ಬಾಯ್‍ಫ್ರೆಂಡ್‍ಗೆ ಪೊಲೀಸರು ಗುಂಡು ಹಾರಿಸ್ತಾ ಇದ್ರು..! ಅಲ್ಲೇ, ಅವನ ಜೊತೆಯೇ ಇದ್ದ ಪುಣ್ಯಾತ್ಗಿತ್ತಿ ಪ್ರೇಯಸಿ ಅದನ್ನು ಚಿತ್ರಿಸುತ್ತಾ, ಫೇಸ್‍ಬುಕ್‍ನಲ್ಲಿ ಲೈವ್ ನಿರೂಪಣೆ ಕೊಡ್ತಾ ಇದ್ದಳು..! ಹೌದಾ, ಅವ್ಯಾಳ್ಯಾಯ ಸೀಮೆಯವಳು? ಅಂತ ಅಚ್ಚರಿ ಜತೆಗೆ ಇಂತಹಾ ಹುಡುಗಿಯರೂ ಇದ್ದಾರ ಎಂದು ಕೋಪ ಕೂಡ ಬರುತ್ತೆ ಅಲ್ವಾ?
ಹ್ಞಾಂ, ಇದು ಯಾವುದೋ ಸಿನಿಮಾ ಸ್ಟೋರಿಯಂತೂ ಅಲ್ಲ. ಇದೊಂದು ರಿಯಲ್ ಸ್ಟೋರಿ. ಲ್ಯಾವಿಶ್ ರೆನಾಲ್ಡ್ ಎಂಬ ವಾಷಿಂಗ್ಟನ್ ಮಹಿಳೆ ಎದುರೇ ಆಕೆಯ ಗೆಳಯ ಫಿಲಾಂಡೊ ಕ್ಯಾಸ್ಟೆಲ್‍ಗೆ ಗುಂಡು ಹಾರಿಸಿದ್ರು ಪೊಲೀಸರು. ಶಾಲೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ನಿನ್ನೆ (ಗುರುವಾರ) ಅದ್ಯಾವ ಕಾರಣಕ್ಕೋ ಗೊತ್ತಿಲ್ಲ ವರ್ಷದ ಆತ ಕಾರು ಚಲಾಯಿಸುತ್ತಿರುವಾಗಲೇ ಪೊಲೀಸರು ಗುಂಡಿನ ಮಳೆಗೈದರು ಎಂದು ಹೇಳುವ ರೆನಾಲ್ಡ್, ಕ್ಯಾಸ್ಟಲ್ ಸಹ ಪಿಸ್ತೂಲು ಹೊಂದಿದ್ದ. ಅವನು ಅದನ್ನು ಹೊರ ತೆಗೆಯುವ ಮೊದಲೇ ಪೊಲೀಸರು ಗುಂಡು ಹಾರಿಸಿದ್ದರು ಎಂದು ಘಟನೆಯನ್ನು ವಿವರಿಸುತ್ತಾಳೆ. ಅವಳು ಆ ಘಟನೆ ವಿವರಿಸುವುದು ವಿಚಿತ್ರ ಅಥವಾ ಆಶ್ಚರ್ಯ ಎರಡೂ ಅಲ್ಲ..! ವಿಚಿತ್ರ ಹಾಗೂ ನಗು ತರಿಸುವ ಸೀರಿಯಸ್ ಕಾಮಿಡಿ ಅಂದ್ರೆ ಅದನ್ನು ಆಕೆ ವಿಡಿಯೋ ಚಿತ್ರೀಕರಣ ಮಾಡಿ ಫೇಸ್‍ಬುಕ್‍ನಲ್ಲಿ ಲೈವ್ ಕೊಡ್ತಾ ಇದ್ದುದು..! “ಓ ನನ್ನ ದೇವರೇ..! ಅವನು ಸತ್ತನೆಂದು ಮಾತ್ರ ಹೇಳಬೇಡಿ..! ದಯವಿಟ್ಟು ನನ್ನ ಬಾಯ್‍ಫ್ರೆಂಡ್ ಜೀವ ಹೋಯಿತೆನ್ನ ಬೇಡಿ” ಕಾಮೆಂಟರಿ ನೀಡಿ ಫೇಸ್‍ಬುಕ್‍ಗೆ ವಿಡಿಯೋ ಹರಿ ಬಿಟ್ಟಿದ್ದಾಳೆ..! ನಿನ್ನೆ ಸಂಜೆ ಹೊತ್ತಿಗೆ 10ಲಕ್ಷಕ್ಕೂ ಹೆಚ್ಚಿನ ಜನ ಅದನ್ನು ವೀಕ್ಷಿಸಿದ್ದಾರೆ..! ಹೀಗೂ ಉಂಟೆ ಸ್ವಾಮಿ?
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!