ಮನೆ ಅಂದ ಹೆಚ್ಚಿಸುವ ಅಲಂಕಾರಿಕ ಸಸ್ಯಗಳು

Date:

ಯಾರಿಗ್ ತಾನೇ ನಮ್ಮ ಮನೆ ಚೆನ್ನಾಗಿ ಕಾಣಬೇಕು, ಎಲ್ಲರೂ ನಮ್ಮ ಮನೆಂi ಅಲಂಕಾರ ಹೊಗಳಬೇಕು ಎನ್ನುವ ಆಸೆ ಇರಲ್ಲ. ಈ ಆಸೆ ಈಡೇರಿಸುವುದಕ್ಕೆ ಹೊಸ ರೀತಿಯ ಗೃಹಾಲಂಕಾರ ತಂತ್ರಗಳು ಸೃಷ್ಟಿಯಾಗಿವೆ. ಹೊಸ ಅಲಂಕಾರಿಕ ವಿಧಾನ ಮತ್ತು ಆಂತರಿಕ ವಿನ್ಯಾಸದಲ್ಲಿ ಸಸ್ಯಗಳು ಪ್ರಮುಖ ಭಾಗವಾಗಿವೆ. ಗಾರ್ಡನ್ ಕಲಾಕೃತಿಗಳೊಂದಿಗೆ ಸಸ್ಯಗಳು ಮತ್ತು ಮನೆಯೊಡೆಯರ ಸೃಜನಾತ್ಮಕ ಚಿಂತನೆಗಳು ನಿವಾಸವನ್ನು ಹೆಚ್ಚು ಚಂದ ಕಾಣಿಸುತ್ತವೆ. ಸಸ್ಯಗಳಿಂದ ಮನೆ ಅಲಂಕರಿಸುವಾಗ ಕೆಲವು ಅಂಶಗಳನ್ನು ಅನುಸರಿಸಿದರೆ ಮನೆಯನ್ನು ನಮ್ಮಿಷ್ಟದಂತೆ ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡಬಹುದು.

ಪಾಟ್‍ಗಳ ಆಯ್ಕೆಯಲ್ಲಿರಲಿ ಜಾಣ್ಮೆ
ಸಸ್ಯಗಳ ಜತೆ ಮನೆ ಅಲಂಕರಿಸುವಾಗ ಪಾಟ್‍ಗಳ ಆಯ್ಕೆಯಲ್ಲಿ ಹೆಚ್ಚಿನ ಗಮನಹರಿಸಿದರೆ ಗೃಹಾಲಂಕಾರ ಅದ್ಬುತವಾಗುತ್ತದೆ. ಮನೆಯ ಬಣ್ಣ, ವಿನ್ಯಾಸಕ್ಕೆ ಸರಿ ಹೊಂದುವ ಹಾಗೂ ಸೃಜನಾತ್ಮಕ ಕಲೆ ಮೂಡಿರುವ ಪಾಟ್‍ಗಳ ಆಯ್ಕೆಯಲ್ಲಿ ಮನೆಯೊಡೆಯ ಜಾಣತನ ತೋರಿಸಿದರೆ ನೋಡಿದವರು ವಾವ್ಹ್ ಎನ್ನುವಂತೆ ಮನೆ ಅಲಂಕಾರ ಮಾಡಬಹುದು. ಪಾಟ್‍ಗಳು ಸಿರಾಮಿಕ್, ಟೆರಾಕೋಟಾ, ಪಾಲ್ಟ್ರೋಪೆಲೀನ್, ಕಲ್ಲು ಅಥವಾ ಫೈಬರ್‍ಗಳಾದ್ದಾಗಿರಬಹುದು. ಅವುಗಳನ್ನು ಮನೆ ವಿನ್ಯಾಸಕ್ಕೆ ತಕ್ಕಂತೆ ಆಯ್ದಕೊಳ್ಳಬೇಕು. ಸ್ಥಳಾವಾಕಾಶ ಆಧರಿಸಿ ಪಾಟ್‍ಗಳ ಗಾತ್ರದ ಕಡೆಯು ಗಮನಹರಿಸುವುದು ಒಳಿತು.

ಮನೆಗೊಂದುವಂತಿರಲಿ ಸಸ್ಯಗಳು
ಪಾಟ್‍ಗಳ ಆಯ್ಕೆ ನಂತರ ಅವುಗಳಿಗೆ ತಕ್ಕಂತೆ ಪಾಟ್‍ಗಳಲ್ಲಿ ನೆಡಲು ಸಸ್ಯಗಳನ್ನು ಆಯ್ಕೆ ಮಾಡಬೇಕು. ಮನೆಯಲ್ಲಿ ಬೆಳಕಿನ ಮತ್ತು ಶಾಖದ ಲಭ್ಯತೆಯ ಪ್ರಮಾಣ ಆಧರಿಸಿ ಸಸ್ಯ ಪ್ರಭೇದ ಆಯ್ದುಕೊಳ್ಳುವುದು ಉತ್ತಮ. ಮನೆಯ ಒಳಾಂಗಣದಲ್ಲಿ ಶಾಖ ಮತ್ತು ಬೆಳಕನ್ನು ಹೆಚ್ಚಾಗಿ ಬೇಡದ ಸ್ಪಥೀಪಿಲ್ಲಮ್ ಮತ್ತು ಸನ್ಸ್‍ವೀರಾಗಳಂತಹ ಸಸ್ಯಗಳನ್ನು ಇರಿಸಬಹುದು. ಬೆಳಕನ್ನು ಹೆಚ್ಚು ಬೇಡುವ ಪ್ರಭೇದಗಳಾದ ಮರಗಳು ಮತ್ತು ಜರಿಸಸ್ಯಗಳನ್ನು ಬಾಗಿಲು ಮತ್ತು ಕಿಟಕಿಯತ್ತಿರ ಇರಿಸುವುದು ಒಳಿತು.
ಮನೆ ಸ್ಕೈಲೈಟ್ ಹೊಂದಿದ್ದರೆ ಹೊರಾಂಗಣದಲ್ಲಿ ಇರಿಸಬಹುದಾದ ಹೂ ಗಿಡಗಳು, ಮರಗಳು ಮತ್ತು ವಿವಿಧ ವರ್ಣದ ಸಸ್ಯಗಳನ್ನು ಖರೀದಿಸಿ ಮನೆಯೊಳಗೆ ಅಲಂಕರಿಸಬಹುದು. ಸಸ್ಯಗಳ ಆಯ್ಕೆ ಮನೆ ಮಾಲೀಕರ ಸಸ್ಯ ನಿರ್ವಹಣೆ ಜ್ಞಾನ ಮತ್ತು ಅನುಭವ ಆಧರಿಸಿದೆ. ಆದರೂ ಕನಿಷ್ಠ ನಿರ್ವಹಣೆ ಬೇಡುವ ಸಸ್ಯಗಳಲ್ಲಿ ಸಾಕಷ್ಟು ಆಯ್ಕೆಗಳಿದ್ದು, ಮನೆಯನ್ನು ಉತ್ತಮವಾಗಿ ಸಿಂಗರಿಸಬಹುದು.

ಮನೆ ಚಂದಗಾಣಿಸುವ ಉದ್ಯಾನ ಕಲಾಕೃತಿಗಳು
ಉದ್ಯಾನ ಕಲಾಕೃತಿಗಳು ಮತ್ತು ಅವುಗಳ ಬಿಡಿಭಾಗಗಳು ಮನೆಯೊಳಗಿನ ಉದ್ಯಾನದ ಹಸಿರು ನೋಟವನ್ನು ಆಕರ್ಷಕವಾಗಿಸುತ್ತವೆ. ಮನೆಯೊಳಗಿನ ಕಾರಂಜಿಗಳು ನೋಡುಗರನ್ನು ಸೆಳೆಯುವುದಲ್ಲದೇ, ಸುತ್ತಲಿನ ವಾತಾವರಣದ ಸೌಂದರ್ಯ ಹೆಚ್ಚಿಸುತ್ತವೆ. ಗೋಡೆಗೆ ಹಾಕಬಹುದಾದ ಅಥವಾ ಛಾವಣಿಗೆ ನೇತು ಹಾಕಬಹುದಾದ ಶಿಲ್ಪಕಲೆ, ಕಲಾಕೃತಿಗಳ ಆಯ್ಕೆ ಗೃಹಾಲಂಕಾರವನ್ನು ಪೂರ್ಣಗೊಳಿಸಿದ ಭರವಸೆ ನೀಡುತ್ತದೆ. ಇನ್ನು ಪ್ರಾಣಿಗಳ ಆಕೃತಿಗಳು ಅಲಂಕಾರಕ್ಕೆ ಸ್ಥಳೀಯ ಸೊಗಡನ್ನು ನೀಡುತ್ತವೆ.

ಮನೆಯನ್ನು ಸಂಪೂರ್ಣವಾಗಿ ಸಸ್ಯಗಳಿಂದ ಅಲಂಕರಿಸುವ ತೋಟಗಾರಿಕಾ ಉತ್ಪನ್ನಗಳು ಲಭ್ಯವಿದ್ದು, ತಮ್ಮ ಕನಸಿಗೆ ತಕ್ಕಂತೆ ಮನೆಗೊಂದು ಹಸಿರು ನೋಟ ಕೊಡಬೇಕೆನ್ನುವವರು ಕೆಳಗಿನ ವಿಳಾಸ ಸಂಪರ್ಕಿಸಬಹುದು.

-ಅವಿನಾಶ ವಗರನಾಳ

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...