ಹುಡುಗಿಯರೇ ನೀವಂತೂ ಈ ಸ್ಟೋರಿ ಓದ್ಲೇಬೇಕು..! ಹುಡುಗರೂ ಓದಿ ಹುಡುಗಿಯರಿಗೆ ಈ ಸ್ಟೋರಿ ಹೇಳಲೇ ಬೇಕು..! ಈ ಸ್ಟೋರಿಯಲ್ಲಿ ಹುಡುಗಿಯೊಬ್ಬಳ ಸೋಮಾರಿತನ ಮತ್ತು ಒಳ್ಳೆಯತನ ಎರಡೂ ಅವಳಿಗೆ ಎಂಥಾ ಕಷ್ಟವನ್ನು ತಂದೊಡ್ಡಿದೆ ಅನ್ನೋದಿದೆ..! ತಪ್ಪದೇ ಓದಿ.. ಎಲ್ಲರಿಗೂ ತಲುಪುವಂತೆ ಮಾಡಿ..!
ಆಕೆ ಅಂಕಿತಾ (ಹೆಸರು ಬದಲಿಸಲಾಗಿದೆ). ಕಳೆದ ವರ್ಷ ಅಕ್ಟೋಬರ್ ತಿಂಗಳ ಒಂದು ದಿನ ರಾತ್ರಿ “ಯಾರಪ್ಪಾ ಅಡುಗೆ ಮಾಡ್ತಾರೆ.. ಹೊರಗಡೆಯಿಂದ ತರಿಸಿಕೊಂಡು ತಿಂದರಾಯ್ತು ಅಂತ ಡಿಸೈಡ್ ಮಾಡ್ತಾರೆ..”! ಅಡುಗೆ ಮಾಡಲು ಸೋಮಾರಿತನ ತೋರಿದ್ದೇ ಅವರ ಲೈಫ್ಗೆ ಟಾರ್ಚರ್ ಆಗಿಬಿಡುತ್ತೆ ಅಂತ ಅವರು ಕಲ್ಪನೆ ಕೂಡ ಮಾಡಿರ್ಲಿಲ್ಲ..!
ಕೋರಮಂಗಲದಲ್ಲಿ ವಾಸವಿದ್ದ ಅಂಕಿತ ಅವತ್ತೊಂದು ದಿನ ರಾತ್ರಿ ಅಡುಗೆ ಮಾಡಿ ಊಟ ಮಾಡುವ ಬದಲು ತನ್ನ ಮೊಬೈನಿಂದ ರೆಸ್ಟೊರೆಂಟ್ ಒಂದಕ್ಕೆ ಕರೆ ಮಾಡಿ ತಾನಿರೋ ಮನೆಯ ವಿಳಾಸವನ್ನು ಕೊಟ್ಟು ಊಟ ತಂದು ಕೊಡುವಂತೆ ಕೇಳಿಕೊಳ್ತಾರೆ..! ಆಗ ರಾತ್ರಿ ಸುಮಾರು ಹತ್ತುಗಂಟೆ ಮೂವತ್ತು ನಿಮಿಷ..! ಸ್ವಲ್ಪ ಹೊತ್ತಲ್ಲೇ ರೆಸ್ಟೋರೆಂಟ್ ನಿಂದ ಊಟ ತಂದಿರೋದಾಗಿ ಡೆಲುವರಿ ಬಾಯ್ ಕಾಲಿಂಗ್ ಬೆಲ್ ಮಾಡ್ತಾನೆ..! ಹಸಿದು ಕೂತಿದ್ದ ಅಂಕಿತ ಊಟ ಬಂತು ಅಂತ ಬಾಗಿಲು ತೆರೆದು ಬಿಡ್ತಾರೆ..! ಬಾಗಿಲು ತೆರೆದಾಗ ಒಳ್ಳೆಯವನಂತೆ, ಮುಗ್ಧನಂತೆ ಕಾಣುತ್ತಿದ್ದ ಹುಡುಗ ಮೇಡಂ ಊಟ ಅಂತ ಅವರು ಆರ್ಡರ್ ಮಾಡಿದ್ದ ಊಟವನ್ನು ಕೊಡ್ತಾನೆ..! ಅವನು ಊಟ ಕೊಟ್ಟ ತಕ್ಷಣವೇ ಅಂಕಿತ ಬಿಲ್ ಪೇ ಮಾಡ್ತಾರೆ..! ದುಡ್ಡು ತಗೊಂಡ ಆತ, ಮೇಡಂ, ಕುಡಿಯಲಿಕ್ಕೆ ನೀರು ಕೊಡ್ತೀರಾ ಅಂತ ಕೇಳ್ತಾನೆ.! ಅವನ ಮುಖ ನೋಡಿದ್ರೆ ತುಂಬಾ ಒಳ್ಳೆಯವನ ತರ ಕಾಣ್ತಾ ಇದ್ದನಲ್ಲಾ.?! ಸರಿ, ಒಂದುನಿಮಿಷ ಅಂತ ಒಳಗೆ ಹೋಗಿ ನೀರು ತಂದು ಕೊಡ್ತಾರೆ..! ನೀರು ಕುಡಿದ ಈ ಡೆಲುವರಿ ಬಾಯ್ ಆಕೆ ಒಬ್ಬಳೇ ಇದ್ದಾಳೆಂಬುದನ್ನು ಖಚಿತ ಪಡಿಸಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡ್ತಾನೆ..!
ಸುಮಾರು ಎರಡು ಗಂಟೆಯ ನಂತರ ಕರೆ ಮಾಡಿದ ಆ ಫೋರ್ ಟ್ವೆಂಟಿ ಡೆಲಿವರಿ ಬಾಯ್ “ನಾವು ಫ್ರೆಂಡ್ಸ್ ಆಗಿರೋಣ ಅಂತ” ತಲೆತಿನ್ತಾನೆ..! ಮೊದ ಮೊದಲಿಗೆ ಕರೆಗಳಿಗೆ ತಲೆಕೆಡಿಸಿಕೊಳ್ಳದ ಅಂಕಿತ ನಂತರ ಈತನ ನಂಬರ್ ಬ್ಲಾಕ್ ಮಾಡಿ ಸುಮ್ಮನಾಗ್ತಾರೆ..! ಬೇರೆ ಬೇರೆ ನಂಬರ್ ಗಳಿಂದ ಕಾಲ್ ಮಾಡೋಕೆ ಶುರುಮಾಡ್ತಾನೆ ಆ ಭೂಪ..! ನಂತರ ರೆಸ್ಟೋರೆಂಟಿಗೆ ಫೋನ್ ಮಾಡಿ ದೂರನ್ನೂ ಕೊಡ್ತಾರೆ ಅಂಕಿತ..! ರೆಸ್ಟೋರೆಂಟಿನ ಮಾಲಿಕರಿಗೆ ಈ ಹುಡುಗನ ನಡೆತೆ ಬಗ್ಗೆ ಹೇಳುತ್ತಾರೆ..! ಮಾಲಿಕರು ಕ್ಷಮೆ ಕೋರಿದ್ದಲ್ಲದೇ.. ಆ ಹುಡುಗ ಅವನ ಸ್ನೇಹಿತರ ನಂಬರ್ ಅಂತ ತಪ್ಪಾಗಿ ಅರ್ಥಮಾಡಿಕೊಂಡು ನಿಮಗೆ ಕರೆ ಮಾಡಿರಬಹುದು..! ಅವನಿಂದಲೂ ಕ್ಷಮೆ ಕೇಳಿಸುವುದಾಗಿ ಹೇಳಿ ಸುಮ್ಮನಾಗ್ತಾರೆ..!
ಆದಾಗ್ಯೂ ಮಾರನೇ ದಿನದಿಂದಲೇ ಬೇರೆ ಬೇರೆ ನಂಬರ್ ಗಳಿಂದ ಪದೇ ಪದೇ ನೂರೆಂಟು ಕರೆಗಳು ಅಂಕಿತಾರ ನಂಬರ್ಗೆ ಬರಲು ಶುರುವಾಗುತ್ತವೆ..! ಆ ಕರೆಗಳನ್ನು ಸ್ವೀಕರಿಸಿದಾಗ ನಾಲ್ಕೈದು ಜನ ಹುಡುಗರು ಹಿಂದಿಂದ ಕಮೆಂಟ್ಸ್ ಮಾಡುತ್ತಾ ನಗುವುದು ಕೇಳಿ ಬರುತ್ತೆ..! ಅಂಕಿತಾ ನಾಲ್ಕೈದು ನಂಬರ್ ಗಳನ್ನು ಬ್ಲಾಕ್ ಮಾಡಿದರೂ ಮತ್ತೆ ಮತ್ತೆ ಕರೆ ಬರುವುದು ತಪ್ಪಲಿಲ್ಲ..! ಅದೇ ಹುಡುಗ ಕರೆ ಮಾಡ್ತಾ ಇರೋದು ನನ್ನ ಬಳಿ ಸಾಕ್ಷಿ ಇದೆ ಅಂತ ಆಕೆ ಮತ್ತೆ ರೆಸ್ಟೋರೆಂಟ್ ಮಾಲಿಕರಿಗೆ ಹೇಳಿದರೂ ಪ್ರಯೋಜನ ಆಗಲಿಲ್ಲ..! ಎಷ್ಟೇ ನಂಬರ್ ಬ್ಲಾಕ್ ಮಾಡಿದರೂ ಅವನಿಂದ ಬೇರೆ ಬೇರೆ ನಂಬರ್ ಗಳಿಂದ ಕರೆ ಬರುವುದು ತಪ್ಪಲಿಲ್ಲ..! ಈ ಡೆಲಿವರಿ ಬಾಯ್ ನ ಕಾಟದಿಂದ ಹೆದರಿದ ಅಂಕಿತ ಒಬ್ಬಳೇ ಮನೆಯಲ್ಲಿ ಉಳಿಯಲು ಹೆದರಿ ಗೆಳತಿಯರೊಡನೆ ಉಳಿಯಲಾರಂಭಿಸಿ ನಂತರ ಅವರೊಡನೆಯೇ ಇರುವ ಸಲುವಾಗಿ ಮನೆಯನ್ನೇ ಬೇರೆಡೆಗೆ ವರ್ಗಾಯಿಸಿದರು..! ಏನೇ ಮಾಡಿದರೂ ಕರೆ ಬರುವುದು ತಪ್ಪಲಿಲ್ಲ..!
ಕೋರಮಂಗಲ ಪೊಲೀಸರಿಗೆ ದೂರು ನೀಡಿದರೂ ಇಲ್ಲಿತನಕ ಆತನ ಬಗ್ಗೆ ವಿಚಾರಣೆ ಆಗಿಲ್ಲವಂತೆ..! ನಂಬರ್ ಬದಲಾಯಿಸಿದರೂ ಅವನಿಂದ ಟಾರ್ಚರ್ ತಪ್ಪಲಿಲ್ಲ..! ಈಗ ಬೆಂಗಳೂರನ್ನೇ ಬಿಟ್ಟು ಅಂಕಿತ ಹೋಗಿದ್ದರೂ ಆ ಲೋಫರ್ ಡೆಲುವರಿ ಬಾಯ್ಯ ಟಾರ್ಚರ್ ತಪ್ತಾ ಇಲ್ಲವಂತೆ..! ಇದರಿಂದ ಬೇಸತ್ತಿರುವ ಅಂಕಿತಾ ಟ್ವೀಟರ್ ಮೊರೆಹೋಗಿ ಈ ಸಂಬಂಧ ಪೋಸ್ಟ್ ಹಾಕಿದ್ದಾರೆ..! ಈಗ ಈ ಬಗ್ಗೆ ಪೊಲೀಸರು ಅಂಕಿತರನ್ನು ಸಂಪರ್ಕಿಸಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕಿ ಮುಂದಿನ ಕ್ರಮ ಕೈಗೊಳಲು ಮುಂದಾಗಿದ್ದಾರೆಂಬುದು ವರದಿಯಾಗಿದೆ..! ಅಂಕಿತರಿಗೆ ಇವನು ಕಾಟಕೊಡಲು ಶುರುಮಾಡಿ ವರ್ಷದಾಟಿದೆ..!
ಸ್ನೇಹಿತರೇ ಅದರಲ್ಲೂ ಮುಖ್ಯವಾಗಿ ಸೋದರಿಯರೇ ನೀವು ಯಾವತ್ತೂ ಯಾರನ್ನೂ ನಂಬಲು ಹೋಗಬೇಡಿ..! ನೋಡಲು ಒಳ್ಳೆಯವರಂತೆ ಕಾಣೋರೆಲ್ಲಾ ಒಳ್ಳೆಯವರಾಗಿರಲ್ಲ..! ಅಪರಿಚಿತರಿಗೆ ನಿಮ್ಮ ಮೊಬೈಲ್ ನಂಬರ್, ನಿಮ್ಮ ವಿಳಾಸ ಕೊಡಬೇಡಿ..! ನೀವು ಒಳ್ಳೆಯತನದಿಂದಲೇ ಎಲ್ಲರ ಜೊತೆ ಬೆರೆಯುತ್ತೀರಿ..! ಆದರೆ ಇಂದು ಕಾನೂನಿನ ಭಯವೇ ಇಲ್ಲದ ನೀಚರು ತುಂಬಾ ಜನ ಇದ್ದಾರೆ..! ಮತ್ತೆ ಮತ್ತೆ ಹೇಳ್ತೀನಿ.. ದಯವಿಟ್ಟು ಸಾಮಾಜಿಕ ಜಾಲತಾಣಗಳಲ್ಲಾಗಲೀ.., ಅಥವಾ ಯಾವುದೇ ರೂಪದಲ್ಲಾಗಲೀ ಅಪರಿಚಿತರನ್ನು ಹತ್ತಿರ ಸೇರಿಸಿಕೊಳ್ಳಬೇಡಿ…! ನಿಮ್ಮ ಆತ್ಮೀಯನಾಗಿ, ಹಿತೈಷಿಯಾಗಿ, ಗೆಳೆಯನಾಗಿ, ಸಹೋದರನಾಗಿ ಹೇಳ್ತಾ ಇದ್ದೀನಿ.. ದಯವಿಟ್ಟು ಯಾರನ್ನೂ ಸಂಪೂರ್ಣ ನಂಬಬೇಡಿ..! ಮನೆ ವಿಳಾಸ, ಮೊಬೈಲ್ ನಂಬರ್ ಅಂತೂ ಕೊಡಲೇ ಬೇಡಿ..! ಅನಿವಾರ್ಯವಾಗಿ ಕೊಡಬೇಕೆಂದೆನಿಸಿದರೂ ಅಗತ್ಯವಿದೆಯೇ ಎನ್ನುವುದನ್ನು ಮತ್ತೆ ಮತ್ತೆ ಯೋಚನೆ ಮಾಡಿ ಕೊಡಿ…! ಅನಗತ್ಯ ಕರೆಗಳು ಬಂದರೆ ಜೊತೆಗೆ ಅಣ್ಣನೋ, ತಮ್ಮನೋ, ಅಥವಾ ಇನ್ಯಾರೋ ಹಿತೈಷಿಯ ಜೊತೆ ಹೋಗಿ ಪೊಲೀಸರಿಗೆ ದೂರು ನೀಡಿ..! ನಿಮ್ಮ ದೂರಿಗೆ ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸದೇ ಇದ್ದರೆ ಮಾಧ್ಯಮದವರು ಇದ್ದೇವೆ..! ಹೆದರದೆ ನಮ್ಮ ಬಳಿ ಬನ್ನಿ..! ಈ ಸ್ಟೋರಿ ಎಲ್ಲರೂ ಓದಲೇ ಬೇಕೆಂದೆನಿಸಿದರೆ ಶೇರ್ ಮಾಡಿ.. ಇಂತಿ ನಿಮ್ಮವ..
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!