ಇವತ್ತು ಮಾಘ ಶುದ್ಧ ಪಂಚಮಿ. ಇದನ್ನು ಶ್ರೀ ಪಂಚಮಿ ಅಂತ ಕರೀತಿವಿ. ಇದು ವಿದ್ಯಾಧಿದೇವತೆ ಸರಸ್ವತಿ ಅವತರಿಸಿದ ದಿನ ಎಂಬ ನಂಬಿಕೆ ನಮ್ಮಲ್ಲಿದೆ.
ದ್ವಾಪರ ಯುಗದಲ್ಲೂ ಈ ವಸಂತ ಪಂಚಮಿ ಆಚರಣೆ ಇತ್ತಂತೆ. ಇದರ ಬಗ್ಗೆ ಭಾಗವತ ಮತ್ತಿತರ ವೈಷ್ಣವ ಗ್ರಂಥಗಳಲ್ಲಿ ಉಲ್ಲೇಖಗಳಿವೆ.
ಶ್ರೀಕೃಷ್ಣ ನ ನೃತ್ಯ ನೋಡಲು ಈ ದಿನ ಚಂದ್ರನು ಸಹ ಅಸ್ತಮನಾಗದೇ ಬ್ರಹ್ಮನ ಒಂದು ರಾತ್ರಿಯಷ್ಟು ಕಾಲ ಹಾಗೆಯೇ ಇದ್ದನೆಂದು ಹೇಳಲಾಗುತ್ತದೆ. ಇದರಿಂದ ಗೋವರ್ಧನ ಗಿರಿಯಲ್ಲಿ ಶ್ರೀ ಕೃಷ್ಣನು ನೃತ್ಯಮಾಡಿದ ಪ್ರದೇಶವನ್ನು ಚಂದ್ರ ಸರೋವರ ಎಂದು ಕರೆಯಲಾಗುತ್ತದೆ.
ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಇಂದು ಸರಸ್ವತಿ ಅವತರಿಸಿದ ದಿನವೂ ಹೌದು. ಬ್ರಹ್ಮನ ಮನಸ್ಸಿಂದ ಸರಸ್ವತಿ ಅವತರಿಸಿದಳೆಂದು ಪೌರಾಣಿಕ ಉಲ್ಲೇಖಗಳಿವೆ. ಸರಸ್ವತಿ ಅವತರಿಸಿದ ಬಳಿಕ ಬ್ರಹ್ಮ ತಪಸ್ಸು ಆರಂಭಿಸಿ ಆಧ್ಯಾತ್ಮಿಕ ಜ್ಞಾನ ಪಡೆದ ಎಂಬುದು ನಂಬಿಕೆ.