Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು ಎಷ್ಟಿದೆ ದರ?
ಜಾಗತಿಕ ಮಾರುಕಟ್ಟೆಯಿಂದ ಹಿಡಿದು ಮನೆ ಮನೆಯಲ್ಲೂ ಇಂದು ಚಿನ್ನ ಸ್ಥಾನ ಪಡೆದುಕೊಂಡಿದೆ. ಒಡವೆಯಾಗಿ, ಆಪತ್ಕಾಲದ ಬಂಧುವಾಗಿ ಚಿನ್ನ ಜನರ ಜೀವನದಲ್ಲಿ ಮುಖ್ಯವಾಗಿದೆ. ಒಂದು ತುಂಡು ಚಿನ್ನವಿದ್ದರೂ ಸಂತಸ ಪಡುವ ಕಾಲ ಇದಾಗಿದೆ ಏಕೆಂದರೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ಮೊದಲೆಲ್ಲಾ ಚಿನ್ನ ಖರೀದಿಯಲ್ಲವೇ ಬೇಕಾದಾಗ ಮಾಡಿಸಿದರಾಯಿತು ಎಂದು ಮುಂದೂಡುತ್ತಿದ್ದರು. ಆದರೀಗ ಚಿನ್ನದ ಬೆಲೆ ಇಳಿಕೆಯಾದೊಡನೆ ಗ್ರಾಹಕರು ನಾ ಮುಂದು ತಾ ಮುಂದು ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ.
ಡಿಸೆಂಬರ್ 13 ಶನಿವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13391 ರೂಪಾಯಿ ಇದ್ದು, ಇಂದು 27 ರೂಪಾಯಿ ಇಳಿಕೆ ಆಗಿದೆ.
10 ಗ್ರಾಂ ಶುದ್ಧ ಚಿನ್ನಕ್ಕೆ 1,33,910 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 270 ರೂ ಇಳಿಕೆ ಆಗಿದೆ.22 ಕ್ಯಾರೆಟ್ 1 ಗ್ರಾಂ ಬೆಲೆ 12,275 ರೂಪಾಯಿ ಇದ್ದು, ಇಂದು 25 ರೂ ಇಳಿಕೆ ಆಗಿದೆ. 10 ಗ್ರಾಂ ಬೆಲೆ 1,22,750 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 250 ರೂ ಕಡಿತ ಆಗಿದೆ.
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13391 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,33,910 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಬೆಳ್ಳಿ ಬೆಲೆ ಇಂದು ಭಾರಿ ಇಳಿಕೆ ಆಗಿದ್ದು, 6 ರೂ ಕಡಿತ ಆಗಿ ಬೆಲೆ 198 ರೂ ಆಗಿದ್ದು, ಕೆಜಿಗೆ 1,98,,000 ರೂ ಇದೆ.






