ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಕರ್ನಾಟಕದ ಹಂಪಿ ವಿಜಯ ವಿಠ್ಠಲ ದೇವಾಲಯದ ಕೆಲವೊಂದು ಕಂಬಗಳು ಪ್ರವಾಸಿಗರ ಮುಟ್ಟುವಿಕೆಯಿಂದ ಹಾಳಾಗಿದೆ. ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿರುವ ಹಂಪಿಯ ಸಪ್ತಸ್ವರ ಸಂಗೀತ ಹೊಮ್ಮಿಸುವ ಆರು ಕಂಬಗಳು ಪ್ರವಾಸಿಗರ ಕೆಂಗಣ್ಣಿಗೆ ಬಲಿಯಾಗಿದೆ. ಇಲ್ಲಿನ ಸಪ್ತಸ್ವರ ಕಂಬಗಳನ್ನು ಮುಟ್ಟುವುದಾಗಲೀ ಅಥವಾ ತಟ್ಟುವುದು 2000ರಲ್ಲೇ ಭಾರತೀಯ ಪುರಾತತ್ವ ಇಲಾಖೆ ನಿಷೇಧ ಹೇರಿತ್ತು. ಅದಾಗಿಯೂ ಪ್ರವಾಸಿಗರು ಹೇಗೋ ಕಣ್ತಪ್ಪಿಸಿ ಕಂಬಗಳನ್ನು ಸ್ಪರ್ಷಿಸುವ ಮೂಲಕ ತಮ್ಮ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹಾಲುಬಣ್ಣದ ಸುಮಾರು ಆರು ಕಂಬಗಳು ಪ್ರವಾಸಿಗರ ಸ್ಪರ್ಷಕ್ಕೆ ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಕಂಬಗಳ ಆಕರ್ಷಣೆ ಕಳೆಗೊಂದಿದ ಹಾಗೆ ಘೋಚರವಾಗ್ತಾ ಇದೆ.
15ನೇ ಶತಮಾನದ ವಿಜಯನಗರ ಅರಸರ ಕಾಲಾವಧಿಯಲ್ಲಿ ನಿರ್ಮಾಣವಾದ ಈ ದೇವಾಲಯದಲ್ಲಿ ಒಟ್ಟು 56 ಸ್ವಪ್ತಸ್ವರ ಕಂಬಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಪ್ರಸ್ತುತ 42 ಕಂಬಗಳು ಘೋಚರವಾಗ್ತಾ ಇದೆ. ಈ ಕಂಬಗಳಿಂದ ಇಂದಿಗೂ ಕೂಡ ಪಂಚವಾದ್ಯ, ಜಲತರಂಗ, ಗಂಟೆ ನಾದ, ಶಾಲಾ ಗಂಟೆ, ಕಾಲಿಂಗ್ ಬೆಲ್, ಘಟನಾದ್ಯ, ಡಮರುಗ, ಮೃದಂಗ ಹಾಗೂ ವೀಣೆ ನಾದ್ಯವನ್ನು ಆಲಿಸಲು ಪ್ರವಾಸಿಗರು ಮುಗಿಬೀಳುತ್ತಾರೆ. ಆದರೆ ಈಗ ಪ್ರವಾಸಿಗರ ಆಟಕ್ಕೆ ಆರು ಕಂಬಗಳು ತನ್ನ ನೈಜ್ಯ ಬಣ್ಣವನ್ನು ಕಳೆದುಕೊಂಡು ಹಾಳಾಗಿದೆ. ವಾರ್ಷಿಕ ಸುಮಾರು 22 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿ ಭೇಟಿ ಕೊಡುತ್ತಾರಾದರೂ ದೇವಾಲಯದಲ್ಲಿ ಬೆರಳಣಿಕೆಯಷ್ಟು ಮಾತ್ರ ಭದ್ರತಾ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ. ಸಿಸಿ ಕ್ಯಾಮರಾ ಕಣ್ಗಾವಲಿದ್ದರೂ ಸಪ್ತ ಸ್ವರ ಹೊರಡಿಸುವ ಎಲ್ಲಾ ಕಂಬಗಳ ಮೇಲೆ ನಿರ್ದೀಷ್ಟ ದೃಷ್ಠಿ ಹರಿಸಲು ಸಾಧ್ಯವಾಗ್ತಾ ಇಲ್ಲ ಈ ಒಂದು ಅವಕಾಶವನ್ನು ಉಪಯೋಗಿಸಿಕೊಳ್ಳುತಿರುವ ಪ್ರವಾಸಿಗರು ಕಂಬಗಳನ್ನು ಸ್ಪರ್ಷಿಸಿ ಹಾಳುಗೆಡುತ್ತಿದ್ದಾರೆ..
Like us on Facebook The New India Times
POPULAR STORIES :
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!
ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!
ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!
ಪುಣೆಯಲ್ಲಿ ಭುಗಿಲೆದ್ದ ದಲಿತರು-ಮರಾಠರ ಸಂಘರ್ಷ..!
ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!
ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!