ಈ ವರ್ಷ ಗೂಗಲ್ ನಲ್ಲಿ ಭಾರತೀಯರು ಹುಡುಕಿದ್ದೇನು..?

Date:

2015ರಲ್ಲಿ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಅತಿ ಹೆಚ್ಚು ಬಾರಿ ಯಾವ ಕ್ರೀಡಾಪಟುವಿಗಾಗಿ ಹುಡುಕಾಟ ನಡೆಸಲಾಗಿದೆ ಎಂಬ ವಿಷಯವನ್ನು ಪ್ರಕಟಿಸಲಾಗಿದೆ. ಅದರಲ್ಲೂ ಈ ಬಾರಿ ಅತಿ ದೊಡ್ಡ ಅಚ್ಚರಿ ಹಾಗೂ ಭಾರತಕ್ಕೆ ಹೆಮ್ಮೆ ತರುವ ಸುದ್ದಿ ಈ ಪ್ರಕಟಣೆಯಲ್ಲಿದೆ. ಅದೇನೆಂದರೆ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಅವರನ್ನು ಹಿಂದೆ ಹಾಕಿ ನಂ.1 ಸ್ಥಾನಕ್ಕೇರಿದ್ದಾರೆ.
ಯೆಸ್.. ಗೂಗಲ್ ಸರ್ಚ್ ಇಂಜಿನ್ ನಲ್ಲಿ ಅತಿ ಹೆಚ್ಚು ಹುಡಕಲ್ಪಟ್ಟಿರುವ ಸರ್ಚ್ ರಿಸಲ್ಟ್ ನ ಟಾಪ್ 10 ಪಟ್ಟಿಯಲ್ಲಿ ಆರು ಭಾರತೀಯ ಕ್ರೀಡಾಪಟುಗಳಿರುವುದು ವಿಶೇಷ. ಅದರಲ್ಲೂ ವಿಶ್ವಶ್ರೇಷ್ಟ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನೇ ವಿರಾಟ್ ಕೊಹ್ಲಿಯವರು ಹಿಂದಿಕ್ಕಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಇನ್ನು ಕ್ರಿಕೆಟ್ ನಿಂದ ನಿವೃತ್ತಿಯಾಗಿ 2 ವರ್ಷ ಕಳೆದರೂ ಕೂಡಾ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರವರ ಜನಪ್ರಿಯತೆ ಕುಗ್ಗಿಲ್ಲ. ಗೂಗಲ್ ಸರ್ಚ್ ನಲ್ಲಿ ಭಾರತದ ಏಕದಿನ ಕ್ರಿಕೆಟ್ ನಾಯಕ ಎಂ.ಎಸ್ ಧೋನಿಯನ್ನು ಹಿಂದಿಕ್ಕಿದ್ದು, ಸಚಿನ್ ತೆಂಡೂಲ್ಕರ್ ರವರು ಮೂರನೇ ಸ್ಥಾನಕ್ಕೇರಿದ್ದಾರೆ. ಇನ್ನು ಭಾರತದ ಏಕದಿನ ಮತ್ತು ಟಿ-20 ತಂಡದ ನಾಯಕ ಎಂ ಎಸ್ ಧೋನಿಯವರು 4ನೇ ಸ್ಥಾನದಲ್ಲಿದ್ದಾರೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ 2015 ಅತ್ಯಂತ ಯಶಸ್ಸು ತಂದುಕೊಟ್ಟ ವರ್ಷವಾಗಿದ್ದು, ಅವರು 7ನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತೀಯ ಕ್ರಿಕೆಟಿಗರಾದ ರೋಹಿತ್ ಶರ್ಮ ಹಾಗೂ ಯುವರಾಜ್ ಸಿಂಗ್ ಕ್ರಮವಾಗಿ 8 ಹಾಗೂ 9ನೇ ಸ್ಥಾನದಲ್ಲಿದ್ದಾರೆ.
ಟೆನಿಸ್ ಆಟಗಾರರಾದ ರೋಜರ್ ಫೆಡರರ್ ಗೂಗಲ್ ಸರ್ಚ್ ನಲ್ಲಿ ತಮ್ಮ ಚಾರ್ಮ್ ಉಳಿಸಿಕೊಂಡಿದ್ದು, 6ನೇ ಸ್ಥಾನದಲ್ಲಿದ್ದಾರೆ. ಅವರಿಗೆ ಟೆನಿಸ್ ನಲ್ಲಿ ಸವಾಲೆನಿಸಿರುವ ನೋವಾಕ್ ಜೋಕೊವಿಕ್ 10ನೇ ಸ್ಥಾನದಲ್ಲಿದ್ದಾರೆ.

S-4-2

ಟಾಪ್ 10 ಪಟ್ಟಿ ಹೀಗಿದೆ

1. ವಿರಾಟ್ ಕೊಹ್ಲಿ
2. ಲಿಯೊನೆಲ್ ಮೆಸ್ಸಿ
3. ಸಚಿನ್ ತೆಂಡೂಲ್ಕರ್
4. ಎಂಎಸ್ ಧೋನಿ
5. ಕ್ರಿಶ್ಚಿಯಾನೊ ರೊನಾಲ್ಡೊ
6. ರೋಜರ್ ಫೆಡರರ್
7. ಸಾನಿಯಾ ಮಿರ್ಜಾ
8. ರೋಹಿತ್ ಶರ್ಮ
9. ಯುವರಾಜ್ ಸಿಂಗ್
10. ನೋವಾಕ್ ಜೋಕೊವಿಕ್

ಇನ್ನು ಭಾರತದ ಯಾವ ವಿಷಯ ಅತಿ ಹೆಚ್ಚು ಪ್ರಮಾಣದಲ್ಲಿ ಹುಡುಕಲ್ಪಟ್ಟಿದೆ ಎಂಬ ವಿಷಯವನ್ನೂ ಗೂಗಲ್ ಪಟ್ಟಿ ಮಾಡಿದೆ. 2015ರ ಐಸಿಸಿ ವಿಶ್ವಕಪ್ ಇದರಲ್ಲಿ ಅಗ್ರಸ್ಥಾನ ಪಡೆದಿದ್ದು, ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಬಾಹುಬಲಿ ಚಿತ್ರ ಎರಡನೇ ಸ್ಥಾನ ಗಳಿಸಿದೆ. ಇನ್ನು ಬಾಲಿವುಡ್ ಬಾಕ್ಸ್ ಆಫೀಸನಲ್ಲಿ ಧೂಳೆಬ್ಬಿಸಿದ ಹಾಗೂ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಮತ್ತು ಪ್ರೇಮ್ ರತನ್ ಧನ್ ಪಾಯೋ ಚಿತ್ರಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಬಿಸಿಸಿಐನ ಚಿನ್ನದ ಮೊಟ್ಟೆ ಎಂದೇ ಖ್ಯಾತಿ ಪಡೆದಿರುವ ಐಪಿಎಲ್ ಈ ಬಾರಿ ಅತಿ ಹೆಚ್ಚು ಸರ್ಚ್ ಗೊಳಗಾದ ವಿಷಯಗಳಲ್ಲಿ ಐದನೇ ಸ್ಥಾನ ಪಡೆದಿದೆ. ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂರವರೂ ಕೂಡಾ ಈ ವರ್ಷ ಅತಿ ಹೆಚ್ಚು ಸುದ್ದಿಯಲ್ಲಿದ್ದು, ಅವರು ಆರನೇ ಸ್ಥಾನ ಪಡೆದಿದ್ದಾರೆ. ಎನ್ನು ಎಸ್ ಎಸ್ ಸಿ ಪರೀಕ್ಷೆ, ಬಿಗ್ ಬಾಸ್ 9, ಹಾಟ್ ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಗಳು ಕ್ರಮವಾಗಿ ಏಳರಿಂದ 10ನೇ ಸ್ಥಾನವನ್ನು ಪಡೆದಿವೆ.

ಇನ್ನು ಭಾರತದ ಯಾವ ವಿಷಯ ಅತಿ ಹೆಚ್ಚು ಪ್ರಮಾಣದಲ್ಲಿ ಹುಡುಕಲ್ಪಟ್ಟಿದೆ ಎಂಬ ವಿಷಯ

Google_Trends

ಅದರ ಪಟ್ಟಿ ಹೀಗಿದೆ ನೋಡಿ

1. ಐಸಿಸಿ ಕ್ರಿಕೆಟ್ ವಿಶ್ವಕಪ್ 2015
2. ಬಾಹುಬಲಿ
3. ಭಜರಂಗಿ ಭಾಯಿಜಾನ್
4. ಪ್ರೇಮ್ ರತನ್ ಧನ್ ಪಾಯೋ
5. ಐಪಿಎಲ್
6. ಎಪಿಜೆ ಅಬ್ದುಲ್ ಕಲಾಂ
7. ಎಸ್ ಎಸ್ ಸಿ ಪರೀಕ್ಷೆ
8. ಬಿಗ್ ಬಾಸ್ 9
9. ಹಾಟ್ ಸ್ಟಾರ್
10. ಸ್ಟಾರ್ ಸ್ಪೋರ್ಟ್ಸ್

ಈ ಬಾರಿ ಈ ಕಾಮರ್ಸ್ ಸೈಟ್ ಗಳ ಹಾವಳಿ ಹೆಚ್ಚಾಗಿಯೇ ಇತ್ತು. ಅದರಲ್ಲೂ ಆನ್ ಲೈನ್ ಶಾಪಿಂಗ್ ತಾಣಗಳು ಭರ್ಜರಿ ಹೆಸರು ಮಾಡಿದವು. ಈ ವರ್ಷ ಅತಿ ಹೆಚ್ಚು ಸರ್ಚ್ ಗೊಳಗಾದ ಇ-ಕಾಮರ್ಸ್ ಪಟ್ಟಿಯನ್ನೂ ಗೂಗಲ್ ಬಿಡುಗಡೆ ಮಾಡಿದ್ದು, ಆನ್ ಲೈನ್ ಮಾರುಕಟ್ಟೆಯ ದಿಗ್ಗಜ ಫ್ಲಿಪ್ ಕಾರ್ಟ್ ಅಗ್ರಸ್ಥಾನದಲ್ಲಿದೆ. ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ ಎರಡನೇ ಸ್ಥಾನದಲ್ಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರು ಮತ್ತು ಅಮೆರಿಕಾ ಮೂಲದ ಆನ್ ಲೈನ್ ಮಾರುಕಟ್ಟೆ ಅಮೇಜಾನ್ ನಾಲ್ಕು ಮತ್ತು ಸ್ನ್ಯಾಪ್ ಡೀಲ್ ಐದನೇ ಸ್ಥಾನದಲ್ಲಿವೆ.
ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುವ ಭಾರತೀಯ ರೈಲ್ವೇ ಆರನೇ ಸ್ಥಾನದಲ್ಲಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಏಳನೇ ಸ್ಥಾನದಲ್ಲಿದ್ದು, ಕ್ರಿಕೆಟ್ ಕುರಿತ ಅಪ್ ಡೇಟ್ ಗಳನ್ನು ನೀಡುವ ಕ್ರಿಕ್ ಬುಜ್ 8ನೇ ಸ್ಥಾನದಲ್ಲಿದೆ. ಇನ್ನು ಫೇಸ್ ಬುಕ್ ಒಡೆತನದ ವಾಟ್ಸ್ ಅಪ್ ಮತ್ತು ಆನ್ ಲೈನ್ ರೀಚಾರ್ಜ್ ತಾಣ ಪೇಟಿಯಂ ಕ್ರಮವಾಗಿ 9ನೇ ಮತ್ತು 10ನೇ ಸ್ಥಾನ ಪಡೆದಿವೆ.

S-5-2-700x394

ಅತಿ ಹೆಚ್ಚು ಸರ್ಚ್ ಗೊಳಗಾದ ಇ-ಕಾಮರ್ಸ್ ಪಟ್ಟಿ  ಹೀಗಿದೆ ನೋಡಿ

1. ಫ್ಲಿಪ್ ಕಾರ್ಟ್
2. ಐಆರ್ ಸಿಟಿಸಿ
3. ಎಸ್ ಬಿಐ
4. ಅಮೇಜಾನ್
5. ಸ್ನ್ಯಾಪ್ ಡೀಲ್
6. ಇಂಡಿಯನ್ ರೈಲ್ವೇ
7. ಎಚ್ ಡಿಎಫ್ ಸಿ ಬ್ಯಾಂಕ್
8. ಕ್ರಿಕ್ ಬುಜ್
9. ವಾಟ್ಸ್ ಅಪ್
10.ಪೇಟಿಎಂ

ಅತಿ ಹೆಚ್ಚು ಸರ್ಚ್ ಆದ ವ್ಯಕ್ತಿಗಳ ಪಟ್ಟಿ ಪ್ರತಿಯೊಬ್ಬರಲ್ಲೂ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರನ್ನೇ ಹಿಂದಿಕ್ಕಿರುವ ಸನ್ನಿ ಲಿಯೋನ್ ಅಗ್ರಸ್ಥಾನಕ್ಕೇರಿದ್ದು ಸಲ್ಮಾನ್ ಖಾನ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ವರ್ಷ ಎರಡು ಚಿತ್ರಗಳಲ್ಲಿ ನಟಿಸಿದ್ದ ಸನ್ನಿಯ ಲೀಲೆ ಹೇಗಿತ್ತು ಎಂಬುದು ಗೂಗಲ್ ಸರ್ಚ್ ನಿಂದ ತಿಳಿಯುತ್ತಿದೆ.
ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂರವರೂ ಕೂಡಾ ಈ ವರ್ಷ ಅತಿ ಹೆಚ್ಚು ಸುದ್ದಿಯಲ್ಲಿದ್ದು, ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಇನ್ನು ಕತ್ರಿನಾ ಕೈಪ್ 4 ಕನ್ನಡತಿ ದೀಪಿಕಾ ಪಡುಕೋಣೆ ಐದನೇ ಸ್ಥಾನ ಪಡೆದಿದ್ದಾರೆ. ಆದರೆ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.
ತನ್ನ ಹಾಡಿನ ಮೂಲಕವೇ ಸುದ್ದಿ ಮಾಡುತ್ತಿರುವ ಯೋ ಯೋ ಹನಿ ಸಿಂಗ್ 7ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸುವ ಮೂಲಕ ಸೌತ್ ಬ್ಯೂಟಿ ಕಾಜಲ್ ಅಗರ್ ವಾಲ್ ಅಚ್ಚರಿ ಮೂಡಿಸಿದ್ದಾರೆ. ಇನ್ನು ಅಲಿಯಾ ಭಟ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕ್ರಮವಾಗಿ 9 ಮತ್ತು 10ನೇ ಸ್ಥಾನದಲ್ಲಿದ್ದಾರೆ.

S-3-2

2015ರಲ್ಲಿ ಅತಿ ಹೆಚ್ಚು ಸರ್ಚ್ ಆದವರ ಪಟ್ಟಿ ಹೀಗಿದೆ ನೋಡಿ

1. ಸನ್ನಿ ಲಿಯೋನ್
2. ಸಲ್ಮಾನ್ ಖಾನ್
3. ಎಪಿಜೆ ಅಬ್ದುಲ್ ಕಲಾಂ
4. ಕತ್ರಿನಾ ಕೈಫ್
5. ದೀಪಿಕಾ ಪಡುಕೋಣೆ
6. ಶಾರುಖ್ ಖಾನ್
7. ಯೋ ಯೋ ಹನಿ ಸಿಂಗ್
8. ಕಾಜಲ್ ಅಗರ್ ವಾಲ್
9. ಆಲಿಯಾ ಭಟ್
10. ನರೇಂದ್ರ ಮೋದಿ

ಯಾವ ಬಾಲಿವುಡ್ ನಟಿಯರು ಅತಿ ಹೆಚ್ಚು ಸರ್ಚ್ ಆಗಿದ್ದಾರೆ ಎಂದು ಗಮನಿಸಿದರೆ ಅಲ್ಲೂ ಸನ್ನಿ ಹವಾ ಜೋರಾಗಿದೆ. ಏಕೆಂದರೆ ಇಲ್ಲೂ ಕೂಡಾ ಸನ್ನಿ ಲಿಯೋನ್ ಅಗ್ರಸ್ಥಾನ ಗಳಿಸಿದ್ದಾಳೆ. ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದು ಸನ್ನಿಯನ್ನು ಹಿಂಬಾಲಿಸಿದ್ದಾರೆ. ಆಲಿಯಾ ಭಟ್ ಮತ್ತು ರಾಧಿಕಾ ಆಪ್ಟೆ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ.
ಕನ್ನಡತಿಯರಾದ ಅನುಷ್ಕಾ ಶರ್ಮಾ ಮತ್ತು ಐಶ್ವರ್ಯಾ ರೈ ಬಚ್ಚನ್ ಆರು ಮತ್ತು ಏಳನೇ ಸ್ಥಾನ ಗಳಿಸಿದ್ದಾರೆ. ಇನ್ನು ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ 8 ಮತ್ತು 9ನೇ ಸ್ಥಾನ ಪಡೆದಿದ್ದಾರೆ. ಆದರೆ ಪಟ್ಟಿಯಲ್ಲೇ ಅತಿ ದೊಡ್ಡ ಅಚ್ಚರಿ ಎಂದರೆ ಪೂನಮ್ ಪಾಂಡೆ. ಸದಾ ವಿವಾದದಲ್ಲಿ ಸಿಲುಕಿಕೊಳ್ಳುವ ಈ ನಟಿ 10ನೇ ಸ್ಥಾನ ಪಡೆದು ಅಚ್ಚರಿಗೆ ಕಾರಣವಾಗಿದ್ದಾಳೆ.

S-6-2

ಟಾಪ್ 10 ಪಟ್ಟಿಯಲ್ಲಿರುವ ಬಾಲಿವುಡ್ ನಟಿಯರ ಪಟ್ಟಿ ಹೀಗಿದೆ

1. ಸನ್ನಿ ಲಿಯೋನ್
2. ಕತ್ರಿನಾ ಕೈಫ್
3. ದೀಪಿಕಾ ಪಡುಕೋಣೆ
4. ಆಲಿಯಾ ಭಟ್
5. ರಾಧಿಕಾ ಆಪ್ಟೆ
6. ಅನುಷ್ಕಾ ಶರ್ಮಾ
7. ಐಶ್ವರ್ಯಾ ರೈ
8. ಕರೀನಾ ಕಪೂರ್
9. ಪ್ರಿಯಾಂಕಾ ಚೋಪ್ರಾ
10. ಪೂನಮ್ ಪಾಂಡೆ

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದೀಯಾ ಅಂತ ಅಮ್ಮನನ್ನು ಹಿಂಸಿಸುತ್ತಿದ್ದ ಅಪ್ಪ..! ಪುಟ್ಟ ಮಕ್ಕಳನ್ನು ಎತ್ತಿಕೊಂಡು ಉಟ್ಟ ಬಟ್ಟೆಯಲ್ಲೇ ರಾತ್ರೋ ರಾತ್ರಿ ಮನೆ ಬಿಟ್ಟ ತಾಯಿ..!

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

Share post:

Subscribe

spot_imgspot_img

Popular

More like this
Related

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...