ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಗೆ ವೀಡಿಯೋ ಕಾಲ್ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನ ಕೊಂಪಲ್ಲಿಯಲ್ಲಿ ನಡೆದಿದೆ.
24ವರ್ಷದ ಬಿ.ಹನೀಶಾ ಚೌಧರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೃತೆ ಶಿವಶಿವನಿ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಂಬಿಎ ವ್ಯಾಸಂಗ ಮಾಡುತ್ತಿದ್ದರು.
ಹಾನೀಶ ಭಾನುವಾರ ಬೆಳಗ್ಗೆ ತನ್ನ ಗೆಳೆಯ ದೀಕ್ಷಿತ್ ಗೆ ವೀಡಿಯೋ ಕಾಲ್ ಮಾಡಿದ್ದಾಗ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಬಳಿಕ ನೇಣಿಗೆ ಶರಣಾಗಿದ್ದಾಳೆ. ವೀಡಿಯೋ ಕಾಲ್ ಮಾಡಿದ್ದ ವೇಳೆಯೇ ನೇಣಿಗೆ ಶರಣಾದಾಳೋ ಅಥವಾ ನಂತರ ಈ ತಪ್ಪು ನಿರ್ಧಾರ ತೆಗೆದುಕೊಂಡಳೋ ಇನ್ನೂ ತಿಳಿದು ಬಂದಿಲ್ಲ.
ಹನೀಶಾ ಚೌಧರಿ ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹೈದರಾಬಾದ್ ಅನಂತಪು ನವರು.