ಬೆಂಗಳೂರು : ಮಹಾರಾಷ್ಟ್ರದಲ್ಲಿ ಸರ್ಕಾರ ಬೀಳಿಸಲು ಬಿಜೆಪಿ ಹೊರಟಿದೆ. ನಮಗೆ ಏನು ಗೊತ್ತಿಲ್ಲ ಎಂಬಂತೆ ಬಿಜೆಪಿಯವರು ಇದ್ದಾರೆ. ಆದರೆ, ಇಡೀ ದೇಶಕ್ಕೆ ಬಿಜೆಪಿಯ ಆಟ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಗಳಿಗೆ ಶಾಸಕರನ್ನು ಕರೆದೊಯ್ದಿದ್ದಾರೆ. ಶಾಸಕರನ್ನ ಹೈಜಾಕ್ ಮಾಡಿಕೊಂಡು ಅಲ್ಲಿಟ್ಟುಕೊಂಡಿದ್ದಾರೆ. ಇಲ್ಲಿ ಸರ್ಕಾರ ಇದ್ದಾಗ ಮುಂಬೈಗೆ ಕರೆದೊಯ್ದಿದ್ದರು. ಕರ್ನಾಟಕದ ನೆನಪು ಮತ್ತೇನು ಕಾಣುತ್ತಿದೆ. ಶಾಸಕರು ಹೋಗಬೇಕಾದರೆ ಆಮೀಷಗಳು ಇರುತ್ತದೆ. ಈ ವಿಷಯ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ, ಕಾರಣಗಳು ಬೇರೆ-ಬೇರೆ ಕೊಡುತ್ತಾರೆ. ಚುನಾಯಿತ ಸರ್ಕಾರ ಅಸ್ಥಿರಗೊಳಿಸುವಂತಹದ್ದು ಮಾರಕ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ನಡೆ. ಯಾರ ಸರ್ಕಾರವೂ ಇರಬಾರದೆಂಬುದು ಬಿಜೆಪಿ ಆಸೆ. ಕೇಂದ್ರ ಸೇರಿ ಎಲ್ಲಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು. ಅವರ ಈ ರೀತಿಯ ಕುತಂತ್ರದ ಬೆಳವಣಿಗೆಗಳು ಏನಿದೆ ಮುಂದಿನ ದಿನಗಳಲ್ಲಿ ಅವರಿಗೆ ಬೂಮ್ ರಿಂಗ್ ಆಗಲಿದೆ ಎಂದರು.