ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪ್ಪನಹಳ್ಳಿ ಮರಳಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಗೆಜೆಟ್ ಹೊರಡಿಸಿದೆ.
ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಮರುಸೇರ್ಪಡೆ ಕುರಿತು ಕರ್ನಾಟಕ ರಾಜ್ಯಪತ್ರ ಮೂಲಕ ಅಧಿಕೃತ ಆದೇಶ ಹೊರಡಿಸಲಾಗಿದೆ. ದಾವಣಗೆರೆ ನೂತನ ಜಿಲ್ಲೆಯಾಗಿ ಘೋಷಣೆಯಾದ ವೇಳೆ ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿಯನ್ನು, ದಾವಣಗೆರೆ ಜಿಲ್ಲೆಗೆ ಸೇರಿಸಲಾಗಿತ್ತು.
ಆದರೆ, ಕಲಂ 371 ಜೆ ಸೌಲಭ್ಯದಿಂದ ಹರನಪನಹಳ್ಳಿ ವಂಚಿತಗೊಂಡಿತ್ತು. ಇದರಿಂದಾಗಿ ಹರಪನಹಳ್ಳಿಯಲ್ಲಿ ಹೈದರಾಬಾದ್-ಕರ್ನಾಟಕಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಹೋರಾಟ ನಡೆದಿತ್ತು. ಬಳಿಕ ಹಿಂದಿನ ಕಾಂಗ್ರೆಸ್ ಸರ್ಕಾರ ಹರಪನಹಳ್ಳಿಯನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಿತ್ತು. ಹರಪನಹಳ್ಳಿ ಬಳ್ಳಾರಿಯಿಂದ ದೂರ ಆಗುತ್ತದೆ ಎಂದು ಕೆಲವು ಕಡೆಗೆ ವಿರೋಧ ವ್ಯಕ್ತವಾಗಿದ್ದವು. ಈಗ ಬಳ್ಳಾರಿ ಜಿಲ್ಲೆಯಲ್ಲಿ ಹರಪನಹಳ್ಳಿ ತಾಲೂಕು ಸೇರ್ಪಡೆಯೊಂದಿಗೆ 11 ತಾಲೂಕುಗಳಿವೆ.