ಬೆಂಗಳೂರು: ಕುಮಾರಸ್ವಾಮಿ ಅವರು ತಿಮಿಂಗಿಲ ಯಾರೆಂದು ತಿಳಿಸಿದರೆ ಈ ಪ್ರಕರಣ ಮುಗಿಯುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಿಮಿಂಗಿಲ ಯಾರೆಂದು ತಿಳಿಸಿದರೆ ಈ ಪ್ರಕರಣ ಮುಗಿಯುತ್ತದೆ. ಕುಮಾರಸ್ವಾಮಿಯವರೇ ಹೇಳಿದ್ರೆ ಒಳ್ಳೆಯದು. ಅವರು ಪ್ರತಿದಿನ ಒಂದೊಂದು ಹೇಳಿಕೆ ಕೊಡುತ್ತಾರೆ. ಅವರು ದಾಖಲೆ ಕೊಟ್ಟ ನಂತರ ತನಿಖೆ ಮಾಡಲಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಪ್ರಜ್ವಲ್ ರೇವಣ್ಣ ಇಂದು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ನಿಮಗೆ ಮಾಹಿತಿ ಇದೆಯೇ?, ಹೇಳಿ. ಟಿಕೆಟ್ ಬುಕ್ ಆಗಿರುವ ಬಗ್ಗೆ ಮಾಹಿತಿ ತಮಗೆ ಇದೆಯಾ?. ಗೃಹ ಇಲಾಖೆಗೆ ಮಾಹಿತಿ ಇರುತ್ತದೆ. ನಿಮಗೆ ಹೇಳಲು ಆಗಲ್ಲ. ನಿಮಗೆ ಗೊತ್ತಿದ್ರೆ ಹೇಳಿ ತನಿಖೆಗೆ ಸಹಾಯ ಆಗುತ್ತದೆ ಎಂದು ತಿಳಿಸಿದರು.
HDK ತಿಮಿಂಗಿಲ ಯಾರೆಂದು ತಿಳಿಸಿದರೆ ಈ ಪ್ರಕರಣ ಮುಗಿಯುತ್ತದೆ !
Date:






