ನವದೆಹಲಿ: ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ಕಡಿತಗೊಳಿಸಿದ್ದು ಪ್ರತಿ ಲೀಟರ್ ಗೆ 2 ರೂ ದರ ಇಳಿಕೆಯಾಗಿದೆ.
ಈ ನೂತನ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಸರಕಾರ ಇಂಧನ ಬೆಲೆಗಳ ದಿನ ನಿತ್ಯದ ಪರಿಷ್ಕರಣೆ ಮಾಡಿದ ಬಳಿಕ ಸಹಜವಾಗಿ ದಿನಕ್ಕೊಂದು ಬೆಲೆ ಇದ್ದು, ಮಂಗಳವಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 70.88 ರೂ ಹಾಗೂ ಮುಂಬೈಯಲ್ಲಿ 79.99 ರೂ ಇದೆ. ಇದೀಗ ಅಬಕಾರಿ ತೆರಿಗೆಯನ್ನು ಕಡಿತಗೊಳಿಸಿರುವುದರಿಂದ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 68.83 ರೂ, ಡೀಸೆಲ್ ದರ ಲೀಟರ್ ಗೆ 57.07 ರೂ ಆಗಲಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 69.99 ರೂ ಹಾಗೂ ಡೀಸೆಲ್ ಬೆಲೆ 59.25 ರೂ ಆಗಲಿದೆ. ಆಯಾಯ ಪ್ರದೇಶಗಳಿಗನುಗುಣವಾಗಿ ಪೈಸೆಗಳಲ್ಲಿ ದರ ವ್ಯತ್ಯಾಸವಾಗಲಿದೆ.