Gold Price Hike: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?
ಬೆಂಗಳೂರು: ಚಿನ್ನ ಪ್ರಾಚೀನ ಕಾಲದಿಂದಲೂ ಸಾಕಷ್ಟು ಮೌಲ್ಯ ಹೊಂದಿರುವ ಲೋಹವಾಗಿದೆ. ಈ ಅಪರೂಪದ ಹಳದಿ ಲೋಹಕ್ಕೆ ಜಗತ್ತಿನಾದ್ಯಂತ ಬೇಡಿಕೆ ಇರುವುದು ಸುಳ್ಳಲ್ಲ, ಕಾರಣ ವಿಶ್ವದ ಎಲ್ಲ ರಾಷ್ಟ್ರಗಳಿಂದಲೂ ಚಿನ್ನ ಸ್ವೀಕರಿಸಲ್ಪಡುತ್ತದೆ ಮತ್ತು ರಾಷ್ಟ್ರದ ಆರ್ಥಿಕ ಸದೃಢತೆಯಲ್ಲಿ ಚಿನ್ನ ಪ್ರಮುಖ ಪಾತ್ರವಹಿಸುತ್ತದೆ. ಇದು ಇಂದು ನಿನ್ನೆಯ ಮಾತಲ್ಲ,
ಕಳೆದ ಹಲವು ದಶಕಗಳನ್ನು ಗಮನಿಸಿದಾಗ ಚಿನ್ನಕ್ಕಿದ್ದ ಬೆಲೆಯು ಏರಿಕೆಯಾಗುತ್ತಲೇ ಇದೆ ಹೊರತು ಎಂದಿಗೂ ತೀವ್ರವಾಗಿ ಕುಸಿದಿಲ್ಲ. ಇನ್ನು, ಜಾಗತಿಕ ವಿದ್ಯಮಾನಗಳು ಹಾಗೂ ಸ್ಥಳೀಯ ಕಾರಣಗಳಿಂದಾಗಿ ಚಿನ್ನದ ನಿತ್ಯ ಸ್ಥಿರವಾಗಿರುವುದಿಲ್ಲವಾದರೂ ಅಲ್ಪ ಮಟ್ಟ ಏರಿಳಿತ ಸಹಜವಾಗಿರುತ್ತದೆ. ಗರಿಷ್ಠ ಮಟ್ಟ 13,048 ರೂಪಾಯಿಗೆ ಏರಿಕೆ ಆಗಿದೆ.
ಡಿಸೆಂಬರ್ 1 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,048 ರೂಪಾಯಿ ಇದ್ದು, ಇಂದು 66 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,480 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 660 ರೂ ಏರಿಕೆ ಆಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 11,960 ರೂಪಾಯಿ ಇದ್ದು, ಇಂದು 60 ರೂ ಹೆಚ್ಚಳ ಆಗಿದೆ. 10 ಗ್ರಾಂ ಬೆಲೆ 1,19,600 ರೂಪಾಯಿ ಇದೆ.
ಇಂದು 10 ಗ್ರಾಂ ನಲ್ಲಿ 600 ರೂ ಹೆಚ್ಚಳ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13,048 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,30,480 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಬೆಳ್ಳಿ ಬೆಲೆ ಇಂದು 3 ರೂ ಹೆಚ್ಚಳ ಆಗಿದ್ದು, ಗ್ರಾಂ ಬೆಲೆ 188 ರೂ ಆಗಿದ್ದು, ಕೆಜಿಗೆ 1,88,000 ರೂ ಇದೆ.






