ಪ್ರಾಕ್ಟಿಕಲ್ ಆಗಿ ಸತ್ತಮೇಲೆ ಸಾರ್ಥಕರೆನಿಸಿಕೊಂಡವರು ಯಾರು ಅಂದರೇ ಮೊದಲಿಗೆ ರಾಜ್ ಕುಮಾರ್ ನೆನಪಾಗುತ್ತಾರೆ. ಡಾ ರಾಜ್ ಕುಮಾರ್ ಇದ್ದಷ್ಟು ದಿನ ಅದ್ಭುತ ಕಲಾವಿದರಾಗಿ, ಒಳ್ಳೇ ಮನುಷ್ಯರಾಗಿ ಅಭಿಮಾನಿಗಳ ಎದೆಯಲ್ಲಿ ಚಿರವಾಗುಳಿದಿದ್ದಾರೆ. ಸತ್ತ ಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಿ ದೊಡ್ಡವರು ಎನಿಸಿಕೊಂಡರು. ಇವರ ಹಾದಿಯಲ್ಲೇ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಇದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ಡೊನೇಷನ್ ಕಾರ್ಡ್ ಗೆ ಸಹಿ ಹಾಕಿದ್ದಾರೆ. ಆ ಮೂಲಕ ಬಿಗ್ ಬಿ ಕೂಡ ದೊಡ್ಡವರು ಎನಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ. ಅವರ ಪತ್ನಿ ಜಯಾ ಬಚ್ಚನ್ ಕೂಡ ಮರಣ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ಸಹಿ ಹಾಕಿದ್ದಾರೆ.
ಅತ್ತೆ-ಮಾವನ ಹಾದಿಯನ್ನೇ ತುಳಿದಿರುವ ಐಶ್ವರ್ಯ ರೈ ಬಚ್ಚನ್ ಸಹ ಸತ್ತನಂತರ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಬಾಲಿವುಡ್ ಚಿತ್ರರಂಗ ಯಾವತ್ತಿಗೂ ಮರೆಯದ ಆ ಕಣ್ಣುಗಳು, ಅವಳ ಮರಣ ನಂತರ ಅದ್ಯಾರೋ ಅದೃಷ್ಟವಂತರಿಗೆ ಉಪಯೋಗವಾಗುತ್ತೆ ಅಂದರೇ ಎಂಥಾ ಸೊಗಸು. ಇವರ ಸಾಲಿಗೆ ಸೇರುವ ನಟ ಸುನೀಲ್ ಶೆಟ್ಟಿ. ಸುನೀಲ್ ಶೆಟ್ಟಿ ಸಿನಿಮಾಗಳೆಂದರೇ ಸಾಕು ಸಾಹಸಪ್ರಿಯರಿಗೆ ಹಬ್ಬವಿದ್ದಂತೆ. ಅಂಥ ಕಲಾವಿದ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿದ್ದಾರೆ. ಕೇವಲ ಚಿತ್ರರಂಗದಲ್ಲಿ ಒಳ್ಳೊಳ್ಳೆ ಡೈಲಾಗ್ ಒಗಾಯಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಇಂತಹ ವಿಚಾರಗಳಲ್ಲಿ ಇವರೆಲ್ಲ ನಿಜವಾದ ಸೆಲೆಬ್ರಿಟಿಗಳು ಎನಿಸಿಕೊಳ್ಳುತ್ತಾರೆ.
ರಾಜ್ ಕುಮಾರ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಸುನೀಲ್ ಶೆಟ್ಟಿ ಅವರಂಥ ಅದೆಷ್ಟೊ ಸೆಲೆಬ್ರಿಟಿಗಳು ಸತ್ತನಂತರ ತಮ್ಮ ದೇಹದ ಅಂಗವನ್ನು ದಾನ ಮಾಡಿ ಶ್ರೇಷ್ಟರೆನಿಸಿಕೊಂಡಿದ್ದಾರೆ. ಅಂತಹ ಅದೆಷ್ಟೋ ಕಲಾವಿದರ ಸಾಲಿಗೆ ಬಾಲಿವುಡ್ ದಿಗ್ಗಜ ಅಮಿರ್ ಖಾನ್ ಕೂಡ ಸೇರಿಕೊಳ್ಳುತ್ತಾರೆ. ಅಮೀರ್ ಖಾನ್ ತಮ್ಮ ದೇಹದ ಅಷ್ಟೂ ಅಂಗಾಂಗಗಳನ್ನು ದಾನ ಮಾಡುವುದಾಗಿ ಮಾರ್ಚ್ 27, 2014 ರಂದು ಮುಂಬೈನ ಕೆಇಎಮ್ ಹಾಸ್ಪಿಟಲ್ ನಲ್ಲಿ ಡೊನೇಷನ್ ಕಾರ್ಡ್ ಗೆ ಸಹಿ ಹಾಕಿದ್ದಾರೆ. ಕಣ್ಣು, ಹೃದಯ, ಶ್ವಾಸಕೋಶ, ಕಿಡ್ನಿ, ಕರುಳನ್ನೆಲ್ಲಾ ಅಮೀರ್ ಖಾನ್ ದಾನ ಮಾಡಿದ್ದಾರೆ. ಇದಕ್ಕೂ ಮುನ್ನ ಅಮೀರ್ ಖಾನ್ ಪತ್ನಿ ಕಿರಣ್ ರಾವ್ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಿದ್ದರು. ಆದರೆ ಅಮೀರ್ ಖಾನ್ ತಮ್ಮ ದೇಹವನ್ನು ದಾನ ಮಾಡಿದ್ದರ ಬಗ್ಗೆ ಸ್ವಲ್ಪ ತೀಕ್ಷ್ಣವಾಗಿ ಪಾಕಿಸ್ತಾನದ ಮಾಧ್ಯಮಗಳು ಟೀಕಿಸಿದ್ದವು. ಅಮೀರ್ ಖಾನ್ ಮುಸ್ಲಿಂ ಧರ್ಮವನ್ನು ಪಾಲಿಸುತ್ತಿದ್ದಾರೆ. ಅಂದಮೇಲೆ ಅವರು ದೇಹದಾನ ಮಾಡುವಂತಿಲ್ಲ. ಇಸ್ಲಾಂ ಷರಿಯತ್ ಪ್ರಕಾರ ಅದು ಹರಾಂ ಎಂದು ಟೀಕಿಸಿದ್ದವು. ಸತ್ತಮೇಲೆ ದೇಹ ವ್ಯರ್ಥವಾಗುವುದರ ಬದಲು ಯಾರಿಗಾದರೂ ಉಪಯೋಗವಾಗಲಿ ಎಂದು ಬಯಸುತ್ತಿರುವ ಅಮೀರ್ ಇಂಥ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಆ ಮೂಲಕ ಈ ಜನಪ್ರಿಯ ಸೆಲೆಬ್ರಿಟಿ ಸಾಯುವ ಮುನ್ನ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗಿದ್ದಾರೆ.
ಇನ್ನು ಪ್ರಿಯಾಂಕ ಛೋಪ್ರಾ. ಬಿಹಾರದ ಜೆಮ್ ಶೇಡ್ ಪುರದವರು. ನೋಡುವುದಕ್ಕೆ ಕ್ಯೂಟ್ ಸುಂದರಿ. ಮಿಸ್ ವರ್ಲ್ಡ್ ಆಗಿದ್ದೇ ಬಾಲಿವುಡ್ ಚಿತ್ರರಂಗ ಚಾದರವನ್ನು ಹಾಸಿತ್ತು. ಬಾಲಿವುಡ್ ನ ಟಾಪ್ ಹಿರೋಯಿನ್ಗಳಲ್ಲಿ ಒಬ್ಬರಾಗಿರುವ ಪ್ರಿಯಾಂಕ ಚೋಪ್ರಾ ಕೂಡ ಮರಣ ನಂತರ ತಮ್ಮ ದೇಹದ ಎಲ್ಲಾ ಅಂಗಾಂಗಗಳನ್ನು ದಾನ ಮಾಡುವುದಾಗಿ ಡೊನೇಷನ್ ಕಾರ್ಡ್ ಗೆ ಸಹಿ ಹಾಕಿದ್ದಾರೆ. ಚಂದದ ಹುಡುಗಿಯ ಚಂದದ ನಿರ್ಧಾರ ಚಂದವೆನಿಸುತ್ತೆ ಅಲ್ವಾ..?. ಇವರ ಹಾದಿಯಲ್ಲಿರುವ ಇನ್ನೊಬ್ಬ ಸೆಲೆಬ್ರಿಟಿ ಫರ್ಹಾ ಖಾನ್. ಆಲ್ ಮೋಸ್ಟ್ ಬಾಲಿವುಡ್ ಚಿತ್ರರಂಗದ ತೆರೆಮರೆಯ ಮರೆಯದ ಕಹಾನಿ ಇವರು. ಅವರಿಗೆ ಈಗ ಬರೋಬ್ಬರಿ ಐವತ್ತೊಂದು ವರ್ಷ. ಇವ್ರು ಮೈ ಹೂಂ ನಾ, ಓಂ ಶಾಂತಿ ಓಂ, ತೀಸ್ ಮಾರ್ ಖಾನ್ನಂಥ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರೆ. ಅಸಂಖ್ಯಾ ಬಾಲಿವುಡ್ ಚಿತ್ರಗಳಿಗೆ ಕೋರಿಯೋಗ್ರಾಫರ್ ಕೂಡ ಆಗಿದ್ದಾರೆ. ಬಾಲಿವುಡ್ ನ ಈ ಚಂದದ ಕೋರಿಯೊಗ್ರಾಫರ್ ಮರಣ ನಂತರ ತಮ್ಮ ದೇಹವನ್ನು ದಾನ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ ಈ ನೃತ್ಯಪ್ರವೀಣೆ ತನ್ನ ದೊಡ್ಡತನವನ್ನು ಮೆರೆದಿದ್ದಾರೆ. ಇನ್ನು ಇವರ ಹಾದಿಯಲ್ಲಿ ಬಹುಭಾಷೆ ಅಭಿನೇತ್ರಿ ನಂದಿತಾ ದಾಸ್ ಕೂಡ ಸೇರಿಕೊಂಡಿದ್ದಾರೆ.
ಕೆಲವರಿಗೆ ಈ ನಂದಿತ ದಾಸ್ ಅಷ್ಟಾಗಿ ಪರಿಚಯವಿಲ್ಲ. ಭಾರತೀಯ ಚಿತ್ರರಂಗ ಮಾತ್ರವಲ್ಲ, ಪಾಕಿಸ್ತಾನಿ ಚಿತ್ರದಲ್ಲೂ ನಟಿಸಿದ್ದಾರೆ. ಕನ್ನಡದ ದೇವೀರಿ ಸೇರಿದಂತೆ ಅನೇಕ ಅವಾರ್ಡ್ ಸಿನಿಮಾಗಳಲ್ಲಿ ಅಭಿನಯಿಸಿ ಗ್ರೇಟ್ ಅನಿಸಿಕೊಂಡಿದ್ದಾರೆ. ಮುಂಬೈ ಮೂಲದ ಈ ನಟಿ, ಮರಣ ನಂತರ ತನ್ನ ದೇಹದ ಎಲ್ಲಾ ಅಂಗಾಂಗಗಳನ್ನು ದಾನ ಮಾಡುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕೇವಲ ಸಿನಿಮಾ ತಾರೆಯರು ಮಾತ್ರವಲ್ಲ ಖ್ಯಾತ ಕ್ರಿಕೆಟ್ ತಾರೆಯರು ಸಹ ಅಂಗಾಂಗ ದಾನ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ ಅಭಿಮಾನಿಗಳ ಎದೆಯಲ್ಲಿ ನಿರಂತರವಾಗಿ ಬೌಂಡರಿ ಚಚ್ಚುವ ಶಪಥ ಮಾಡಿದ್ದಾರೆ.
ಫಾರ್ಮ್ ಅನ್ನು ಒಂದೇ ತೆರನಾಗಿ ಕಾಪಾಡಿಕೊಂಡಿದ್ದರೇ ಇವತ್ತಿಗೆ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿ ಬೆಳೆಯುತ್ತಿದ್ದರು ವಿನೋದ್ ಕಾಂಬ್ಳಿ. ಮುಂಬೈ ಮೂಲದ ಎಡಗೈ ಆಟಗಾರ 1992ರಲ್ಲಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟಿದ್ದರು. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೋಲ್ಕರ್ ಬಾಲ್ಯ ಸ್ನೇಹಿತರಾಗಿದ್ದರು. ಅದೇನಾಯ್ತೋ ಅಂಗಣದಲ್ಲಿ ಸಿಡಿಲಿನಂತೆ ಅಬ್ಬರಿಸುತ್ತಿದ್ದ ಕಾಂಬ್ಳಿ, ಸಡನ್ನಾಗಿ ಫಾರ್ಮ್ ಕಳೆದುಕೊಂಡುಬಿಟ್ಟರು. ಕ್ರಿಕೆಟ್ ನಿಂದ ದೂರ ಸರಿದ ನಂತರ ಕ್ರಿಕೆಟ್ ಜಗತ್ತಿನ ಆಗು ಹೋಗುಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ವಿನೋದ್ ಕಾಂಬ್ಳಿ ಮರಣ ನಂತರ ತಮ್ಮ ದೇಹವನ್ನು ದಾನ ಮಾಡುವುದಾಗಿ ಸಹಿ ಹಾಕಿದ್ದಾರೆ. ಜೊತೆಗೆ ಈ ಬಗ್ಗೆ ಹಲವು ವರ್ಷಗಳಿಂದ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.
ಕ್ರಿಕೆಟ್ ಜಗತ್ತು ಕಂಡ ಅದ್ಭುತ ಲೆಗ್ ಸ್ಪಿನ್ ಮಾಂತ್ರಿಕ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅನಿಲ್ ಗೆ ಕ್ರಿಕೆಟ್ ರಂಗ 19ನೇ ವಯಸ್ಸಿನಲ್ಲೆ ಕೈಬೀಸಿ ಕರೆಯಿತು. 1990ರಲ್ಲಿ ಕ್ರಿಕೆಟ್ ಆಟ ಶುರು ಮಾಡಿದರು. ಆನಂತರ ಭಾರತ ಕ್ರಿಕೆಟ್ ಪ್ರಪಂಚದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದರು. ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಅನಾಮತ್ತು ಹತ್ತು ವಿಕೆಟ್ ಗಳನ್ನು ಕಿತ್ತು ವಿಶ್ವ ದಾಖಲೆ ಬರೆದರು. 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರು. ದೇಶಕ್ಕೆ ಹೆಸರು ಕೀರ್ತಿ ತಂದ ಅನಿಲ್ ಕುಂಬ್ಳೆ ತಮ್ಮ ಕಣ್ಣುಗಳನ್ನು ಸತ್ತ ಮೇಲೆ ಅಂದರಿಗೆ ದಾನ ಮಾಡುವುದಾಗಿ ಡೊನೇಷನ್ ಕಾರ್ಡ್ ಗೆ ಸಹಿ ಹಾಕಿದ್ದಾರೆ.
1983ರಲ್ಲಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಸಿದ್ದು 1998ರಲ್ಲಿ ವಿದಾಯ ಹೇಳಿದ್ದರು. ಅಷ್ಟರಲ್ಲಿ ಅವರು ಹಲವಾರು ದಾಖಲೆಗಳನ್ನು ಬರೆದಿದ್ದರು. ಒಳ್ಳೆ ಕ್ರಿಕೆಟರ್ ಮಾತ್ರವಲ್ಲ, ಎಲ್ಲರ ಅಚ್ಚು ಮೆಚ್ಚಿನ ಕಮೆಂಟೇಟರ್ ಕೂಡ ಹೌದು. ಜೊತೆಗೆ ರಿಯಾಲಿಟಿ ಶೋಗಳ ಸರದಾರ. ರಾಜಕೀಯದಲ್ಲೂ ಕೈ ಮುಂದು. ಮಲ್ಟಿ ಟ್ಯಾಲೆಂಟೆಡ್ ಸಿದ್ದು ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡುವುದಾಗಿ ಸಹಿ ಹಾಕಿದ್ದಾರೆ. ಜೀವಂತವಾಗಿರುವಾಗ ಜನಸ್ನೇಹಿಯಾಗಿರುವ ಸಿದ್ದು ಮರಣ ನಂತರವೂ ಜನರ ನೆನಪಿನಲ್ಲಿ ಅಮರವಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಸಾಲಿನಲ್ಲಿ ನಿಂತಿರುವ ಆಟಗಾರ ಗೌತಮ್ ಗಂಭೀರ್. ಭಾರತ ಕ್ರಿಕೆಟ್ ತಂಡದ ಭರವಸೆಯ ಆರಂಭಿಕ ದಾಂಡಿಗರಾಗಿದ್ದರು. ಭಾರತ ಕ್ರಿಕೆಟ್ ತಂಡದಲ್ಲಿ ವೀರೇಂದ್ರ ಸೆಹ್ವಾಗ್- ಗೌತಮ್ ಗಂಭೀರ್ ಜೋಡಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಈ ಬ್ಯಾಟ್ಸ್ ಮನ್, 2011ರ ವರ್ಲ್ಡ್ ಕಪ್ ಎತ್ತಿ ಹಿಡಿದ ಭಾರತ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಸಧ್ಯಕ್ಕೆ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗಿಳಿದಿದ್ದಾರೆ. ಈಗ ಗಂಭೀರ್ ಕೂಡ ತಮ್ಮ ಮರಣದ ನಂತರ ದೇಹವನ್ನು ದಾನ ಮಾಡುವುದಾಗಿ ಹೇಳಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ರಾಜಸ್ಥಾನದ ಹುಡುಗ ಕರುಣಾ ನಾಯರ್, ಬಯೋಕನ್ ಮುಖ್ಯಸ್ಥೆ ಕಿರಣ್ ಮಜುಮ್ ದಾರ್ ಕೂಡ ತಮ್ಮ ದೇಹದ ಅಂಗಾಂಗ ದಾನ ಮಾಡಿ ಹಲವರಿಗೆ ಮಾದರಿಯಾಗಿದ್ದಾರೆ. ಬದುಕಿದ್ದಷ್ಟು ದಿನ ಯಶೋಗಾಥೆ ಬರೆದ ಈ ಸೆಲೆಬ್ರಿಟಿಗಳು, ಮರಣ ಹೊಂದಿದ ನಂತರವೂ ಜನಮಾನಸದಲ್ಲಿ ಅಮರರಾಗಲಿದ್ದಾರೆ.
- ರಾ ಚಿಂತನ್
POPULAR STORIES :
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಮೀನಾಕುಮಾರಿ ಅದೇಕೆ ಕುಡಿದು ಸತ್ತಳು…!? `ದಿಲ್ ಸಾ ಜಬ್ ಸಾಥಿ ಪಾಯ, ಬೇಚೈನೀ ಭೀ ವೋ ಸಾಥ್ ಆಯಾ’
ಸಂಜಯ್ ದತ್ ನಾಪತ್ತೆ..!? ಜೈಲಿಂದ ಬಂದನಂತರ ಖಳನಾಯಕನ ಸುಳಿವಿಲ್ಲ..!?
ನೀವೂ ಫಿಟ್ ಆಗಿ, ಆರೋಗ್ಯವಾಗಿರೋಕೆ ಈಗ ಸಂಜನಾ ಹೇಳಿಕೊಡ್ತಾರಂತೆ ಯೋಗ.!