ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನೂ ಕಳೆದುಕೊಂಡ. ಆದರೆ ಅತನಿಗೆ ಟೋಕಿಯೋ ಒಲಂಪಿಕ್‍ಗೆ ಸ್ಪರ್ಧಿಸುವ ಗುರಿ…!

Date:

ತನ್ನ ನತದೃಷ್ಟ ವಿಧಿಯಾಟಕ್ಕೆ ತಲೆಕೆಡಸಿಕೊಳ್ಳದೇ ಮುನ್ನುಗ್ಗಿ ಇದೀಗ ಸಾಧನೆಯ ಉತ್ತುಂಗಕ್ಕೆ ಏರಿದ್ದಾನೆ 26ರ ಹರೆಯದ ವಿಶ್ವಾಸ್ ಕೆ.ಎಸ್. ಮೂಲತಃ ಬೆಂಗಳೂರಿನ ಯುವಕನಾದ ಈತ 2016ರ ಸ್ಪೀಡೋ ಕ್ಯಾನ್ ಅಮ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯಯನ್‍ಷಿಪ್‍ನಲ್ಲಿ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾನೆ. ಈತನ ಕಥೆ ಹಾಗೂ ಅವನ ಸಾಧನೆ ವಿಶಿಷ್ಟ ಹಾಗೂ ಸ್ಪೂರ್ತಿದಾಯಕವಾಗಿದೆ. ಯಾಕಂದ್ರೆ ವಿಶ್ವಾಸ್ ತನ್ನ ಹತ್ತನೇ ವಯಸ್ಸಿನಲ್ಲಿಯೇ ದುರಂತ ವಿಧಿಗೆ ಬಲಿಯಾಗಿ ತನ್ನ ಎರಡೂ ಕೈಗಳನ್ನೂ ಕಳೆದುಕಂಡಿದ್ದ.. ವಿಧಿಯ ಆಟ ನೋಡಿ… ಇದೀಗ ಆತನನ್ನು ಎಲ್ಲಿ ಕರೆದುಕೊಂಡು ಹೋಗಿ ನಿಲ್ಲಿಸಿದೆಯಂತ. ದೇವ್ರು ಯಾವುದಾದ್ರು ಒಂದು ಕಸಿದು ಕೊಂಡಿದ್ರೆ, ಮತ್ಯಾವುದೋ ರೂಪದಲ್ಲಿ ಸಹಕಾರಿಯಾಗಿರ್ತಾನೆ ಅನ್ನೋದಕ್ಕೆ ಈ ವಿಶ್ವಾಸ್ ಸೂಕ್ತ ಉದಾಹರಣೆ ನೋಡಿ. ಆದ್ರೆ ಕೊಟ್ಟ ಅವಕಾಶವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಂಡಿದಕ್ಕೆ ಇಂದು ವಿಶ್ವಾಸ್ ವಿಶ್ವ ಮಟ್ಟದಲ್ಲಿ ಹೆಸರು ಪಡೆದಿದ್ದಾನೆ.
ವಿಶ್ವಾಸ್ ಬಟರ್‍ಫ್ಲೈ, ಬ್ಯಾಕ್‍ಸ್ಟ್ರೋಕ್, ಬ್ರೆಸ್ಟ್ ಸ್ಟ್ರೋಕ್ ಹಾಗೂ ಫ್ರೀ ಸ್ಟೈಲ್ ಸ್ವಿಮ್ಮಿಂಗ್‍ನಲ್ಲಿ ಪ್ರವೀಣ. ಆತನ ಈ ಸಾಧನೆಗೆ ಅವನ ಅವಿರತ ಪರಿಶ್ರಮ ಹಾಗೂ ಗುರಿ ಮುಟ್ಟುವ ಛಲವೇ ಕಾರಣ ಅನ್ಬೋದು.
ವಿಶ್ವಾಸ್‍ಗೆ ಕೈಯಲ್ಲಿ ಒಂದು ಉನ್ನತ ಕೆಲಸವೂ ಧಕ್ಕಿತ್ತು. ಆದರೆ ಕೆಲಸದ ಅವಧಿಯಲ್ಲಿ ಅಲ್ಲಿನ ಜನರ ಅಪಹಾಸ್ಯಕ್ಕೆ ಒಳಗಾಗಿ ತೀವ್ರವಾಗಿ ನೊಂದು ಹೋಗಿದ್ದ. ಕೆಲವು ಸಮಯದ ಬಳಿಕ ಈತನಿಗೆ ಈಜುಗಾರಿಕೆಯಲ್ಲಿ ಹೆಚ್ಚು ಒಲವು ಹೊಂದಿದ್ದರಿಂದ ಕ್ರೀಡೆಯಲ್ಲಿ ಒಂದು ಅವಕಾಶವೂ ಬಂದಿತ್ತು. ಅವನ ಕನಸಿಗೆ ಆಧರವಾಗಿ ನೀಂತಿದ್ದೇ ಈ ಅಶ್ತಾ ಅಂಡ್ ಬುಕ್ ಎ ಸ್ಮೈಲ್ ಸಂಸ್ಥೆ. ವೃತ್ತಿಪರ ಅಥ್ಲೀಟ್‍ಗಳಿಗೆ ಟ್ರೈನಿಂಗ್ ಜೊತೆಗೆ ಊಟ ವಸತಿ ಸೌಲಭ್ಯಗಳನ್ನು ನೀಡಿ ಅವರನ್ನು ಅತ್ಯುತ್ತಮ ಕ್ರೀಡಾಪಟುಗಳಾಗಿ ತಯಾರು ಮಾಡ್ತಾ ಇದ್ವು ಈ ಸಂಸ್ಥೆ. ಇವರ ಸಹಕಾರದಿಂದಲೇ ವಿಶ್ವಾಸ್ ಸಾಧನೆಯ ಉತ್ತುಂಗಕ್ಕೆ ಏರಿ ನೋಡು ನೋಡುತ್ತಲೇ ಆತನ ಸಾಧನೆಗೆ ಕಡಿವಾಣವೇ ಬೀಳಲಿಲ್ಲ. ಅಷ್ಟರ ಮಟ್ಟಕ್ಕೆ ತನ್ನ ಕ್ರೀಡೆಯಲ್ಲಿ ತಲ್ಲೀನನಾಗಿದ್ದ. ಈಗ ಅವನ ಬಹು ದೊಡ್ಡ ಕನಸು ಅಂದ್ರೆ ಅದು 2020ರ ಟೋಕಿಯೋ ಒಲಂಪಿಕ್‍ನಲ್ಲಿ ಭಾಗವಹಿಸುವುದು ಹಾಗೂ ರಾಷ್ಟ್ರಕ್ಕೆ ಕೀರ್ತಿ ತಂದು ಕೊಡುವುದು.
ನನ್ನ ತಂದೆ ಸತ್ಯ ನಾರಾಯಣ ಮೂರ್ತಿ ಕೃಷಿ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 16 ವರ್ಷಗಳ ಹಿಂದೆ ನಮ್ಮ ಮನೆಗೆ ಕ್ಯೂರಿಂಗ್‍ನಲ್ಲಿ ತೊಡಗಿಕೊಂಡಿರುವಾಗ ಆಯ ತಪ್ಪಿ ಬಿಲ್ಡಿಂಗ್ ಮೇಲಿಂದ ನೇರವಾಗಿ ವಿದ್ಯತ್ ತಂತಿಯ ಮೇಲೆ ಬಿದ್ದಿದ್ದೆ. ನನ್ನ ತಂದೆ ಅಂದು ನನ್ನ ಜೀವ ಕಾಪಾಡಿದರು. ಸುಮಾರು ಎರಡು ತಿಂಗಳ ಕಾಲ ನಾನು ಕೋಮಾದಲ್ಲಿದ್ದೆ. ಕೋಮಾದಿಂದ ಎಚ್ಚರಗೊಂಡಾಗ್ಲೇ ಗೊತ್ತಾಗಿದ್ದು ನನ್ನ ಎರಡೂ ಕೈಗಳು ಕಳೆದುಕೊಂಡಿದ್ದೇನೆ ಎಂದು… ಹೀಗೆ ವಿಶ್ವಾಸ್ ತನ್ನ ಹಳೇಯ ನೆನಪುಗಳನ್ನ ಮೆಲುಕು ಹಾಕಿದ್ದ.
ವಿಶ್ವಾಸ್‍ನ ಆಸಕ್ತಿ ಹಾಗೂ ಸಾಧನೆಗೆ ನಮ್ಮ ದೋಡ್ಡ ಸಲಾಂ ಇರಲಿ.. ಮುಂದೆ ಈತನ ಯಶಸ್ಸಿಗೆ ನಮ್ಮ ಅಭಿನಂದನೆಗಳು. ಹಾಗೆಯೇ ಸರ್ಕಾರ ಈತನ ಸಾಧನೆ ಗುರುತಿಸಿ ಬೆಂಬಲ ನೀಡಿದರೆ ಈತನ ಯಶಸ್ಸು ಅದು ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಸಂಗತಿ ಅಲ್ಲವೇ..?

  • ಪ್ರಮೋದ್ ಲಕ್ಕವಳ್ಳಿ

POPULAR  STORIES :

ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!

ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.

ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?

ಸೆಕ್ಸ್ ಉದ್ಯಮದಲ್ಲಿ ಚೀನಾ ನಂ.1 ಭಾರತ ನಂ.7..!

ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!

ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...