ನಾವೆಲ್ಲಾ ಈಗ ಪಾಶ್ಚಿಮಾತ್ಯ ಸಂಸ್ಕೃತಿ ಮೆಲೆ ಹೆಚ್ಚು ಪ್ರಭಾವಿತರಾಗ್ತಾ ಇದೀವಿ. ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಎತ್ತಿ ಕಟ್ಟೋದನ್ನು ಬಿಟ್ಟು ಪರರ ಸಂಸ್ಕೃತಿ ಬಗ್ಗೆ ಹೆಚ್ಚು ಹೆಚ್ಚು ಒಗ್ಗಿಕೊಳ್ತಾ ಇದೀವಿ. ಆದ್ರೆ ವಿದೇಶೀಯರು ಹಾಗಲ್ಲ. ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರು, ಇಲ್ಲಿರುವ ರೂಢಿ ಸಂಪ್ರದಾಯಗಳನ್ನು ಕಲಿಯೋಕೆ ತಮ್ಮ ದೇಶವನ್ನೆ ಬಿಟ್ಟು ಇಲ್ಲಿಗೆ ಬರ್ತಾರೆ. ಇದಕ್ಕೆ ಸೂಕ್ತ ನಿದರ್ಶನ ಫ್ರಾನ್ಸ್ ದೇಶದ ನಿಕೋಲಸ್ ರೀಮೆನ್. 48 ವರ್ಷದ ನಿಕೋಲಸ್‍ಗೆ ಪುರಾತನ ಭಾಷೆಯಾದ ಸಂಸ್ಕೃತ ಕಲಿಯೊ ಹುಚ್ಚು. ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್‍ಡಿ ಮಾಡಿರುವ ಇವರು ಸಂಸ್ಕೃತವನ್ನು ಕಲಿಯೊ ಆಸೆಗೆ ಫ್ರಾನ್ಸ್ ನಲ್ಲಿದ್ದ ತನ್ನ ಕನ್ಸಲ್ಟೆನ್ಸಿ ಸಂಸ್ಥೆಯನ್ನೇ ಮಾರಾಟ ಮಾಡಿದ್ದಾರೆ ನೋಡಿ. ಅಲ್ಲಿಂದ ಬೆಂಗಳೂರಿಗೆ ಬಂದು ಸದ್ಯಕ್ಕೆ ಚಾಮರಾಜಪೇಟೆಯಲ್ಲಿ ಫ್ಲಾಟ್ ಒಂದರಲ್ಲಿ ಬಾಡಿಗೆ ಇದ್ದಾರೆ..! 1992ರಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್‍ಡಿ ಪಡೆದ ನಿಕೋಲಸ್ ಅದೇ ಕ್ಷೇತ್ರದಲ್ಲಿ ವೃತ್ತಿಯನ್ನು ಆರಂಭಿಸಿದರು. ಮಲೇಷಿಯಾದಲ್ಲಿದ್ದಾಗ ನಿಕೋಲಸ್ ಅವರಿಗೆ ತಮಿಳುನಾಡಿನ ಸ್ನೇಹಿತರಿದ್ರು. 1994ರಲ್ಲಿ ಒಂದು ಬಾರಿ ಭಾರತಕ್ಕೆ ಆಗಮಿಸಿದ್ದ ಇವರು ತಮಿಳುನಾಡಿನಾದ್ಯಂತ ಸುತ್ತಾಡಿ ಇಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡರು. ಅದಾದ ನಂತರ ತಮ್ಮ ಥಿಸಿಸ್ ಬಗ್ಗೆ ಅಧ್ಯಯನ ಮಾಡೋಕೆ ಎಂದು ಬೆಂಗಳೂರಿಗೆ ಬಂದ ನಿಕೋಲಸ್ ಇಲ್ಲಿನ ಸಂಸ್ಕೃತ ಭಾಷೆಯ ಮೇಲೆ ಆಸೆ ಹುಟ್ಟಿತು. ಈಗ ಅವರಿಗೆ ವೇದ, ಉಪನಿಷತ್ತು, ಭಗದ್ಗೀತೆ ಹೀಗೆ ಮೂಲ ಸಂಸ್ಕೃತದಲ್ಲೆ ಬರೆಯಲಾದ ಗ್ರಂಥಗಳನ್ನೆಲ್ಲಾ ಸಂಸ್ಕೃತದಲ್ಲೆ ಓದಬೇಕೆಂಬುದು ಅವರ ಅಸೆ.
ಇವರ ತಂದೆಯೂ ಕೂಡ ಇಂಡೋ-ಯೂರೋಪಿಯನ್ ಭಾಷೆ ಕಲಿತಿದ್ರು. ತಾಯಿ ಅಮೇರಿಕನ್ ಸೋಷಿಯಾಲಜಿಯಲ್ಲಿ ಶಿಕ್ಷಕಿ. ಹೀಗಾಗಿ ಪುರಾತನ ಭಾಷೆಗಳನ್ನು ಕಲಿಯಲು ಪ್ರೇರಣೆ ಆಯ್ತು. ಈ ಸಮಯಕ್ಕಾಗಿ ಕಾದಿದ್ದ ನಿಕೋಲಸ್ ಈಗ ಫ್ರಾನ್ಸ್ ನಲ್ಲಿದ್ದ ತಮ್ಮ ಸಂಸ್ಥೆಯನ್ನು ಮಾರಿ ಕರ್ನಾಟಕದ ಸಂಸ್ಕೃತ ಯೂನಿವರ್ಸಿಟಿ ಸೇರಿಕೊಂಡಿದ್ದಾರೆ. ಸಂಸ್ಕೃತ ಭಾಷೆಯಲ್ಲಿಯೇ ಉನ್ನತ ಪದವಿ ಪಡೆಯುವ ಗುರಿಯೂ ಹೊಂದಿದ್ದಾರೆ. 20 ವರ್ಷಗಳ ಹಿಂದೆ ನಿಕೋಲಸ್ ಅವರಿಗೆ ಮದುವೆಯಾಗಿತ್ತು. ಆದರೆ 2012ರಲ್ಲಿ ಪತ್ನಿಯಿಂದ ವಿಚ್ಛೇದನೆ ಪಡೆದುಕೊಂಡಿದ್ದರು. ತಮ್ಮ ಸಂಸ್ಥೆಯಲ್ಲಿ ಅಪಾರ ಲಾಭ ಪಡೆದಿದ್ದ ನಿಕೋಲಸ್ ಈಗ ಅದನ್ನೆಲ್ಲಾ ಸಂಸ್ಕೃತ ಕಲಿಯೋಕೆ ವ್ಯಯ ಮಾಡ್ತಾ ಇದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!
ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story
ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!
ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ