೆ ಕಳೆದು ಬಿಡುತ್ತೇನೆ!
ಅವನ ಕೋಪ, ಅವನ ಸಿಟ್ಟು ಎಲ್ಲವೂ ಒಂಥರಾ ಚಂದ! ಇದ್ದಕ್ಕಿಂದ್ದಂತೆ ಕೋಪಿಸಿಕೊಳ್ಳುತ್ತಾನೆ! ಕ್ಷಣದಲ್ಲೇ ಎಲ್ಲಾ ಮರೆತು ಕ್ಷಮಿಸಿ ಬಿಡೇ ಎಂದು ಪರಿ ಪರಿ ಬೇಡುತ್ತಾನೆ! ಆಗ, ತಕ್ಷಣಕ್ಕೆ ನಾನು ಮೊದಲಿನಂತೆ ಇರಲಾರೆ, ಕಾರಣ ಅವನಂತೆ ತಕ್ಷಣಕ್ಕೆ ರಾಜಿ ಆದರೆ ಮಜಾ ಇರಲ್ಲ! ತಮಾಷೆ ಇರಲ್ಲ! ಅವನೊಳಗಿನ ನನ್ನ ಪ್ರೀತಿ ಅರ್ಥವಾಗಲ್ಲ! ನಾನು ಕೋಪಿಸಿಕೊಂಡಿದ್ದೇನೆ ಎಂದಾದಾಗ ಮಾತ್ರ ಪ್ರೀತಿ ಮಾತಾಡ್ತಾನೆ! ಹೀಗೆ ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾನೆಂದು ತುದಿಕಾಲಲ್ಲಿ ಕಾದರೂ ಅವನು ಮಾತ್ರ ಜಪ್ಪಯ್ಯ ಅಂದರೂ ನಾನು ಬಯಸಿರುವ ಆ ಮೂರು ಗೋಲ್ಡನ್ ವರ್ಡ್ಸ್ ಹೇಳಿಲ್ಲ! ಸದ್ಯದಲ್ಲೇ ಅವನೇ ಹೇಳುತ್ತಾನೆ! ಅಲ್ಲಿಯವರೆಗೂ ಕೋಪ ಬಂದಂತೆ ನಟಿಸುತ್ತಲೇ ಇರುತ್ತೇನೆ!
ನೀವು ನನ್ನ ಈ ಹಠ, ತುಂಟಾಟ ನೋಡಿ, ಕೇಳಿ ಬೈಕೊಳ್ಳಲೂಬಹುದು! ನೆನಪಿರಲಿ, ಇದು ನನ್ನೊಬ್ವಳ ಗುಣ ವಲ್ಲ ಬಹುತೇಕ ನಮ್ಮಂಥಾ ಹುಡುಗಿಯರೇ ಹೀಗೆ!
ನಮಗೂ ಒಂದು ಆಸೆ ಇರುತ್ತೆ, ನಮಗೂ ಅನ್ನುವುದಕ್ಕಿಂತ ನನ್ನ ಆಸೆ, ಆಸಕ್ತಿ ಹೇಳಿಬಿಡುತ್ತೇನೆ!
ನನಗೆ ಸ್ವೀಕಾರ್ ಅಂದ್ರೆ ತುಂಬಾ ಇಷ್ಟ! ಅವನ ಮೂಗ ತುದಿಯಲ್ಲಿಯೇ ಇರುವ ಕೋಪ ಇಷ್ಟವಾದರೂ ಅದನ್ನು ಅವನು ಬಿಡಲೇ ಬೇಕು! ಯೋಚಿಸದೆ, ಸಿಟ್ಟಿನಿಂದ ಮಾತಾಡುವುದನ್ನು, ಅರ್ಥಮಾಡಿ ಕೊಳ್ಳದೆ ಅವನಷ್ಟಕ್ಕೆ ಅವನೇ ಕಲ್ಪಿಸಿಕೊಂಡು ಬೈಯುವುದನ್ನು ಬಿಡಲೇ ಬೇಕು! ಅವನ ಕೋಪ ಅವನಿಗೆ ಕೆಲವೊಂದಿಷ್ಟು ಒಳ್ಳೆಯದನ್ನು ಮಾಡಿದೆ! ಆದರೆ,ಅದಕ್ಕಿಂತ ಹೆಚ್ಚಾಗಿ ಕಳೆದುಕೊಂಡಿದ್ದಾನೆ! ಗೊತ್ತು, ಕೋಪ ಕ್ಷಣಿಕ ಅವನ ತಾಳ್ಮೆ ಗೆ ಸರಿಸಾಟಿ ಇಲ್ಲ! ಮಗುವಿನಂತೆ, ತಕ್ಷಣ ತಲೆಬಾಗುತ್ತಾನೆ!
ಇವೆಲ್ಲ ಮುಂದೆ ಮದುವೆ ಆದ ಮೇಲೆಯೂ ಕೋಪ ಮಾಡಿಕೊಳ್ಳುವುದು, ನಾನೂ ಮಾತು ಆಡುವುದು ಕೆಟ್ಟ ಗಳಿಗೆಯಲಿ ದೂರಾಗುವುದು ಬೇಡ! ನನಗೆ ಎಂದೂ ನನ್ನ ಸ್ವೀಕಾರ್ ನನ್ನ ಜೊತೆಯಲ್ಲೇ ಇರಬೇಕು ಅನ್ನುವ ಆಸೆ! ಅವನ ಕೋಪ ಕಡಿಮೆ ಆಗಲಿ ಎಂದು ಅವನು ಕೋಪಿಸಿಕೊಂಡಾಗಲೆಲ್ಲಾ ದೂರಾಗುವ ಮಾತಾಡುತ್ತೇನೆ!
ಇನ್ನು, ಅವನು ಸ್ನೇಹಕ್ಕೆ ಬೆಲೆ.ಕೊಡುತ್ತಾನೆ! ಅದು ನನಗೆ ಇಷ್ಟ! ತನ್ನ ಹುಡುಗಿ ಬೇರೆ ಹುಡುಗರ ಜೊತೆ ಚ್ಯಾಟ್ ಮಾಡುವುದನ್ನು ಹೆಚ್ಚಿನ ಹುಡುಗರು ಇಷ್ಟ ಪಡಲ್ಲ! ಇವನು ಹಾಗಲ್ಲ, ಫ್ರೆಂಡ್ ಶಿಪ್ ಲಿ ಇವೆಲ್ಲಾ ಮಾಮೂಲು ಅಂತ ಸುಮ್ನಾಗ್ತಾನೆ! ನೀನು ಯಾರ ಜೊತೆಯಲ್ಲೇ ಚ್ಯಾಟಿಂಗ್ ಮಾಡಬಹುದು, ಆದ್ರೆ ನನ್ನಷ್ಟು ಕ್ಲೋಸ್ ನಿನಗಾರೂ ಇಲ್ಲ ಅಲ್ವಾ? ಅಂತ ಪ್ರಶ್ನಿಸುತ್ತಾನೆ! ಇಷ್ಟಾದರೂ ನೇರವಾಗಿ ಐ ಲವ್ ಯೂ ಅನ್ನಲಾರ!
ನಾನಾ, ಈಗಲಾದರೂ ತಡೆಯಲಾಗದೆ ಐ ಲವ್ ಯೂ ಅಂತಾನಂತ ಕಾತುರದಿ ಎದುರು ನೋಡಿದರೂ ಪ್ರಯೋಜನವಿಲ್ಲ! ನಿಜ ಹೇಳಲೇ ನಾನು ಅವನ ಜೊತೆ ಚ್ಯಾಟ್ ಮಾಡಿದ ಹಾಗೆ, ಮಾತಾಡಿದಹಾಗೆ ಯಾವ ಹುಡುಗರ ಜೊತೆಯೂ ಮಾತಡಲ್ಲ! ಚ್ಯಾಟಿಂಗ್ ಮಾಡಲ್ಲ! ಅವನ ಎದುರು ಸುಮ್ಮನೇ ಹೇಳುತ್ತೇನೆ! ನಾನು ಚಾಪೆ ಕೆಳಗೆ ನುಸುಳುದರೆ, ಅವನು ರಂಗೋಲಿ ಕೆಳಗೆ ನುಸುಳಿ, ಮೆಲ್ಲಗೇ ಜಾರಿ ಕೊಳ್ಳುತ್ತಾನೆ!
ನಾನೂ ಇನ್ನು ಕೆಲವು ದಿನ ಹೀಗೆ ಆಟ ಆಡಿಸುತ್ತೇನೆ! ಮತ್ತೆ, ನಾನೇ ಪ್ರೀತಿಯನ್ನು ನಿವೇಧಿಸಿಕೊಳ್ಳುತ್ತೇನೆ. !

  • ಸುಕನ್ಯಾ

If you Like this Story , Like us on Facebook  The New India Times

POPULAR  STORIES :

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!

ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!

ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story

“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”

ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...