ಈಗೀಗ ಚಿಕ್ಕವರಿಗೂ ಹೃದಯಘಾತ ಆಗ್ತಿದೆ. 40 ಕ್ಕಿಂತ ಕಡಿಮೆ ವಯಸ್ಸಿನವರೆಗೂ ಹೃದಯಘಾತ ಆಗುವ ಪ್ರಮಾಣ ಹೆಚ್ಚಾಗುತ್ತಿದೆ. ಶೇ .45 ರಷ್ಟು ಮಂದಿಗೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುತ್ತಿದೆ. ಇದಕ್ಕೆ ಕಾರಣ ಇಲೇಟ್ರೊಗ್ರಾಮ್ ಅನ್ನೋ ಅಂಶವಂತೆ.
ಹೃದಯಕ್ಕೆ ರಕ್ತ ಸಂಚಾರ ಕಡಿಮೆಯಾದರೆ ಅಥವಾ ಗಂಭೀರ ಗಾಯದಿಂದ ರಕ್ತ ಸ್ರಾವ ಹೆಚ್ಚಾದರೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುತ್ತೆ.
ಹೃದಯದ ಮಾಂಸಖಂಡದ ನೋವು, ತಲೆ ಸುತ್ತು, ಕಡಿಮೆ ನಿದ್ರೆ ಅಥವಾ ನಿದ್ದೆ ಬಾರದಿದ್ದರೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ, ಬೇಗ ಪರಿಹಾರ ಕಂಡುಕೊಳ್ಳಬೇಕು.ಧೂಮಪಾನ, ಅಗತ್ಯಕ್ಕಿಂತ ಹೆಚ್ಚಾದ ವ್ಯಾಯಾಮ, ರಕ್ತದೊತ್ತಡ, ಕೆಟ್ಟ ಕೊಲೆಸ್ಟರಾಲ್ ಮತ್ತು ಮಧುಮೇಹವೂ ಇಂಥ ಸೈಲೆಂಟ್ ಹಾರ್ಟ್ ಅಟ್ಯಾಕ್‌ಗೆ ಕಾರಣವಾಗಬಲ್ಲದು.