ಪರ ಭಾಷೆಯ ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗುತ್ತವೆ. ಕನ್ನಡ ಸಿನಿಮಾಗಳು ಬೇರೆ ಭಾಷೆಗೆ ರಿಮೇಕ್ ಆಗುತ್ತಿಲ್ಲ ಎಂಬ ಬೇಸರ ಕನ್ನಡಿಗರದ್ದು. ಈ ನಡುವೆ ಒಂದಿಷ್ಟು ಕನ್ನಡ ಸಿನಿಮಾಗಳು ಬೇರೆ ಭಾಷೆಗೆ ರಿಮೇಕ್ ಆಗುತ್ತಿವೆ.
ಇತ್ತೀಚೆಗೆ ಯು ಟರ್ನ್ , ಕಿರಿಕ್ ಪಾರ್ಟಿ ತೆಲುಗಿಗೆ ರಿಮೇಕ್ ಆಗಿವೆ.
ಇದೀಗ ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್, ವಸಿಷ್ಠ ಸಿಂಹ ಅಭಿನಯದ ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ಹಿಂದಿಗೆ ರಿಮೇಕ್ ಆಗಲಿದೆ.
ಈ ಸಿನಿಮಾದ ತೆಲುಗು ಮತ್ತು ತಮಿಳು ರಿಮೇಕ್ ಹಕ್ಕನ್ನು ಈ ಹಿಂದೆ ನಟ, ನಿರ್ದೇಶಕ ಪ್ರಕಾಶ್ ರೈ ಪಡೆದಿದ್ದರು. ವಿಎಲ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಇದರ ಹಿಂದಿಗೆ ರಿಮೇಕ್ ಹಕ್ಕು ಖರೀದಿಸಿದೆ.