ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?

Date:

ಸಿಎಂ ಗೆ ಹೀಗೆ ಶಾಪ ಹಾಕಿದ್ದಾದ್ರು ಯಾರು, ಯಾಕೆ ಗೊತ್ತಾ…?
ಸಾರ್ ನಮ್ಮ ತಾಯಿಗೆ ಮೈ ಹುಷಾರಿಲ್ಲ, ಏನಾದ್ರೂ ಸಹಾಯ ಮಾಡಿ ಎಂದು ಬೇಡಿಕೊಂಡವನಿಗೆ ಸಿಎಂ ಸಾಹೇಬ್ರು ಸ್ಪಂದಿಸದೇ ತರಾತುರಿಯಲ್ಲಿ ಕಾರು ಏರಿದ್ರು. ಆಗ ಸಿಎಂ ಅನ್ನು ಭೇಟಿ ಮಾಡ್ಬೇಕು ಅಂತ ಬಂದಿದ್ದ ವ್ಯಕ್ತಿ ಆಕ್ರೋಶಭರಿತವಾಗಿ “ಹಾಳಾಗಿ ಹೋಗ್ತೀಯಾ” ಅನ್ನೋ ಶಾಪ ಹಾಕಿದ.
ಯದುವೀರ್ ಅರಸ್ ಮದುವೆಗೆ ಭೇಟಿ ನೀಡಿ ಸೋಮವಾರ ರಾತ್ರಿ ಮೈಸೂರಿನಲ್ಲೇ ತಂಗಿದ್ದ ಸಿದ್ದರಾಮಯ್ಯ ಬೆಳಗ್ಗೆ ಜನತಾ ದರ್ಶನವನ್ನು ಹಮ್ಮಿಕೊಂಡಿದ್ದರು. ಮೈಸೂರಿನ ತಮ್ಮ ನಿವಾಸದ ಬಳಿ ಜನರಿಂದ ಅಹವಾಲು ತೆಗೆದುಕೊಳ್ಳುವ ಕಾರ್ಯಕ್ರಮ ಇಟ್ಟುಕೊಂಡಿದ್ದರು.
ಆಗ ಆಗಮಿಸಿದ ಒಬ್ಬ ವ್ಯಕ್ತಿ ಸಿದ್ದರಾಮಯ್ಯ ಅವರಿಗೆ ಕೆಂಪು ಶಾಲೊಂದನ್ನು ನೀಡಲು ಬಂದಿದ್ದಾರೆ. ಪೂಜೆ ಮಾಡಿ ತಂದಿದ್ದೇನೆ ಇದನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತೇನೆ ಎಂದು ಕಾರು ಏರಲು ಮುಂದಾಗಿದ್ದ ಸಿಎಂ ಬಳಿ ತೆರಳಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ.
ನಂತರ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಪ್ರಶ್ನೆ ಮಾಡಿದಾಗ “ನಾನು ಕೊಳ್ಳೇಗಾಲದವನು ಸ್ವಾಮಿ, ಏನಾದ್ರೂ ಸಹಾಯ ಮಾಡಿ ಎನ್ನುತ್ತಾ ಮುಂದಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಸಿಎಂ ಕಾರು ಏರಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ವ್ಯಕ್ತಿ ಸಿಎಂ ಕಾರಿನ ಕಿಟಕಿ ಬಳಿ ತೆರಳಿ “ಹಾಳಾಗಿ ಹೋಗ್ತೀಯಾ” ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.
ಇದು ಕಾಕತಾಳೀಯವೋ ಅಥವಾ ಬೇಕಂತಲೇ ಮಾಡಿದ್ದೋ ಗೊತ್ತಿಲ್ಲ. ಆದರೆ ಕೊಳ್ಳೆಗಾಲ ಎನ್ನುವುದಕ್ಕೂ ಸಿಎಂ ದೂರ ಸರಿಯುವುದಕ್ಕೂ ಸರಿಯಾಗಿತ್ತು. ಒಟ್ನಲ್ಲಿ ಕೊಳ್ಳೇಗಾಲ ಅಂದಿದ್ದೇ ಸಿಎಂ ಕಾಲ್ಕಿತ್ತದ್ದು ಸತ್ಯ ಅನ್ನೋದು ಅಲ್ಲಿ ಈ ಘಟನೆಯನ್ನ ಪ್ರತ್ಯಕ್ಷವಾಗಿ ಕಣ್ತುಂಬಿಕೊಂಡ ಜನರ ಮಾತು

  • ಶ್ರೀ

POPULAR  STORIES :

ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?

ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!

ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?

26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?

ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!

ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...