ಕನ್ನಡದ ಈ ರಗಡ್ ಹೀರೊ ಯಾರು ಅಂತ ಗುರುತಿಸಿ..!!
ವರ್ಕ್ ಔಟ್, ಫಿಟ್ನೆಸ್ ಬಹಳ ಮುಖ್ಯ.. ಅದರಲ್ಲು ಗ್ಲಾಮರ್ ಜಗತ್ತಿನಲ್ಲಿ ಬದುಕು ಕಂಡುಕೊಂಡವರಿಗೆ ಈ ಎರಡು ತುಂಬಾ ಮುಖ್ಯ.. ತಮಗೆ ಅಲ್ಲದಿದ್ರಿ, ಸ್ಕ್ರೀನ್ ಮೇಲೆ ಚೆಂದ ಕಾಣ್ಬೇಕು ಅಂದ್ರೆ, ತಮ್ಮ ದೇಹವನ್ನ ದಂಡಿಸಬೇಕು, ಫಿಟ್ ಆಗಿ ಇರಬೇಕು, ಆಗ್ಲೇ ಇಲ್ಲಿ ಬೆಲೆ.. ಇಲ್ಲ ಅಂದ್ರೆ ಮೂಲೆ ಗುಂಪು ಗ್ಯಾರಂಟಿ.. ಇನ್ನೂ ನಮ್ಮ ಚಂದನವನದ ನಟನಟಿಯರೇನು ಕಡಿಮೆ ಇಲ್ಲ.. ಜಿಮ್ ನಲ್ಲಿ ಘಂಟೆಗಟ್ಟಲೆ ಬೆವರಿಳಿಸ್ತಾರೆ…
ಈ ನಡುವೆ ಕನ್ನಡದ ಹೆಸರಾಂತ ನಟರೊಬ್ಬರು ತಾವು ವರ್ಕ್ ಔಟ್ ಮುಗಿಸಿದ ಬಳಿಕ, ಫೋಟೊವೊಂದನ್ನ ಅಪ್ ಲೋಡ್ ಮಾಡಿದ್ದಾರೆ.. ಅದು ಪೈನ್ ಆದ್ಮೇಲೇನೆ ಗೈನ್ ಅನ್ನೋ ಶೀರ್ಷಿಕೆಯೊಂದಿಗೆ.. ಆನಂತರ ಆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಯಾರಪ್ಪ ಈ ಕಟ್ಟುಮಸ್ತು ದೇಹದ ನಾಯಕ ಅಂತ..
ಕೆಲವರು ಇದು ಅಂಬರೀಶ್ ಮಗ ಅಂದ್ರೆ, ಮತ್ತೆ ಕೆಲವರು ನಿಖಿಲ್ ಎಂದಿದ್ದಾರೆ.. ಆದರೆ ಇದು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರ ಫೋಟೊ ಆಗಿದೆ.. ಸದ್ಯ ಮಾಸ್ ಲುಕ್ ನಲ್ಲಿ ಕಂಗೊಳಿಸುತ್ತಿರುವ ಈ ಮಫ್ತಿ ಸ್ಟಾರ್, ತನ್ನ ಫಿಟ್ನೆಸ್ ಅನ್ನ ಕೂಡ ಅಚ್ಚುಕಟ್ಟಾಗಿ ನಿಭಾಯಿಸ್ತಾ ಇದ್ದಾರೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ..?