No menu items!
12.1 C
Munich
Saturday, May 2, 2026

ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!

Must read

ಬಿಗ್‍ಬಾಸ್ ಸೀಸನ್-4ನಲ್ಲಿ ಈ ಬಾರಿ ಸಖತ್ ಎಂಟರ್‍ಟೈನಿಂಗ್ ಪರ್ಸನ್ ಅಂದ್ರೆ ಅದು ಪ್ರಥಮ್. ತನ್ನ ನೇರ ಮಾತುಗಳ ಮೂಲಕ ಮನೆಯ ಸದಸ್ಯರ ತಲೆನೋವಾಗಿದ್ದ ಪ್ರಥಮ್‍ಗೆ ಈ ಬಾರಿ ನಾಮಿನೇಟ್ ಪ್ರಕ್ರಿಯೆಯಿಂದ ಬಡ್ತಿ ಸಿಕ್ಕಿದೆ..! ಮೊದ್ಲು ಬಿಗ್‍ಬಾಸ್ ಮನೆಯಿಂದ ಪ್ರಥಮ್‍ನ ಹೇಗಾದ್ರೂ ಹೊರಗೆ ಹಾಕ್ಬೇಕು ಅಂತ ಮನೆಯ ಸದಸ್ಯರೆಲ್ಲರೂ ಶತಾಯ ಗತಾಯ ಪ್ರಯತ್ನ ಪಟ್ಟು, ಪ್ರತೀ ವಾರವೂ ಪ್ರಥಮ್‍ರನ್ನ ಎಲ್ಲಾ ಸದಸ್ಯರು ನಾಮಿನೇಟ್ ಮಾಡ್ತಾ ಇದ್ರು ಕೂಡ ಜನ ಮಾತ್ರ ಪ್ರಥಮ್‍ನ ಬಿಟ್ಕೊಡ್ಲಿಲ್ಲ ನೋಡಿ..! ಒಂದು ವಾರ ಕ್ಯಾಪ್ಟನ್ ಆದಾಗ ಹಾಗೂ ನಾಮಿನೇಟ್ ಪ್ರಕ್ರಿಯೆಯಿಂದ ಇಮ್ಯೂನಿಟಿ ದೊರತಾಗ ಪ್ರಥಮ್ ಹೆಸರು ನಾಮಿನೇಟ್ ಮಾಡ್ಲಿಲ್ಲ ಬಿಟ್ರೆ ಬಿಗ್‍ಬಾಸ್ ಪ್ರಾರಂಭವಾದ ಹನ್ನೊಂದು ವಾರಗಳಲ್ಲಿ ಒಂಬತ್ತು ವಾರವೂ ನಾಮಿನೇಟ್ ಆಗಿದ್ರು..! ಇನ್ನು ಪ್ರತಿ ವಾರವೂ ನನ್ನ ಹೆಸರನ್ನೆ ಮೊದ್ಲು ಮನೆಯ ಸದಸ್ಯರು ನಾಮಿನೇಟ್ ಮಾಡ್ತಾರೆ ಅಂತ ಗೊತ್ತಿದ್ದಕ್ಕೊ ಏನೊ..? ಪ್ರಥಮ್ ಎಲ್ಲರ ಟಾರ್ಗೆಟ್‍ಗಳನ್ನ ಪಾಸಿಟಿವ್ ಆಗಿ ತಗೊಂಡ..! ಅದೇ ನೋಡಿ ಪ್ರಥಮ್‍ಗೆ ಈಗ ಕೈ ಹಿಡ್ದಿದ್ದು. ಅದು ಹೇಗೆ ಅಂತೀರಾ ಬಿಗ್‍ಬಾಸ್ ಮನೆಯ ಸದಸ್ಯರಿಗೆಲ್ಲರಿಗೂ ಪ್ರಥಮ್ ತನ್ನ ನೇರ ಮಾತುಗಳಿಂದ ಅಲ್ಲೆ ಡ್ರಾ, ಅಲ್ಲೆ ಬಹುಮಾನ ಕೊಡ್ತಾ ಇದ್ರು. ಈ ವಾರದ ಸತ್ಯ ಮೇವ ಜಯತೆ ಟಾಸ್ಕ್ ನಲ್ಲಿ ಮನೆಯ ಎಲ್ಲಾ ಸದಸ್ಯರ ಇನ್ನೊಂದು ಮುಖ ಬಯಲಾಗಿದ್ದೆ ತಡ ಪ್ರಥಮ್ ಅಂದ್ರೆನೆ ಕೆಂಡ ಕಾರ್ತಾ ಇದ್ದ ಮನೆಯ ಇತರೆ ಸದಸ್ಯರು ಇಂದು ಪ್ರಥಮ್ ಈಸ್ ಗ್ರೇಟ್ ಅನ್ನೊ ಲೆವಲ್‍ಗೆ ಬಂದಿದ್ದಾರೆ..! ಈ ಟಾಸ್ಕ್ ಗೂ ಮೊದ್ಲು ನಡೆದ ನಾಮಿನೇಟ್ ಪ್ರಕ್ರಿಯೆಯಲ್ಲಿಯೂ ಕೂಡ ಎಲ್ಲರಿಗೂ ಅಚ್ಚರಿಯಾಗುವ ಘಟನೆ ನಡೀತು ನೋಡಿ..! ಅದೇನಂದ್ರೆ ಈ ವಾರ ಪ್ರಥಮ್‍ನ ಹೆಸರು ನಾಮಿನೇಟ್ ಆಗ್ಲಿಲ್ಲ..! ಮನೆಯಿಂದ ಹೊರ ನಡೆದಿದ್ದ ಸಂಜನಾ ಬಿಟ್ರೆ ಇನ್ಯಾರೂ ಕೂಡ ಪ್ರಥಮ್ ಹೆಸರು ಹೇಳಿಲ್ಲ..! ಇನ್ನು ಈ ಬಾರಿ ಮನೆಯ ಕ್ಯಾಪ್ಟನ್ ಆಗಿರುವ ಶಾಲಿನಿಯೂ ಪ್ರಥಮ್‍ರನ್ನು ನೇರ ನಾಮಿನೇಟ್ ಮಾಡ್ಬೋದಿತ್ತು. ಆದ್ರೆ ಮಾಡ್ಲಿಲ್ಲ..! ಪ್ರತಿ ವಾರವೂ ತನ್ನ ಹೆಸರು ನಾಮಿನೇಟ್ ಮಾಡೇ ಮಾಡ್ತಾರೆ, ಈ ವಾರನೂ ಹಾಗೇನೆ ಅಂತ ತಿಳ್ಕೊಂಡಿದ್ದ ಪ್ರಥಮ್‍ಗೂ ತನ್ನ ಹೆಸರು ಬರ್ದೆ ಇದದ್ದನ್ನು ನೋಡಿ ಶಾಕ್ ಆಗಿದೆ ಅನ್ಸತ್ತೆ..! ಆದ್ರೆ ಇದಕ್ಕೆಲ್ಲಾ ಕಾರಣ ಏನು ಅನ್ನೋದು ನಿಮಗೆ ಗೊತ್ತಾದ್ರೆ ಇನ್ನೂ ಶಾಕ್ ಆಗಿ ಹೋಗ್ತೀರಾ..! ಅದೇನಂದ್ರೆ ಸ್ವತಃ ಬಿಗ್‍ಬಾಸ್ ಈ ಬಾರಿ ಪ್ರಥಮ್‍ರನ್ನು ಉಳ್ಸಿದಾರಂತೆ..! ಅದು ಹೇಗೆ ಗೊತ್ತಾ..? ಪ್ರತೀ ಬಾರಿಯೂ ಪ್ರಥಮ್‍ರನ್ನೆ ಗುರಿಯಾಗಿಸಿಕೊಂಡಿರುವ ಮನೆಯ ಇತರೆ ಸದಸ್ಯರಿಗೆ ಈ ಬಾರಿ ಪ್ರಥಮ್ ಹೆಸರು ಬಿಟ್ಟು ಬೇರೆ ಎಲ್ಲರ ಹೆಸರನ್ನು ನಾಮಿನೇಟ್ ಮಾಡಿ ಎಂದು ಹೇಳಿದ್ರೆಂತೆ. ಸದಸ್ಯರಿಗೆ ನೀಡಿದ್ದ ಈ ಸೀಕ್ರೆಟ್ ಟಾಸ್ಕ್ ನ ರೂಲ್ಸ್ ಪ್ರಕಾರ ಪ್ರಥಮ್ ಹೆಸರು ಈ ಬಾರಿ ನಾಮಿನೇಟ್ ಮಾಡಕೂಡದು ಎಂದು ಬಿಗ್‍ಬಾಸ್ ಆದೇಶ ನೀಡಿದ್ರಂತೆ..! ಈ ಒಂದೇ ಒಂದು ಕಾರಣಕ್ಕಾಗಿ ಈ ವಾರವೂ ನಾಮಿನೇಟ್ ಆಗ್ಬೇಕಿದ್ದ ಪ್ರಥಮ್ ಬಿಗ್‍ಬಾಸ್ ಕಡೆಯಿಂದ ಬಚಾವಾಗಿದ್ದಾರಂತೆ..! ಅದೇನೆ ಇರ್ಲಿ ಬಿಡಿ ಈ ವಾರ ಪ್ರಥಮ್ ಹೆಸರು ನಾಮಿನೇಟ್ ಆಗ್ದೆ ಹೋಗಿದ್ದು ಅಚ್ಚರಿ ತಂದ್ರೂ ಕೂಡ ಆತನ ಅಭಿಮಾನಿಗಳಿಗಂತೂ ಸಖತ್ ಖುಷಿಯಾಗಿರುತ್ತೆ..! ನೀವೇನಂತೀರಾ..?

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!

ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ

ಉತ್ತರ ಕೊರಿಯಾದಲ್ಲಿ ಕ್ರಿಸ್ಮಸ್ ಆಚರಿಸುವಂತಿಲ್ಲ..! ಅದರ ಬದಲು ಏನು ಮಾಡ್ಬೇಕು ಗೊತ್ತಾ..?

ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್

ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article