ಜಿಎಸ್‍ಟಿ ಜನಸಾಮಾನ್ಯರಿಗೆ ಹೊರೆಯಾಗಿದ್ದು, ಇದರಿಂದ ಜನ ರೋಸಿ ಹೋಗಿದ್ದು, ಎಲ್ಲೆಡೆ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಎಸ್‍ಟಿ ಮಂಡಳಿ ತನ್ನ 23ನೇ ಸಭೆಯಲ್ಲಿ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ.
ಇಂದು ಅಸ್ಸಾಂನ ಗುವಾಹಟಿಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 177 ವಸ್ತುಗಳ ಮೇಲಿನ ಶೇ.28ರಷ್ಟರ ತೆರಿಗೆಯನ್ನು ಶೇ.18ಕ್ಕೆ ಇಳಿಸಲಾಗಿದೆ. ಇನ್ನುಳಿದ 50 ಸಾಮಾಗ್ರಿಗಳ ತೆರಿಗೆಯನ್ನು ಶೇ. 28ರಷ್ಟು ತೆರಿಗೆಯೇ ಮುಂದುವರೆಯಲಿದೆ.
ಕ್ರೀಡಾಸಾಮಾಗ್ರಿಗಳು, ನಿತ್ಯಬಳಕೆಯ ವಸ್ತುಗಳು, ಪ್ಲಾಸ್ಟಿಕ್ ಸಾಮಾಗ್ರಿಗಳು, ಪೀಠೋಪಕರಣಗಳ ಮೇಲಿನ ತೆರಿಗೆ ಇಳಿಕೆಯಾಗಲಿವೆ ಎಂದು ವಿಶ್ಲೇಷಿಸಲಾಗಿದೆ. ಚಾಕಲೇಟ್, ಶಾಂಪೂ, ಸಾಬೂನುಗಳು, ಸೌಂದರ್ಯ ವರ್ಧಕಗಳು ಮೊದಲಾದವುಗಳ ಮೇಲಿನ ತೆರಿಗೆ ಇಳಿಕೆಯಾಗಿದೆ.