ಕಾಲೇಜಿನ ಎದುರೇ ಯುವಕನೊಬ್ಬ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಎಂ. ಅಶ್ವಿನಿ ಮೃತೆ. ಈಕೆ ಮೀನಾಕ್ಷಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ಅಲಗೇಶನ್.ಈತ ನೀರಿನ ಬ್ಯುಸ್ ನೆಸ್ ಮಾಡ್ತಿದ್ದ. ಕಾಲೇಜು ಬಳಿ ಬಂದ ಆತ ಅಶ್ವಿನಿ ಜೊತೆ ಮಾತಾಡುತ್ತಿದ್ದ. ಬಳಿಕ ಆಕೆಯನ್ನು ಡ್ರಾಪ್ ಮಾಡೋದಾಗಿ ಹೇಳಿದ್ದಾನೆ. ಅಶ್ವಿನಿ ಇದಕ್ಕೆ ನಿರಾಕರಿಸಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಆಗ ಆರೋಪಿ ಅಲಗೇಶನ್ ಏಕಾಏಕಿ ಚಾಕು ಹಾಕುದ್ದಾನೆ. ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ಗಾಯಗೊಂಡಿದ್ದ ಅಶ್ವಿನಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾಳೆ.