Gold rate: ಚಿನ್ನ ಖರೀದಿ ಮಾಡೋರಿಗೆ ಶಾಕ್: ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಬೆಂಗಳೂರು: ಚಿನ್ನದ ಬೆಲೆ ಶ್ರೀಮಂತರ ಎದೆಯನ್ನೂ ನಡುಗಿಸುತ್ತಿದೆ. ಅದರ ಹೆಸರು ಕೇಳ್ತಿದ್ದಂತೆ ಉಸಿಗಟ್ಟಿದ ಸ್ಥಿತಿ ನಿರ್ಮಾಣ ಆಗುತ್ತಿದೆ. ಅಷ್ಟಕ್ಕೆಲ್ಲ ಕಾರಣ, ಚಿನ್ನದ ಬೆಲೆಯಲ್ಲಿನ ನಿರಂತರ ಏರಿಕೆ. ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಅದರಂತೆಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಬದಲಾವಣೆಗಳಾಗಿವೆ.
ಆಭರಣ ಚಿನ್ನದ ಬೆಲೆ 9,015 ರೂ ಇದ್ದದ್ದು 9,045 ರೂಗೆ ಏರಿದೆ. ಹತ್ತು ದಿನಗಳ ಹಿಂದೆ 8,575 ರೂ ಇದ್ದ ಚಿನ್ನದ ಬೆಲೆಯಲ್ಲಿ 470 ರೂನಷ್ಟು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,450 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,680 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 90,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 11ಕ್ಕೆ)
• 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,450 ರೂ
• 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,680 ರೂ
• 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,010 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
• 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,450 ರೂ
• 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,680 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
• ಬೆಂಗಳೂರು: 90,450 ರೂ
• ಚೆನ್ನೈ: 90,450 ರೂ
• ಮುಂಬೈ: 90,450 ರೂ
• ದೆಹಲಿ: 90,600 ರೂ
• ಕೋಲ್ಕತಾ: 90,450 ರೂ
• ಕೇರಳ: 90,450 ರೂ
• ಅಹ್ಮದಾಬಾದ್: 90,500 ರೂ
• ಜೈಪುರ್: 90,600 ರೂ
• ಲಕ್ನೋ: 90,600 ರೂ
• ಭುವನೇಶ್ವರ್: 90,450 ರೂ