ಹೇರ್ ಡ್ರೈಯರ್ ಗೆ ಅಬ್ಬಬ್ಬಾ ಎಂದರೆ ಇದಕ್ಕೆ ಗರಿಷ್ಠ 5 ಸಾವಿರ ರೂ.ವರೆಗೂ ಇರಬಹುದೇ? ಇದು ಸರಿಯಾಗಿ ಕೂದಲು ಒಣಗಿಸುವ ಕೆಲಸ ಮಾಡಿ, ಬಾಳಿಕೆ ಬಂದರೆ ಸಾಕು. ಆದರೆ ಈ ಕೂದಲು ಒಣಗಿಸುವ ಈ ಸಾಧನ ಚಿನ್ನದ್ದಾಗಿರಬೇಕೇ..? ಯಾರದ್ರೂ ಚಿನ್ನದ ಡ್ರೈಯರ್ ಬಳಸುತ್ತಾರೆಯೇ?
ಚಿನ್ನದ ಡ್ರೈಯರ್ ಕೂಡ ಬಂತು. ಇದರ ಬೆಲೆ ಕೇಳಿದರೆ
23.75 ಕ್ಯಾರೇಟ್ ಚಿನ್ನ ಬಳಸಿದ ಈ ಡ್ರೈಯರ್ ಬೆಲೆ 37,900 ರೂ. ಅಂತೆ. ಅತ್ಯಂತ ದುಬಾರಿ ಎನ್ನಲಾದ ಈ ಡ್ರೈಯರ್ ಅನ್ನು ಅತ್ಯಂತ ಆಕರ್ಷಕವಾಗಿ, ವಿವಿಧ ಬಣ್ಣಗಳನ್ನು ಬಳಸಿ ತಯಾರಿಸಲಾಗಿದೆ. ಲೈಫ್‌ಟೈಮ್ ವಾರೆಂಟಿಯೂ ಇದೆಯಂತೆ!