ಮಂಗಳೂರಿಗೆ ಎದುರಾಗಿದೆ ಆಪತ್ತು…! ನಿಮ್ದು ಮಂಗಳೂರ..? ನಿಮ್ಮೂರಿಗೆ ಕಾದಿರೋ ಅಪಾಯ ಏನ್ ಗೊತ್ತಾ..?!

Date:

ನಿಮ್ಮದು ಮಂಗಳೂರ..? ನೀವು ಅಲ್ಲೇ ವಾಸವಿದ್ದೀರ..? ಸ್ವಲ್ಪ ಧೈರ್ಯ  ತಗೊಂಡು ಈ ಸುದ್ದಿ ಓದಿ..! ನಿಮಗೆ ಭಯ ಹುಟ್ಟಿಸ ಬೇಕೆಂದು ಹೀಗೆ ಹೇಳ್ತಿಲ್ಲ..! ನಮಗೂ ಆತಂಕವಾಗ್ತಿದೆ..! ಪ್ರಳಯ ಅಂದ್ರೆ ಇದೇನಾ ಅಂತ ಭಯ ಆಗ್ತಿದೆ..!
ಕಳ್ಳ ಜ್ಯೋತಿಷಿಗಳು ಪುಕ್ಕಟೆ ಪ್ರಚಾರಕ್ಕಾಗಿ ಪ್ರಳಯದ ಕಥೆ ಕಟ್ಟೋದು ನಿಮಗೆ ಗೊತ್ತು..! ಆದರೆ, ನಮ್ಮ ಪ್ರಕಾರ ಅವರು ಹೇಳುವಂತೆ ಇಡೀ ವಿಶ್ವವೇ ಒಮ್ಮೆಲೆ ನಾಶವಾಗುವುದಿಲ್ಲ..! ಆಗಾಗ ಆಗುವ ಪ್ರಕೃತಿ ವಿಕೋಪಗಳನ್ನೇ ಪ್ರಳಯ ಅನ್ನಬಹುದೇನೋ..?! ಯಾಕಂದ್ರೆ ಇಂತಹ ಪ್ರಕೃತಿ ವಿಕೋಪಗಳು ತುಂಬಾ ನಷ್ಟವನ್ನುಂಟು ಮಾಡುತ್ತಿವೆ, ಜೊತೆಗೆ ನಾಶವನ್ನು ಮಾಡ್ತಿವೆ..!


ಅದೇನೇ ಇರಲಿ ಇಂತಹದ್ದೊಂದು ಗಂಡಾಂತರ ನಮ್ಮ ಮಂಗಳೂರಿಗೆ ಕಾದಿದೆ ಎನ್ನೋದು ತುಂಬಾ ಆಘಾತಕಾರಿ ಸುದ್ದಿ..! ಇದು ಪಬ್ಲಿಸಿಟಿಗಾಗಿ ಯಾರೋ ಕಟ್ಟಿದ ಕಥೆಯಲ್ಲ, ಹಬ್ಬಿಸಿದ ಸುಳ್ಳು ಸುದ್ದಿಯಲ್ಲ..! ಇದು ನಾಸಾ ತಿಳಿಸಿರುವ ಆಘಾತಕಾರಿ ನ್ಯೂಸ್..!
ಯಸ್, ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇಂತಹದ್ದೊಂದು ಶಾಕಿಂಗ್ ನ್ಯೂಸ್ ನೀಡಿದೆ..! ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮ ಗ್ರೀನ್ ಲ್ಯಾಂಡ್ ಹಾಗೂ ಅಂಟಾರ್ಟಿಕದಲ್ಲಿ ಹಿಮಗಡ್ಡೆಗಳು ಕರಗುವ ಅಪಾಯವಿದೆಯಂತೆ..! ಹೀಗೆ ಹಿಮಗಡ್ಡೆಗಳು ಕರಗಿ ಸಮುದ್ರದ ಮಟ್ಟದಲ್ಲಿ ಏರಿಕೆಯಾದರೆ ಮೊದಲು ಮುಳುಗುವುದು ನಮ್ಮ ಕರ್ನಾಟಕದ ಮಂಗಳೂರಂತೆ..!

ಕ್ಯಾಲಿಫೋರ್ನಿಯಾದಲ್ಲಿರೋ ನಾಸಾ ಕೇಂದ್ರದ ಜೆಟ್ ಪ್ರೊಪಲ್‍ಷನ್ ಲ್ಯಾಬೊರೇಟರಿಯಲ್ಲಿ ವಿಶ್ವದ 293 ಬಂದರು ನಗರಗಳ ಅಧ್ಯಯನ ನಡೆಸಿರೋ ಸಂಶೋಧಕರು ತಮ್ಮ ವರದಿಯಲ್ಲಿ ಈ ಆಘಾತಕಾರಿ ವಿಷಯವನ್ನು ಹೇಳಿದ್ದಾರೆ.
ಇವರ ಸಂಶೋಧನಾ ವರದಿ ಪ್ರಕಾರ ಮಂಗಳೂರು ಮೊದಲ ಸ್ಥಾನದಲ್ಲಿದ್ದರೆ ನಂಗತರದ ಸ್ಥಾನದಲ್ಲಿ ಮುಂಬೈ, ನ್ಯೂಯಾರ್ಕ್ ಮಹಾನಗರಗಳು ಇವೆಯಂತೆ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...