ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸರು ಮೊಹಮ್ಮದ್ ಶಹಜಮಾಲ್ ಎಂಬ ಮೌಲ್ವಿಯನ್ನು ಬಂಧಿಸಿದ್ದಾರೆ.
ಈತ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಧರ್ಮ ಬೋಧನೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಭಾನುವಾರ ದುರ್ಗದ ಬಳಿಯ ಅಂಗಡಿಯೊಂದಕ್ಕೆ ತೆರಳಿದ್ದ ಯುವತಿಯ ಫೋಟೋವನ್ನು ಈ ಮೌಲ್ವಿ ಕ್ಲಿಕ್ಕಿಸಿದ್ದ.
ಯುವತಿ ಆತನಿಂದ ಮೊಬೈಲ್ ಕಸಿದುಕೊಂಡು ತಂದೆಗೆ ವಿಚಾರ ಮುಟ್ಟಿಸಿದ್ದಾಳೆ. ಅವರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ.