ಈಗೆಲ್ಲಾ ಯುವತಿಯರು ತಮಗಿಂತ ಐದಾರು ವರ್ಷ ದೊಡ್ಡವರನ್ನು ವರಿಸಲು ಹಿಂದೆ ಮುಂದೆ ನೋಡುವ ಕಾಲಘಟ್ಟದಲ್ಲಿ ಇಲ್ಲೋರ್ವ ಯುವತಿ 68ರ ಆಸುಪಾಸಿನ ಮುದುಕನಿಗೆ ವಿವಾಹವಾಗಿ ಎಲ್ಲರಿಗೂ ಶಾಕ್ ನೀಡಿದ್ದಲ್ಲದೇ ಅಜ್ಜನ ಸತ್ಯಾಂಶ ಬಯಲಾಗಿ ಆಕೆಯೂ ಫುಲ್ ಶಾಕ್ ಆಗಿದಾಳೆ ನೋಡಿ.. ಆನ್ಲೈನ್ ಮೂಲಕ ಚಿರ ಪರಿಚಿತರಾಗಿ, ಇಬ್ಬರ ನಡುವೆ ಲವ್ವಿ ಡವ್ವಿ ಶುರುವಾಗಿ ಅದು ಮದುವೆಯವರೆಗೂ ಹೋಗಿತ್ತಲ್ಲದೇ ವಿವಾಹದ ಬಳಿಕ ತಾನು ಮದುವೆ ಆದದ್ದು ತನ್ನ ಸ್ವಂತ ಅಜ್ಜನನ್ನೇ ಎಂದು ಗೊತ್ತಾಗಿ ಅಘಾತಕ್ಕೊಳಗಾಗಿದ್ದಾಳೆ ಈ 24ರ ಯುವತಿ..
ಅಮೇರಿಕನ್ ಯುವತಿಯಾದ ಈಕೆ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದಳು. ತನ್ನ ಗಂಡನ ಮೊದಲ ಹೆಂಡತಿ ಅಂದರೆ ಅಜ್ಜನ ಮೊದಲ ಹೆಂಡತಿ ಹಾಗೂ ಮಕ್ಕಳ ಫೋಟೋ ಆಲ್ಭಮ್ ನೋಡುತ್ತಿದ್ದ ಈ ಯುವತಿಗೆ ಆ ಫೋಟೋದಲ್ಲಿ ತನ್ನ ಅಪ್ಪನ ಫೋಟೋ ಇರೋದನ್ನ ನೋಡಿ ಅಚ್ಚರಿಯಾಗಿದೆ. ವಿಷಯ ತಿಳಿದಾಗ ತನ್ನ ಗಂಡನ ಮಗ ಬೇರ್ಯಾರೂ ಅಲ್ಲ ನಮ್ಮ ಅಪ್ಪ ಎಂದು ಗೊತ್ತಾಗಿ ಬೆಚ್ಚಿಬಿದ್ದಿದ್ದಾಳೆ. ತನ್ನ ಸ್ವಂತ ಅಜ್ಜನನ್ನೆ ಮದುವೆಯಾಗಿ ಸಂಸಾರ ನಡೆಸುತ್ತಿರುವ ಸತ್ಯಾಂಶ ಫೋಟೋ ನೋಡಿ ಬಯಲಾಗಿದೆ ನೋಡಿ.
ನನ್ನ ಮೊದಲನೇ ಪತ್ನಿ ನನ್ನನ್ನು ತೊರೆದು ದೂರ ಹೋದಳು. ಆಕೆಯನ್ನು ಎಷ್ಟು ಹುಡುಕಾಡಿದರೂ ಅವಳು ಸಿಗಲಿಲ್ಲ. ಆನಂತರ ನಾನು ಎರಡನೇ ಮದುವೆಯಾದೆ ಅದೂ ಕೂಡ ವಿಚ್ಛೆದನೆಯಿಂದ ಅಂತ್ಯ ಕಂಡಿತು. ಇದಾದ ಸ್ವಲ್ಪ ದಿನದಲ್ಲೆ ನನಗೆ ಬಂಪರ್ ಲಾಟರಿ ಹೊಡೆದು ಕೋಟ್ಯಾಧಿಶನಾದೆ ಎಂದು ಅಜ್ಜ ತನ್ನ ಜೀವನ ಚರಿತ್ರೆ ಕುರಿತಾಗಿ ಹೇಳಿಕೊಂಡಿದ್ದಾನೆ.
ಇನ್ನು 2015ರಲ್ಲಿ ಇನ್ನೊಂದು ಮದುವೆಯಾಗುವ ಕುರಿತಾಗಿ ಆಸಕ್ತಿ ಬಂದಿದ್ದರಿಂದ ಈ ಯುವತಿಯನ್ನು ಆನ್ಲೈನ್ ಮೂಲಕ ಪರಿಚಯ ಮಾಡಿಕೊಂಡು, ಪರಿಚಯ ಪ್ರೀತಿಗೆ ತಿರುಗಿ ಈಗ ನಾವಿಬ್ಬರೂ ಮದುವೆಯಾಗಿದ್ದೇವೆ. ನಾನು ಈಗಾಗಲೇ ಎರಡು ವಿಚ್ಛೆಧನ ಪಡೆದಿರುವುದರಿಂದ ಮೂರನೇ ವಿಚ್ಛೇಧನೆ ಪಡೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ ಯುವತಿಯ ಪತಿರಾಯ.
ಇನ್ನು ಫೋಟೋ ಆಲ್ಭಮ್ ನೋಡಿದ ಕೂಡಲೇ ನನ್ನ ಗಂಡ ನನ್ನ ಸ್ವಂತ ಅಜ್ಜ ಎಂದು ತಿಳಿದ ಕೂಡಲೇ ಭಾರೀ ಅಚ್ಚರಿಯಿಂದ ನನಗೆ ಮುಂದೇನು ಮಾಡಬೇಕೆಂಬುದೇ ತೋಚಲಿಲ್ಲ. ಆದರೆ ನಮ್ಮಿಬ್ಬರ ನಡುವಿನ ಸಂಬಂಧ ಗಾಢವಾಗಿ ಬೆಳೆದಿರುವುದರಿಂದ ನಾವಿಬ್ಬರೂ ದೂರವಾಗುವ ಮನಸ್ಸು ನಮ್ಮಿಬ್ಬರಲ್ಲಿಲ್ಲ ಎಂದು ಅಜ್ಜನ ಪತ್ನಿ ಹೇಳಿಕೊಂಡಿದ್ದಾಳೆ.
Like us on Facebook The New India Times
POPULAR STORIES :
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ
ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!
ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!
ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!