ಚಾಮುಂಡೇಶ್ವರಿ ವಿಳಾಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರ ಖಾತೆ ಬದಲಾಗುವ ಸಾಧ್ಯತೆ ಇದೆ.
ಜೂನ್ 8 ರಂದು ನಡೆದ ಖಾತೆ ಹಂಚಿಕೆಯಲ್ಲಿ ಜಿಟಿಡಿ ಅವರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಲಾಗಿದೆ. ಇದು ಸ್ವತಃ ಅವರಿಗೂ ಸಮಧಾನ ಇರಲಿಲ್ಲ. ಜೊತೆಗೆ ಕೇವಲ ಎಂಟನೇ ತರಗತಿ ಪಾಸ್ ಮಾಡಿದವರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಿರುವ ಬಗ್ಗೆ ಚರ್ಚೆಗಳಾಗಿದ್ದವು. ಇದೇ ವಿಷಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಜಿಟಿಡಿ ಟ್ರೋಲ್ ಕೂಡ ಆಗಿದ್ದರು.
ಜೆಡಿಎಸ್ ಕಾರ್ಯಕ್ರರ್ತರು, ಜಿಟಿಡಿ ಬೆಂಬಲಿಗರು ಸಹ ಅವರ ಖಾತೆ ಬದಲಾಯಿಸುವಂತೆ ಒತ್ತಾಯಿಸಿದ್ದಾರೆ . ಈ ಹಿನ್ನೆಲೆಯಲ್ಲಿ ಜಿಟಿಡಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಖಾತೆ ಬದಲಾವಣೆ ಕುರಿತು ಮಾತುಕತೆ ನಡೆಸಿದ್ದು, ಅದು ಯಶಸ್ವಿಯಾಗಿದೆ ಎಂದು ಹೇಳಲಾಗ್ತಿದೆ.