ಸಿಎಂ ಬರ್ತಿದಾರೆ..! ಯಾವ್ ಆಂಬುಲೆನ್ಸೂ ಬಿಡಕ್ಕಾಗಲ್ಲ..!

0
116
ಒಂದಲ್ಲ ಎರಡಲ್ಲ ಮೂರು ಆಂಬುಲೆನ್ಸ್ ಟ್ರಾಫಿಕ್ಕಲ್ಲಿ ಸಿಗಾಕ್ಕೊಂಡಿದೆ. ಅಷ್ಟಕ್ಕೂ ಟ್ರಾಫೀಕ್ ಜಾಮ್ ಆಗಿರೋದ್ಯಾಕೆ ಗೊತ್ತಾ..? ಸಿಎಂ ಅದೇ ರೂಟಲ್ಲಿ ಬರ್ತಿದ್ದಾರೆ ಅಂತ ಪೊಲೀಸರೇ ವಾಹನಗಳನ್ನು ನಿಲ್ಸಿದ್ದಾರೆ..! ಈ ಟೈಮಲ್ಲಿ ಸಿಎಂ ಹೋಗೋದು ಇಂಪಾರ್ಟೆಂಟಾ..? ಅಥವಾ ಆಂಬುಲೆನ್ಸ್ ನಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಾ ಇರೋರನ್ನು ಬಿಡೋದು ಇಂಪಾರ್ಟೆಂಟಾ..? ಉತ್ತರ ಸ್ವತಃ ಸಿಎಂ ಸಾಹೇಬ್ರೇ ಕೊಟ್ರೆ ಒಳ್ಳೇದು..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಮೊನ್ನೆ ಅಂದ್ರೆ ಒಂಬತ್ತನೇ ತಾರೀಕು ಮೇಖ್ರಿ ಸರ್ಕಲ್ ಬಳಿ ಇರೋ ಗಾಯಿತ್ರಿ ವಿಹಾರ್ ಎದುರು ಇಂತದ್ದೇ ಘಟನೆ ನಡೆದಿದೆ..! ಸಿಎಂ ಅದೇ ರೋಡಲ್ಲಿ ಬರ್ತಾರೆ ಅನ್ನೋ ಕಾರಣಕ್ಕೆ ಸ್ವಲ್ಪ ಮುಂಚೇನೇ ಆ ರೋಡಲ್ಲಿ ಓಡಾಡೋ ವಾಹನಗಳನ್ನು ಸ್ಟಾಪ್ ಮಾಡಿಸಿ ಮುಖ್ಯಮಂತ್ರಿಗಳಿಗೆ ದಾರಿ ಮಾಡಿಕೊಡೋಕೆ ಸಿದ್ಧತೆ ಮಾಡಿಕೊಂಡಿದ್ರು..! ಆದ್ರೆ ಅದೇ ಸಮಯಕ್ಕೆ ಮೂರು ಆಂಬುಲೆನ್ಸ್ ಗಳು ಅದೇ ಟ್ರಾಫಿಕ್ ಜಾಮಲ್ಲಿ ಸಿಕ್ಕಿಹಾಕ್ಕೊಂಡಿದ್ವು..! ಅವುಗಳು ಬಿಟ್ಟೂ ಬಿಡದೇ ಸೈರನ್ ಹೊಡೀತಾನೇ ಇದ್ರು ಅಲ್ಲಿದ್ದ ಪೊಲೀಸರು ಅದರ ಬಗ್ಗೆ ತಲೇನೇ ಕೆಡಿಸ್ಕೊಂಡಿಲ್ಲ..! ಪಾಪಾ ಅವರಾದ್ರೂ ಏನ್ಮಾಡ್ತಾರೆ.. ಅದು ಸಿಎಂ ಡ್ಯೂಟಿ..! ಅದೇ ಆಂಬುಲೆನ್ಸಲ್ಲಿ ಅವರ ಫ್ಯಾಮಿಲಿಯವರೇ ಇದ್ದಿದ್ರೆ ಸಿಎಂ ಡ್ಯೂಟಿ ಮಾಡ್ತಿದ್ರಾ ಅಥವಾ ಆಂಬುಲೆನ್ಸ್ ಗೆ ದಾರಿ ಮಾಡಿಕೊಡ್ತಿದ್ರಾ..?
ಅದೇ ಟೈಮಿಗೆ ಶ್ರೀನಾಥ್ ಎಂಬ ಜವಾಬ್ದಾರಿಯುತ ಯುವಕನೊಬ್ಬ ಅಲ್ಲಿದ್ದ ಪೊಲೀಸರ ಬಳಿ ಹೋಗಿ ರಿಕ್ವೆಸ್ಟ್ ಮಾಡಿದ್ದಾರೆ. `ಸರ್, ಮೂರು ಆಂಬುಲೆನ್ಸ್ ನಿಂತಿವೆ. ಅವರು ಸಾವು-ಬದುಕಿನ ನಡುವೆ ಹೋರಾಡ್ತಿರ್ತಾರೆ, ಪ್ಲೀಸ್ ಅದಕ್ಕೆ ದಾರಿ ಮಾಡಿಕೊಡಿ’ ಅಂತ..! ಪೊಲೀಸರು ಯಾವುದೇ ಕಾರಣಕ್ಕೂ ಸಿಎಂ ವಾಹನ ಹೋಗೋ ತನಕ ಯಾರಿಗೂ ಬಿಡಲ್ಲ ಅಂತ ಹೇಳಿದ್ದಾರೆ. ಮತ್ತೆ ಮತ್ತೆ ರಿಕ್ವೆಸ್ಟ್ ಮಾಡೋಕೆ ಹೋದ ಶ್ರೀನಾಥ್ ಅವರನ್ನು ಕಡೆಗೆ ಅಲ್ಲಿದ್ದ ಪಲೀಸ್ ಸೈಡಿಗೆ ದಬ್ಬಿದ್ರು ಅಂತ ಸ್ವತಃ ಶ್ರೀನಾಥ್ ಅವರ ಫೇಸ್ ಬುಕ್ ಪೇಜಲ್ಲಿ ಬರೆದುಕೊಂಡಿದ್ದಾರೆ..! ಅಷ್ಟಕ್ಕೂ ಬಿಡದ ಶ್ರೀನಾಥ್ ಗಾಯಿತ್ರಿ ವಿಹಾರ್ ಕಡೆಯಿಂದ ಬರ್ತಿದ್ದ ಸಿಎಂ ಸೆಕ್ಯೂರಿಟಿ ಪೊಲೀಸಿನವರಿಗೂ ರಿಕ್ವೆಸ್ಟ್ ಮಾಡಿದ್ರು. ಅವರೂ ಸಹ ಇವರನ್ನು ಸೈಡಿಗೆ ತಳ್ಳಿ ಮುಂದೆ ಹೋದರು..! ಈ ಎಲ್ಲಾ ಸಿಎಂ ಜರ್ನಿ ಡ್ರಾಮಾ ಮುಗಿಯೋ ಟೈಮಿಗೆ ಆ ಮೂರೂ ಆಂಬುಲೆನ್ಸ್ ಗಳು ಸೈರನ್ ಹಾಕಿ ಬೇಡಿದ್ದೇ ಬಂತು.. 20 ನಿಮಿಷ ಆದ್ರೂ ಪೊಲೀಸರಿಗೆ ಆಂಬುಲೆನ್ಸ್ ಬಿಡೋ ಮನಸ್ಸಾಗಲೇ ಇಲ್ಲ..! ಇಷ್ಟೆಲ್ಲಾ ನೋಡ್ತಿದ್ದ ಶ್ರೀನಾಥ್ ಅವರಿಗೆ ನಮ್ಮ ವ್ಯವಸ್ಥೆ ಬಗ್ಗೆ ತುಂಬಾ ನೋವಾಗಿ ಇನ್ಸ್ ಪೆಕ್ಟರ್ ಬಳಿ ಹೋಗಿ ನಿಮ್ಮ ಹೆಸರೇನು ಅಂತ ಕೇಳಿದ್ರೆ `ನಾಗಲಿಂಗಯ್ಯ ಅಂತ, ಏನ್ ಮಾಡ್ಕೋತಿಯೋ ಮಾಡ್ಕೊ, ನಾವು ಸಿಎಂ ಡ್ಯೂಟಿಗೆ ಬಂದಿರೋದು, ಆಂಬುಲೆನ್ಸ್ ಬಿಡಕ್ಕಲ್ಲ’ ಅಂತ ಹೇಳಿ ಹೋದ್ರಂತೆ..! ಇದೆಲ್ಲವನ್ನೂ ತುಂಬಾ ನೋವಿನಿಂದ ಬರೆದುಕೊಂಡಿದ್ದಾರೆ ಶ್ರೀನಾಥ್..!
ಈಗ ಪ್ರಶ್ನೆ ಏನು ಗೊತ್ತಾ..? ಟ್ರಾಫಿಕ್ಕಲ್ಲಿ ಸಿಕ್ಕಾಕ್ಕೊಂಡ ಆಂಬುಲೆನ್ಸ್ ಅಥವಾ ಸಿಎಂ ವಾಹನಕ್ಕೆ ಜಾಗ ಮಾಡಿಕೊಡೋದು, ಇವೆರಡರಲ್ಲಿ ಯಾವುದು ಸಖತ್ ಇಂಪಾರ್ಟೆಂಟ್ ಅನ್ನೋದು..! ಸಿಎಂ ಅಂದ್ರೆ ರಾಜ್ಯಕ್ಕೆ ಬಹಳ ದೊಡ್ಡ ವ್ಯಕ್ತಿ, ಆಂಬುಲೆನ್ಸಲ್ಲಿ ಇರೋರು ಯಾರೋ ನಾರ್ಮಲ್ ಜನ, ಹಾಗಾಗಿ ಸಿಎಂ ವಾಹನಕ್ಕೆ ಜಾಗ ಮಾಡಿಕೊಡೋದೆ ಇಂಪಾರ್ಟೆಂಟ್ ಅಂತ ಯಾರಾದ್ರೂ ಇದಕ್ಕೂ ಕಮೆಂಟ್ ಹಾಕಿದ್ರೆ ಅಂತವರ ಬಗ್ಗೆ ಏನು ಹೇಳಬೇಕೋ ಗೊತ್ತಿಲ್ಲ.. ಒಂದಂತೂ ಸತ್ಯ, ಪೊಲೀಸರು ಮನಸ್ಸು ಮಾಡಿದ್ರೆ ಇಂತಹ ಸಂಧರ್ಭಗಳಲ್ಲಿ ಗಣ್ಯವ್ಯಕ್ತಿಗಳ ವಾಹನಕ್ಕೆ ಬ್ರೇಕ್ ಹಾಕಿಸಿ ಆಂಬುಲೆನ್ಸ್ ಗಳ ಆಕ್ಸಲೇಟರ್ ಒತ್ತಿಸಬಹುದು..! ಆದ್ರೆ ಯಾರಿಗೂ ಅದರ ಅವಶ್ಯಕತೆ ಇಲ್ಲ, ಬೇಗ ಸಿಎಂ ಪಾಸ್ ಆದ್ರೆ ಕಿರಿಕಿರಿ ಇರಲ್ಲ ಅನ್ನೋ ಮನೋಭಾವ..! ಹೀಗೆ ಟ್ರಾಫಿಕ್ಕಲ್ಲಿ ಆಂಬುಲೆನ್ಸ್ ನಿಂತಾಗ, ಅವರ ಎಸ್ಕಾರ್ಟ್ ವಾಹನಗಳಿಗೆ ಇನ್ಫಾರ್ಮೇಷನ್ ಕೊಟ್ಟು, ಮೊದಲು ಆಂಬುಲೆನ್ಸ್ ಬಿಟ್ಟು ನಂತರ ವಿಐಪಿ ವೆಹಿಕಲ್ ಬಿಡೋಕೆ ಯಾಕೆ ಸಾಧ್ಯವಿಲ್ಲ..? ಆ 20-30 ನಿಮಿಷದಲ್ಲಿ ಆಂಬುಲೆನ್ಸ್ ನಲ್ಲಿರೋ ವ್ಯಕ್ತಿ ಸಾವನ್ನಪ್ಪಿದ್ರೆ ಅದಕ್ಕೆ ಯಾರು ಹೊಣೆ..? ಪೊಲೀಸರೇ..? ಮಾನ್ಯ ಮುಖ್ಯಮಂತ್ರಿಗಳೇ..? ಇದೆಲ್ಲದರ ಅರಿವು ಮುಖ್ಯಮಂತ್ರಿಗಳಿಗೆ ಇಲ್ಲದೇ ಇರಬಹುದು, ಹಾಗೇನಾದ್ರೀ ಸಿಎಂ ಸಾಹೇಬ್ರಿಗೆ ಪರಿಸ್ಥಿತಿ ಹೀಗಿದೆ ಅಂತ ವಿವರಿಸಿದ್ರೆ, ಅವರೇ ಮೊದಲು ಆಂಬುಲೆನ್ಸ್ ಬಿಡಿ ಅಂತ ಹೇಳ್ತಿದ್ರೇನೋ. ಆದ್ರೆ ಅದನ್ನು ಸಿಎಂ ತನಕ ತಲುಪಿಸೋರ್ಯಾರು..? ಪ್ಲೀಸ್ ಉತ್ತರ ಕೊಡಿ..!
ಮಾನ್ಯ ಮುಖ್ಯಮಂತ್ರಿಗಳೇ, ರಾಜ್ಯದ ಜನತೆಯ ಪರವಾಗಿ ನಿಮಗೆ ಕೇಳಿಕೊಳ್ತೇನೆ.. ಇಂತಹ ಸಂಧರ್ಭದಲ್ಲಿ ಏನು ಮಾಡಬೇಕು ನೀವೇ ಹೇಳಿ..! ಆಂಬುಲೆನ್ಸ್ ಗಳು ಟ್ರಾಫಿಕ್ಕಲ್ಲಿ ನಿಂತು ಸಾರ್ವಜನಿಕರ ಪ್ರಾಣ ಹೋಗಬೇಕಾ..? ಅಥವಾ ಪೊಲೀಸರು ನಿಮಗೆ ಸಂಧರ್ಭ ವಿವರಿಸಿ ಮೊದಲು ಆಂಬುಲೆನ್ಸ್ ಗೆ ದಾರಿ ಮಾಡಿಕೊಡಬೇಕಾ..? ನಿಮ್ಮ ಹುಟ್ಟುಹಬ್ಬ ಇವತ್ತು, ನಿಮ್ಮಿಂದ ರಾಜ್ಯಕ್ಕೆ ಉಡುಗೊರೆ ಅನ್ನೋಹಾಗೆ ಇದಕ್ಕೆ ಉತ್ತರ ಕೊಡಿ..! ಇನ್ನುಮುಂದೆ ಯಾವುದೇ ಗಣ್ಯವ್ಯಕ್ತಿ ಹೋಗೋ ಕಾರಣಕ್ಕೆ ಟ್ರಾಫಿಕ್ಕಲ್ಲಿ ಗಂಟೆಗಟ್ಟಲೆ ಆಂಬುಲೆನ್ಸ್ ಗಳು ಸೈರನ್ ಹಾಕಿಕೊಂಡು ಬೇಡಿಕೊಳ್ಳೋದು ಬೇಡ, ಜನರ ಹೋಗಿ ಪೊಲೀಸರ ಕೈಕಾಲು ಹಿಡಿಯೋದು ಬೇಡ, ಪೊಲೀಸರು ಸಿಎಂ ನಮ್ಮ ದೇವರು, ಜನ ಸತ್ತರೆ ಸಾಯಲಿ ಅನ್ನೋ ಹಾಗೆ ರೆಸ್ಪಾಂಡ್ ಮಾಡೋದೂ ಬೇಡ..! ಪ್ಲೀಸ್ ಇದಕ್ಕೆ ಉತ್ತರ ಕೊಡಿ..
– ಕೀರ್ತಿ ಶಂಕರಘಟ್ಟ

LEAVE A REPLY

Please enter your comment!
Please enter your name here