ಕನ್ನಡಕ್ಕೆ ಯೂಟ್ಯೂಬಲ್ಲಿ ಶುಕ್ರದೆಸೆ ಶುರುವಾಗಿರೋ ಹಾಗಿದೆ..! ಇತ್ತೀಚೆಗೆ ಕನ್ನಡದ ಕಂಟೆಂಟ್ ಗಳು ಯೂಟ್ಯೂಬಲ್ಲಿ ಸಿಕ್ಕಾಪಟ್ಟೆ ಹಿಟ್ ಆಗ್ತಾ ಇದೆ..! ಅದಕ್ಕೆ ಹಾಳಾಗೋದೆ, ಬಾರಿಸು ಕನ್ನಡ ಡಿಂಡಿಮವಾ ಸಾಕ್ಷಿಯಾಗಿವೆ..! ಲಾಸ್ಟ್ ವೀಕ್ ನೀವು ಡಿಂಡಿಮ ಸೂಪರ್ ಹಿಟ್ ಮಾಡಿದ್ರಿ, ಆದ್ರೆ ಅದಕ್ಕಿಂತ ಮುಂಚೇನೇ ರಿಲೀಸಾದ ಕನ್ನಡದ ರ್ಯಾಪ್ ಸಾಂಗ್ ಒಂದು ವಿಶ್ವದ ಮೂಲೆಮೂಲೆಯಲ್ಲಿ ಸೂಪರ್ ಹಿಟ್ ಆಗಿದೆ..! ಯಾವ ಹನಿ ಸಿಂಗ್ ಸಾಂಗಿಗೂ ಕಮ್ಮಿ ಇಲ್ಲ ಅನ್ನೋ ಹಾಗಿರೋ ಹಾಳಾಗೋದೆ ರ್ಯಾಪ್ ಸಾಂಗ್ ಎಲ್ಲರ ಬಾಯಲ್ಲೂ ಓಡಾಡ್ತಾ ಇದೆ..! ಅಷ್ಟಕ್ಕೂ ಈ `ಹಾಳಾಗೋದೆ’ ಕನ್ನಡವನ್ನು ಇಂಟರ್ ನ್ಯಾಶನಲ್ ಲೆವೆಲ್ಲಿಗೆ ತಗೊಂಡ್ ಹೋಗ್ಬೇಕು ಅಂತ ಆಸೆ ಇಟ್ಕೊಂಡಿರೋ ಕನ್ನಡದ ಹುಡುಗನ ಕನಸು..! ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನನಸು ಮಾಡಿದ್ದಾರೆ ಮಿಸ್ಟರ್ ಚಂದನ್ ಶೆಟ್ಟಿ..! ಒಂದು ಸಲ ಕೇಳಿ ಸುಮ್ಮನಿರೋಕೆ ಸಾಧ್ಯವೇ ಇಲ್ಲದ ಈ ಹಾಡು ಕನ್ನಡದ ಮಟ್ಟಿಗೆ ಸಖತ್ ಕ್ರೇಜಿ ಅಂದ್ರೆ ತಪ್ಪಾಗಲ್ಲ..!
ಹಾಳಾಗೋದೆ… ಅಂತ ಹಾಡ್ತಾ ಇರೋ ಚಂದನ್ ಶೆಟ್ಟಿ ಈ ಹಿಂದೆ ಪವರ್ ಸಿನಿಮಾದ ಧಮ್ ಪವರೇ ಹಾಡನ್ನು ರಾಕ್ ವರ್ಶನ್ ನಲ್ಲಿ ಹಾಡಿ ಸುದ್ಧಿ ಮಾಡಿದ್ರು..! ಆಮೇಲೆ ಅಂತ್ಯ ಸಿನಿಮಾದ ಗಾಂಜಾ ಹಾಡು ಸಹ ಇದೇ ಚಂದನ್ ಶೆಟ್ಟಿಯ ಮ್ಯೂಸಿಕ್ ಚಳಕ..! ರಿಲೀಸ್ ಆದ ವಾರದಲ್ಲಿ ಲಕ್ಷಾಂತರ ಜನ `ಹಾಳಾಗೋದೆ’ ಹಾಡು ನೋಡಿ `ಭಲೇ, ಭೇಷ್ ಚಂದನ್’ ಅಂತಿದ್ದಾರೆ..! ಈಗ ನಾವು ಕನ್ನಡಿಗರು ಸಹ ನಮ್ಮ ಕನ್ನಡದ ಹುಡುಗನಿಗೆ ಸಪೋರ್ಟ್ ಮಾಡಬೇಕು..! ಅಕ್ಕಪಕ್ಕದ ಭಾಷೆಯ ವೀಡಿಯೋಗಳು ಮಿಲಿಯನ್ ಗಟ್ಟಲೇ ಹಿಟ್ ತಗೊಂಡು ಬೀಗ್ತಾ ಇರೋ ಟೈಮಲ್ಲಿ, ಕನ್ನಡದಲ್ಲೂ ಟ್ರೆಂಡ್ ಸೃಷ್ಟಿ ಮಾಡಿರೋ ಚಂದನ್ ಶೆಟ್ಟಿಯ ವೀಡಿಯೋನ ಯೂಟ್ಯೂಬಲ್ಲಿ ನೋಡಬೇಕು, ಇದನ್ನು ನಿಮ್ಮ ಫೇಸ್ ಬುಕ್ ಪೇಜಲ್ಲಿ ಶೇರ್ ಮಾಡಬೇಕು..! ನಮ್ಮ ಹುಡುಗನನ್ನು ಗೆಲ್ಲಿಸಬೇಕು..! ಕನ್ನಡದ ಹುಡುಗ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡ್ತಿದ್ದಾನೆ..! ಸಾಕಷ್ಟು ಇನ್ವೆಸ್ಟರ್ ಗಳು ಚಂದನ್ ಟ್ಯಾಲೆಂಟ್ ನೋಡಿ ಮುಂದಿನ ಪ್ರಾಜೆಕ್ಟ್ ಗಳಿಗೆ ಕೈಜೋಡಿಸೋ ಭರವಸೆ ನೀಡಿದ್ದಾರೆ. ನಮ್ಮ ಕೆಲಸ ಅವರ ಅದ್ಭುತ ವೀಡಿಯೋಗಳನ್ನು ನೋಡಿ ಸಪೋರ್ಟ್ ಮಾಡೋದು ಅಷ್ಟೆ..! ಈ `ಹಾಳಾಗೋದೆ’ ವೀಡಿಯೋನೇ ನೋಡಿ, ಎಲ್ಲೂ ಬೋರ್ ಆಗಲ್ಲ, ಕ್ವಾಲಿಟಿ ಅಂತೂ ಸೂಪರ್ ಡೂಪರ್..! ಚಂದನ್ ಜೊತೆ ಮಂಜು, ಹೇಮಂತ್, ಸುಹಾಸ್, ಸಂಜಯ್, ಕುಮುದಾ ಇದ್ದಾರೆ.. ವಿಕ್ರಂ ಯೋಗಾನಂದ್ ಸಖತ್ತಾಗಿ ಶೂಟ್ ಮಾಡಿ, ಆಲ್ಬಂ ಎಡಿಟ್ ಮಾಡಿದ್ದಾರೆ. ವಿಜೇತ್ ಸಖತ್ ಸೌಂಡ್ ಎಫೆಕ್ಟ್, ಸಚಿನ್ ಮಿಕ್ಸಿಂಗ್ ಮಾಸ್ಟರಿಂಗ್, ವಿಕಿನ್ ವಿಷ್ಯುಯಲ್ ಎಫೆಕ್ಟ್ ಸೂಪರ್..! ವಿನೋದ್ ಅಂಬಿಗೇರ್ ಮತ್ತು ದಿನೇಶ್ `ಹಾಳಾಗೋದೆ’ ಪ್ರೊಡ್ಯೂಸ್ ಮಾಡಿದ್ದಾರೆ..!ಆರ್.ಆರ್.ಗೌಡ್ರು ಸಹ ಚಂದನ್ ಗೆ ಸಾಥ್ ಕೊಟ್ಟಿದ್ದಾರೆ..! ಇನ್ನುಳಿದಂತೆ, ಸಂಗೀತ, ಸಾಹಿತ್ಯ, ಸಿಂಗರ್ ಎಲ್ಲಾ ನಮ್ಮ ಹುಡುಗ ಚಂದನ್ ಶೆಟ್ಟಿಯದು..! ಕನ್ನಡವನ್ನು ಬೆಳೆಸಬೇಕು, ಕನ್ನಡದ ಜೊತೆ ನಾನೂ ಬೆಳೀಬೇಕು ಅನ್ನೋ ಆಸೆಯೊಂದಿಗೆ ನಮ್ಮನ್ನು ರಂಜಿಸ್ತಾ ಇರೋ ಕನ್ನಡದ ಹುಡುಗನ ಈ ಪೋಸ್ಟ್ ನೀವೂ ಶೇರ್ ಮಾಡಿ..! ಇದರಲ್ಲಿರೋ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ, ಚಂದನ್ ಗೆ ಆಲ್ ದ ಬೆಸ್ಟ್ ಹೇಳಿ..! ನಾನಂತೂ ಈ ಹಾಡನ್ನು ಈಗಾಗ್ಲೇ ನೂರಾರು ಸಲ ನೋಡಿ ಎಂಜಾಯ್ ಮಾಡಿದ್ದೀನಿ.. ಈಗ ನಿಮ್ಮ ಕೆಲಸ.. ಶುರು ಮಾಡಿ.. `ಹಾಳಾಗೋದೆ..’
Video :
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!
ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!
ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?
ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!
ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!
ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!
ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?
ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!
ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್
ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?
ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!
ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!
10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?
ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?