ಹೆಚ್ ಎಂ ರೇವಣ್ಣನಿಗೆ ಹತ್ತು ಕೋಟಿ ಕೇಳ್ದಾ..!? ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದು ಯಾರು..!?

Date:

ಭೂಗತ ಡಾನ್ ರವಿಪೂಜಾರಿ ವಿಧಾನಪರಿಷತ್ ಸದಸ್ಯ ಹೆಚ್ ಎಂ ರೇವಣ್ಣನವರಿಗೆ ಕರೆ ಮಾಡಿ ಹತ್ತುಕೋಟಿ ಹಫ್ತಾ ಕೇಳಿದ್ದಾನೆ ಎಂದು, ಖುದ್ದು ರೇವಣ್ಣ ಕಮಿಷನರ್ ಮೆಘರಿಕ್ ಅವರಿಗೆ ದೂರು ಕೊಟ್ಟಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿದ್ದ ವೇಳೆ ಅವರಿಗೆ ಕರೆ ಬಂದಿದ್ದು, `ನಾನು ರವಿ ಪೂಜಾರಿ, ಹತ್ತು ಕೋಟಿ ಹಣ ಕೊಡು. ಇಲ್ಲದಿದ್ದರೇ ನಿನ್ನ ಮಗನ `ಲಕ್ಷ್ಮಣ’ ಚಿತ್ರಕ್ಕೆ ಅಡ್ಡಿಪಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಈ ಕರೆ ತಮಿಳುನಾಡಿನಿಂದ ಬಂದಿದ್ದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ರವಿಪೂಜಾರಿ ನಮ್ಮ ದೇಶದಲ್ಲೇ ಇದ್ದಾನಾ..? ಬೇರೆ ಯಾರೋ ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿರಬಹುದಾ..? ಅಥವಾ ಎಲ್ಲವೂ ರವಿಪೂಜಾರಿ ಇಷಾರೆಗೆ ನಡೆಯುತ್ತಿದೆಯಾ..? ಎಂಬಿತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಬೆನ್ನತ್ತಿದ್ದಾರೆ.

ಈ ರವಿಪೂಜಾರಿ ಮುಂಬೈನ ಅಂದೇರಿಯಲ್ಲಿ ಸಣ್ಣಪುಟ್ಟ ಪಾತಕ ಮಾಡಿಕೊಂಡು ಬೆಳೆದಿದ್ದ. ಮುಂಬೈ ಅಂಡರ್ ವರ್ಲ್ಡ್ ನ ಅಷ್ಟೂ ಮಗ್ಗಲುಗಳನ್ನು ಕಂಡಿದ್ದ. ಅವನೊಳಗೊಬ್ಬ ಗ್ಯಾಂಗ್ ಸ್ಟರ್ ಸದ್ದಿಲ್ಲದೇ ಹುಟ್ಟಿಕೊಂಡಿದ್ದ. ಅಷ್ಟೇನೂ ಹೆಸರು ಮಾಡದ ಸ್ಮಾಲ್ ಟೈಂ ಪಾತಕಿ ಬಾಳಾ ಜಲ್ತೆ ಎಂಬಾತನನ್ನು ಕೊಲ್ಲುವ ಮೂಲಕ, ನಾನೊಬ್ಬ ಇದ್ದೀನಿ ಅಂತ ಪಾತಕಲೋಕಕ್ಕೆ ನಿಚ್ಚಳ ಮೆಸೇಜ್ ಕಳುಹಿಸಿದ್ದ. ಆನಂತರ ಆತನನ್ನು ಎರಡೂ ಕೈಯಿಂದ ಬಾಚಿ ತಬ್ಬಿಕೊಂಡಿದ್ದು ಛೋಟಾ ರಾಜನ್. ಆತನ ಜೊತೆ ಸೇರಿ ಒಂದಿಷ್ಟು ಅನಾಹುತಗಳನ್ನು ಮಾಡಿದ. 1990ರಲ್ಲಿ ದುಬೈ ಸೇರಿದ. ಅಲ್ಲಿ ಕುಂತೇ ಇಲ್ಲಿನ ಬಿಲ್ಡರ್ಸ್ ಗಳಿಗೆ, ಹೋಟೆಲ್ಸ್ ಮಾಲೀಕರಿಗೆ ಕರೆ ಮಾಡಿ ಹಫ್ತಾ ಕೇಳುವ ಪರಿಪಾಠ ಶುರುಮಾಡಿದ. ಸಧ್ಯಕ್ಕೆ ಅವ್ನು ಆಸ್ಟ್ರೇಲಿಯಾ ಸೇರಿಕೊಂಡಿದ್ದಾನೆ ಅಂತ ಇಂಟರ್ ಫೋಲ್ ಹೇಳುತ್ತಿದೆಯೇ ವಿನಃ, ಇವತ್ತಿಗೂ ಅವನ ನೆರಳನ್ನೂ ಹಿಡಿಯಲಾಗುತ್ತಿಲ್ಲ.

ರವಿಪೂಜಾರಿ ಈ ಹಿಂದೆ ಸಲ್ಮಾನ್ ಖಾನ್ಗೂ ಥ್ರೆಟ್ ಹಾಕಿದ್ದ. ಶಾರೂಕ್ ಖಾನ್ ಗೂ ಥ್ರೆಟ್ ಹಾಕಿದ್ದ. ಫರ್ಹಾನ್ ಅಖ್ತರ್, ಫರ್ಹಾನ್ ಅಜ್ಮಿ, ರಿತೇಶ್ ಸಿದ್ವಾನಿ ಸೇರಿದಂತೆ ಅನೇಕರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದ ಪ್ರೀತಿ ಜಿಂಟಾಳ ಪರವಾಗಿ ನೆಸ್ ವಾಡಿಯಾನಿಗೆ ಫೋನ್ ಮಾಡಿ ಧಮ್ಕಿ ಹಾಕಿದ್ದ. ಸಚಿವ ಅಭಯಚಂದ್ರ ಜೈನ್, ಇದೀಗ ಹೆಚ್ ಎಂ ರೇವಣ್ಣ- ಇಷ್ಟೆಲ್ಲಾ ಆಗುತ್ತಿದ್ದರೂ ಆತನನ್ನು ಬಂಧಿಸಲು ಮಾತ್ರ ಆಗುತ್ತಿಲ್ಲ.

  • ರಾ ಚಿಂತನ್

POPULAR  STORIES :

ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?

6-5=2 ಚಿತ್ರತಂಡದಿಂದ ಮತ್ತೊಂದು ಪ್ರಯತ್ನ, ಕನ್ನಡದ ಬಹುನಿರೀಕ್ಷಿತ ಹಾರರ್ ಥ್ರಿಲ್ಲರ್ ಮೂವಿ.

ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!

ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!

ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?

ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...