ಟಿವಿ ಇಲ್ಲದ ಮನೆಯ ಹುಡುಗ ಈಗ ಗೂಗಲ್ ಸಿಇಓ..! ಹಿಂದಿದ್ದ ಸಿಇಓ ಆ ಹುದ್ದೆ ಬಿಟ್ಟುಕೊಟ್ಟಿದ್ಯಾಕೆ..?! 

Date:

ಅವರ ಮನೆಯಲ್ಲಿ ಟಿವಿ ಇರಲಿಲ್ಲ, ದಿನಾ ಬಸ್ಸಲ್ಲಿ ಪ್ರಯಾಣ..! ಅಪ್ಪ ಯಾವಾಗಾದ್ರೂ ಅಣ್ಣತಮ್ಮ ಇಬ್ಬರನ್ನೂ ಅಮ್ಮನ ಜೊತೆ ಲ್ಯಾಂಬ್ರೆಟಾ ಸ್ಕೂಟರ್ ಹತ್ತಿಸಿದರೆ ಅದೇ ಸ್ವರ್ಗ..! ಅಣ್ಣ ತಮ್ಮ ಇಬ್ಬರೂ ಮಲಗ್ತಾ ಇದ್ದಿದ್ದು ಮನೆಯ ಹಾಲ್ ನಲ್ಲಿ..! ಕಷ್ಟಪಟ್ಟು ಓದಿ ಬೆಳೆದ ಹುಡುಗ ಇಷ್ಟೆತ್ತರಕ್ಕೆ ಬೆಳೀತಾನೆ ಅಂತ ಯಾರೂ ಊಹಿಸಿರಲಿಲ್ಲ..! ಅವರೀಗ ಪ್ರತಿಷ್ಟಿತ ಗೂಗಲ್ ಕಂಪನಿಯ ಸಿಇಓ..! ಹೀ ಈಸ್ ಇಂಡಿಯನ್ ಪ್ರೌಡ್ ಮಿಸ್ಟರ್ ಪಿಚೈ ಸುಂದರ್…!
ಕಷ್ಟ ಉಂಡವರಿಗೇ ಸುಖದ ಅರಿವಾಗೋದು..! ಕೈಕೆಸರಾದರೆ ಬಾಯಿ ಮೊಸರು ಅಂತ ಸುಮ್ಮನೆ ಹೇಳಿಲ್ಲ. ಹಾಗೇ ಅವತ್ತು ಸೊಂದರ್ ಪಟ್ಟ ಕಷ್ಟಕ್ಕೆ ಇವತ್ತು ಅವರು ಫಲ ತಿನ್ನತ್ತಿದ್ದಾರೆ..! ಇಡೀ ಜಗತ್ತು ಈ ಭಾರತೀಯನನ್ನು ಹೆಮ್ಮೆಯ ಕಂಗಳಿಂದ ನೋಡುತ್ತಿದೆ. ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ ಯಾರನ್ನೇ ಕೇಳಿನೋಡಿ, `ನನಗೆ ಗೂಗಲ್ ನಲ್ಲಿ ಕೆಲಸ ಸಿಗಬೇಕು’ ಅಂತಾರೆ.. ಅಂತದ್ರಲ್ಲಿ ಅದೇ ಗೂಗಲ್ ಕಂಪನಿಯ ಸಿಇಓ ಆಗೋದು ಅಂದ್ರೆ ಅದೇನು ತಮಾಷೇನಾ..? ಊಹಿಸೋದು ಕಷ್ಟ..! ಆದ್ರೆ ಆ ತಮಾಷೆ, ಊಹೆಯ ಆಚೆಗೆ ಛಲ ಒಂದಿದ್ರೆ ಯಶಸ್ಸು ನಮ್ಮ ಬೆನ್ನುಬಿಡೋದಿಲ್ಲ ಅನ್ನೋದನ್ನು ಸಾಬೀತು ಮಾಡಿತೋರಿಸಿದ್ದಾರೆ ದಿ ಗ್ರೇಟ್ ಪಿಚೈ ಸುಂದರ್..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಇವರದು ಮೂಲತಃ ಚೆನ್ನೈ, ಅಲ್ಲೇ ಹುಟ್ಟಿ ಅಲ್ಲೇ ಬೆಳೆದರು. ಬಾಲ್ಯದ ವಿದ್ಯಾಭ್ಯಾಸ ಎಲ್ಲಾ ಅಲ್ಲೇ ಮುಗೀತು. ಆ ಟೈಮಲ್ಲಿ ಅವರದ್ದು ಒಂದು ವೆರಿ ನಾರ್ಮಲ್ ಮಿಡಲ್ ಕ್ಲಾಸ್ ಫ್ಯಾಮಿಲಿ…! ಅಪ್ಪ ಅಮ್ಮ, ಇವರು ಹಾಗೂ ಇವರ ಅಣ್ಣ.. ಇಷ್ಟೇ ಪ್ರಪಂಚ..! ಸುಂದರ್ ಗೆ ಫ್ಯಾಮಿಲಿ ಬಿಟ್ರೆ ಓದು, ಅದು ಬಿಟ್ರೆ ಕ್ರಿಕೆಟ್..! ಯಾವತ್ತೂ ಪೋಲಿ ಹುಡುಗರ ಜೊತೆ ಸುತ್ತಲಿಲ್ಲ, ಮನೆಗೆ ತಡವಾಗಿ ಬರಲಿಲ್ಲ, ಕುಂಟುನೆಪ ಹೇಳಿ ಸ್ಕೂಲಿಗೆ ರಜೆ ಹಾಕಲಿಲ್ಲ, ಮಾರ್ಕ್ಸ್ ಕಾರ್ಡ್ ಮೇಲೆ ಯಾವತ್ತೂ ಗ್ರೇಡ್ ಕಡಿಮೆಯಾಗಲಿಲ್ಲ. ಸುಂದರ್, ಅವರಪ್ಪ ಅಮ್ಮನ ಪಾಲಿಗೆ ಯಾವತ್ತೂ ಹೆಮ್ಮೆಯಾಗಿದ್ರು..! ಹೀಗೆ ದಿನಗಳು ಕಳೀತು. ಮನೆಯಲ್ಲಿ ಟಿವಿ ಇಲ್ಲ ಅನ್ನೋ ಕೊರಗಿದ್ದರೂ ಯಾವತ್ತೂ ನಂಗೆ ಟಿವಿ ಬೆಕು ಅಂತ ಕೇಳಲಿಲ್ಲ, ಫ್ರೆಂಡ್ಸ್ ಗಳೆಲ್ಲಾ ಅವರಪ್ಪ ಅಮ್ಮನ ಕಾರಲ್ಲಿ ಬಂದಾಗಲೂ ನಮ್ಮ ಹತ್ತಿರಾನೂ ಕಾರ್ ಇರಬೇಕಿತ್ತು ಅಂತ ಬೇಜಾರು ಮಾಡ್ಕೊಳ್ಳಿಲ್ಲ, ಅಪ್ಪನ ಬಳಿ ಇರೋ ಹಳೆಯ ಲ್ಯಾಂಬ್ರೆಟಾನೇ ನಮ್ಮ ಆಸ್ತಿ ಅಂತ ಅನ್ಕೊಂಡಿದ್ರು ಸುಂದರ್..! ಓದಿನಲ್ಲಿ ಸಿಕ್ಕಾಪಟ್ಟೆ ಆಸಕ್ತಿ ತೋರಿಸ್ತಿದ್ದ ಸುಂದರ್ ಮುಂದೆ ಇಂಜಿನಿಯರ್ ಆಗ್ತೀನಿ ಅಂತ ಕನಸು ಕಂಡಿದ್ದವರು..! ಅವರು ತೆಗೆದ ಅದ್ಭುತ ಮಾರ್ಕ್ಸ್ ಅವರನ್ನು ಖರಗ್ ಪುರ್ ಐಐಟಿವರೆಗೆ ಕರ್ಕೊಂಡು ಹೋಯ್ತು. ಸ್ಕಾಲರ್ ಶಿಪ್ ನಲ್ಲಿ ಓದೋದು ಸುಂದರ್ ರೂಢಿಸಿಕೊಂಡಿದ್ರು..! ಅವರು ಅಪ್ಪಮ್ಮನಿಗೆ ಯಾವತ್ತೂ ಹೊರೆಯಾಗಲಿಲ್ಲ..! ಇಂತಹ ವಿದ್ಯಾರ್ಥಿ ನಮ್ಮ ಕಾಲೇಜಲ್ಲಿ ಓದಬೇಕು ಅಂತ ಐಐಟಿ ಅವರಿಗೆ ಸೀಟ್ ಕೊಡ್ತು..! ಅಲ್ಲಿಂದ ಸುಂದರ್ ತಿರುಗಿ ನೋಡಲೇ ಇಲ್ಲ. ಓದು ಓದು ಓದು..! ಅಲ್ಲಿಂದ ಅವರ ಉನ್ನತ ವ್ಯಾಸಾಂಗಕ್ಕೆ ಪ್ರಯಾಣ ಬೆಳೆಸಿದ್ದು ಅಮೆರಿಕಕ್ಕೆ. ಅಲ್ಲೂ ಸಹ ಸ್ಕಾಲರ್ ಶಿಪ್ ಸುಂದರ್ ಜೊತೆಗಿತ್ತು..! ಆದ್ರೂ ಮಗನನ್ನು ಅಮೆರಿಕಕ್ಕೆ ಕಳಿಸೋದು ಅಪ್ಪಅಮ್ಮನಿಗೆ ಸುಲಭದ ಕೆಲಸವಾಗಿರಲಿಲ್ಲ..! ಅಲ್ಲಿ ಇಲ್ಲಿ ಕೇಳಿ, ಕಷ್ಟಪಟ್ಟು ದುಡ್ಡು ಹೊಂಚಿದ್ರು..! ಮಗನ ಜೀವನ ಚೆನ್ನಾಗಿರಬೇಕು ಅನ್ನೋ ಕಾರಣಕ್ಕೆ ಅಪ್ಪಅಮ್ಮ ಸಾಕಷ್ಟು ತ್ಯಾಗ ಮಾಡಿದ್ರು..! ಪರಿಣಾಮವಾಗಿ ಮಗ ಅಮೆರಿಕದ ಸ್ಟ್ಯಾನ್ ಫೋರ್ಡ್  ಯೂನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗಕ್ಕೆ ಹೊರಟರು..!
ಅಮೆರಿಕ ತಲುಪಿದ ಸುಂದರ್ ಅವರಿಗೆ ಅಲ್ಲಿನ ಜೀವನ ಅಷ್ಟು ಸುಲಭವಿರಲಿಲ್ಲ. ಆರಂಭದಲ್ಲಿ ಅವರು ಅಲ್ಲಿ ಆಶ್ರಯ ಪಡೆಯೋಕೂ ಸ್ವಲ್ಪ ಒದ್ದಾಡಬೇಕಾಯ್ತು. ನಂತರ ಪಿಜಿಯಲ್ಲಿದ್ದುಕೊಂಡೇ ತಮ್ಮ ವ್ಯಾಸಂಗ ಮುಂದುವರೆಸಿದ್ರು..! ಬರ್ತಿದ್ದ ಶಿಷ್ಯವೇತನ ಅವರ ಜೀವಾಳ ಆಗಿತ್ತು..! ಅಲ್ಲಿನ ವ್ಯಾಸಂಗ ಮುಗಿಯೋ ಟೈಮಿಗೆ ಸರಿಯಾಗಿ ಮೆಕ್ ಕಿನ್ಸೆ ಕಂಪನಿಯಲ್ಲಿ ಕೆಲಸ ಆರಂಭಿಸಿದ್ರು. 2004ರಲ್ಲಿ ಗೂಗಲ್ ನಿಂದ ಸುಂದರ್ ಅವರಿಗೆ ಆಫರ್ ಬಂತು..! ಅಲ್ಲಿಂದ ಅವರ ಲೈಫ್ ಟರ್ನ್ ಪಡೆದುಕೊಳ್ತು.
ಗೂಗಲ್ ಕಂಪನಿಗೆ ಸೇರಿದ ಪಿಚೈ ಸುಂದರ್, ಆರಂಭದಲ್ಲಿ ಗೂಗಲ್ ಕ್ರೋಮ್ ನಲ್ಲಿ ಮಹತ್ವದ ಪಾತ್ರವಹಿಸಿದ್ರು. ಕ್ರೋಮ್ ಇವತ್ತು ಪ್ರತೀ ಕಂಪ್ಯೂಟರ್, ಮೊಬೈಲ್, ಲ್ಯಾಪ್ ಟಾಪ್ ಗಳಲ್ಲಿ ಇನ್ಸ್ಟಾಲ್ ಆಗಿದೆ ಅಂದ್ರೆ ಅದರಲ್ಲಿ ಸುಂದರ್ ಪಾತ್ರ ಮಹತ್ವದ್ದು. ಅದಾದ ನಂತರ ಸುಂದರ್ ಗೆ ಗೂಗಲ್ ಡ್ರೈವ್ ನ ಜವಾಬ್ದಾರಿ ಹೆಗಲೇರುತ್ತೆ. ಅದನ್ನೂ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿ ಗೂಗಲ್ ಅಧಿಕಾರಿಗಳಿಂದ ಭೇಷ್ ಅನ್ನಿಸಿಕೊಳ್ತಾರೆ ಪಿಚೈ..! ಅದಾದ ಮೇಲೆ ಜೀ ಮೇಲ್ ಹಾಗೂ ಗೂಗಲ್ ಮ್ಯಾಪ್ ಆಪ್ ಡೆವಲಪ್ ಮಾಡೋದ್ರಲ್ಲೂ ಇದೇ ಸುಂದರ್ ಪ್ರಮುಖ ಪಾತ್ರವಹಿಸ್ತಾರೆ..! ಇವತ್ತು ಜಗತ್ತಿನ ಮೂಲೆಮೂಲೆಯಲ್ಲಿರೋ ಆಂಡ್ರಾಯ್ಡ್, ಗೂಗಲ್ ಪ್ರಾಡಕ್ಟ್ ಆಗೋದ್ರಲ್ಲಿ ತುಂಬಾ ಕೆಲಸ ಮಾಡಿದ್ದು, ಅದನ್ನು ಸಕ್ಸಸ್ ಮಾಡಿದ್ದು ನಮ್ಮ ಹೆಮ್ಮೆಯ ಪಿಚೈ ಸುಂದರ್..!
ಈಗ ಅವರು ಅದೇ ಗೂಗಲ್ ಕಂಪನಿಯ ಸಿಇಓ..! ಅವರು ಗೂಗಲ್ ಕಂಪನಿಯ ವಿವಿಧ ಪ್ರಾಡಕ್ಟ್ ಗಳನ್ನು ಯಶಸ್ವಿಗೊಳಿಸಲು ಪಟ್ಟ ಶ್ರಮ ಇವತ್ತು ಅವರನ್ನು ಆ ಸ್ಥಾನಕ್ಕೇರಿಸಿದೆ. ಬಾಲ್ಯದಿಂದಲೂ ಏನೇ ಮಾಡಿದ್ರು ತುಂಬಾ ಶ್ರದ್ಧೆಯಿಂದ ಆ ಕೆಲಸ ಮಾಡಿಮುಗಿಸ್ತಿದ್ದ ಅವರ ಗುಣ ಅವರನ್ನು ಜೀವನದಲ್ಲಿ ಸಾಕಷ್ಟು ಎತ್ತರಕ್ಕೇರಿಸಿದೆ. ಸುಂದರ್ ಅವರಿಗೂ ಮುನ್ನ ಗೂಗಲ್ ಸಿಇಓ ಆಗಿದ್ದ ಕೋ-ಫೌಂಡರ್ ಲ್ಯಾರಿ ಪೇಜ್ ಅವರು ಸಿಇಓ ಸ್ಥಾನಕ್ಕೆ ಸರಿಯಾದವರನ್ನು ತುಂಬ ದಿನಗಳಿಂದ ಹುಡುಕ್ತಾ ಇದ್ರಂತೆ..! ಕಂಪನಿಯಲ್ಲಿ ಆ ಸ್ಥಾನ ತುಂಬಬಲ್ಲ ಯೋಗ್ಯತೆ ಯಾರಿಗಿದೆ ಅನ್ನೋದನ್ನು ಗಮನಿಸಿ ಆ ಮಹತ್ವದ ಸ್ಥಾನವನ್ನು ನಮ್ಮ ಹೆಮ್ಮಯ ಭರತೀಯ ಪಿಚೈ ಸುಂದರ್ ಅವರಿಗೆ ನೀಡಿದ್ರಂತೆ..! ಈ ಲ್ಯಾರಿ ಪೇಜ್ ಅವರದ್ದೇ `ಆಲ್ಫಾ ಬೇಟ್’ ಕಂಪನಿಯ ಮುಖ್ಯಸ್ಥ..! ಇನ್ನು ಗೂಗಲ್ ಸುಂದರ್ ಜವಾಬ್ದಾರಿ.. ಇಲ್ಲಿಯವರೆಗೂ ಯಶಸ್ಸಿನ ಉತ್ತುಂಗದಲ್ಲಿರೋ ಗೂಗಲ್, ಸುಂದರ್ ಕೈಸೇರಿದ ಮೇಲೆ ಇನ್ನೂ ಎತ್ತರೆತ್ತರಕ್ಕೇರಿ ಭಾರತೀಯರು ಎಲ್ಲದರಲ್ಲೂ ಸೈ ಅನ್ನೋದನ್ನು ಸಾಬೀತು ಪಡಿಸಲಿ..!
ಸುಂದರ್ ಸರ್, ವಿಶ್ ಯೂ ಆಲ್ ಸಕ್ಸಸ್…!
– ಕೀರ್ತಿ ಶಂಕರಘಟ್ಟ

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...