ಟೀಮ್ ಇಂಡಿಯಾದ ಬೆಸ್ಟ್ ಆಫ್ ಸ್ಪಿನ್ನರ್ ಆಗಿರೋ ಹರ್ಭಜನ್ ಒಬ್ಬ ಭಾವುಕ ಶಾಂತಸ್ವರೂಪಿ, ಒಗ್ಗಟ್ಟಿನಲ್ಲಿರೋಕೆ ಇಷ್ಟಪಡೋವ್ನು. ಆದ್ರೆ ಈಗಿರೋ ಎಲ್ಲಾ ಸೋ ಕಾಲ್ಡ್ ಪಾಶನೇಟ್ ಜನ್ರಂಗೆ ಇವ್ರೂನೂ ತನ್ನ ಭಾವನೆಗೆ ಬಲಿಯಾಗಿ, ನಮ್ಮ ಸಲ್ಲೂ ಭಾಯಿಗಿಂತಲೂ ತಾನು ಒಂದು ಕೈ ಮೇಲೆ ಎಂದು ತೋರಿಸಿದ್ದಾರೆ.
2008 ರಲ್ಲಿ ನಡೆದ IPL ಪಂದ್ಯದ ಸಮಯದಲ್ಲಿ ಶ್ರೀಶಾಂತ್ ಕೆನ್ನೆಗೆ ಏಟು ಕೊಟ್ಟಿದ್ದು, ಭಾರೀ ಹೆಗ್ಗಳಿಕೆಗೆ ಪಾತ್ರರಾಗಿದ್ರು, ಪಂದ್ಯದಿಂದಲೂ ಹೊರಗುಳಿದಿದ್ದರು.ಇದಕ್ಕೂ ಮೊದಲು ಆಸ್ಟ್ರೇಲಿಯಾದ ಆಂಡ್ರೀವ್ ಸೈಮಂಡ್ಸ್ ಜೊತೆಗೆ ಮಂಗನ ಚೇಷ್ಟೆ ಮಾಡುತ್ತಾ ಸಿಕ್ಕಿಬಿದ್ದಿದ್ದರು. ಆದ್ರೆ ಇತ್ತೀಚೆಗೆ ನಮ್ಮ ಭಜ್ಜಿ ತುಂಬಾ ಮೆಚ್ಯೂರ್ ಆಗಿ ವರ್ತಿಸ್ತಿದ್ರು.ಇನ್ನೇನು ಭಜ್ಜಿ ತನ್ನ ಎಲ್ಲಾ ರೀತಿಯಿಂದಲೂ ಶಾಂತಿಯಾಗಿದ್ದಾರೆ ಅಂದು ಕೊಳ್ಳೋಷ್ಟ್ರಲ್ಲಿ ಮತ್ತೆ ಟ್ವಿಟ್ಟರ್ ನ ಈ ಹೇಳಿಕೆ ನಮ್ಮನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಭಜ್ಜಿಯವರ ಈ ವಿಲಕ್ಷಣವಾದ ಕಾಡು ಭಾಷೆ ಯಿಂದ ಟ್ವಿಟ್ಟರ್ ಯೂಸರ್ಸ್ ದಂಗಾದ್ರು.ನಮ್ಮ ನೆಚ್ಚಿನ ಭಜ್ಜಿಯವರು ಕಳುಹಿಸಿದ ಈ ಸ್ಟೇಟ್ಮೆಂಟ್ ಕೆಲವರಿಗೆ ಒಂದು ದೊಡ್ದ ಅವಮಾನವಾದಂಗಾಗಿದೆ.ಆದ್ರೆ ಇನ್ಯಾರೂ ಇದನ್ನು ಅರ್ಥ ಮಾಡಿಕೊಳ್ಳೋದ್ರೊಳಗೆ ಭಜ್ಜಿ ಇದನ್ನು ಡಿಲೀಟ್ ಮಾಡಿದ್ರು,ಆದ್ರೆ ಅಷ್ಟು ಸುಲಭವಾಗಿ ಭಜ್ಜಿ ಎಲ್ಲಾರ ಕಣ್ಣಿಂದ್ಲೂ ತಪ್ಪಿಸಿಕೊಳ್ಳುವುದು ಅಸಾಧ್ಯ.ನೋಡಿದವರಲ್ಲಿ ಯಾರೋ ಸ್ಕ್ರೀನ್ ಶಾಟ್ ತೆಗೆದದ್ದೇ ಅದನ್ನು ವೈರಲ್ ಮಾಡ್ಬಿಟ್ರು.
ನಿಜಕ್ಕೂ ಭಜ್ಜಿ ಯವರೇ ಟ್ವಿಟ್ಟರ್ ಶ್ರೀಶಾಂತ್ ಥರ ಅಲ್ಲ ಕಣ್ರಿ.ಪ್ರತೀ ಬಾರಿ ನಿಮ್ಮ ತಾಳ್ಮೆ ಕಳ್ಕೋಬೇಡಿ.ಇವತ್ತು ನಿಮಗೆ ಗೀತಾ ಬಸ್ರಾರಿಂದ ಒಂದು ಒಳ್ಳೆ ಕ್ಲಾಸ್ ಇದೆ ಬಿಡಿ.
- ಸ್ವರ್ಣಲತ ಭಟ್
POPULAR STORIES :
ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ
ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???