ಕನ್ನಡ ದೇಶದೊಳ್ ನಮ್ಮ ತುಳುನಾಡು ಹಾಡು ರಿಲೀಸ್

Must read


ಕನ್ನಡ ದೇಶದೊಳ್…ಈಗಾಗಲೇ ತುಂಬಾ ಜನಪ್ರಿಯ ಆಗಿರೋ ಹೆಸರು.

ಕಳೆದ ಮೂರು ವರ್ಷಗಳಿಂದ ಕನ್ನಡದ ಬಗ್ಗೆ ವಿನೂತನ ರೀತಿಯಲ್ಲಿ ಅಭಿಯಾನ ಮಾಡಿಕೊಂಡು ಬರುತ್ತಿರುವ ಯುವಕರ ತಂಡ ಮಾಡಿರುವ ಸಿನಿಮಾವೇ ಈ‌ ‘ಕನ್ನಡ ದೇಶದೊಳ್’….!
ನವೆಂಬರ್ 1 ರಂದು ರಿಲೀಸ್ ಆಗುತ್ತಿದೆ. ಬಹು ನಿರೀಕ್ಷಿತ ಈ ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದೆ. ಅದೇ ನಮ್ಮ ತುಳುನಾಡು..

 


ಈ‌ ಹಾಡು ಖಂಡಿತಾ ನಿಮಗೆ ಇಷ್ಟ ಆಗುತ್ತೆ. ನೋಡಿ…ಅಭಿಪ್ರಾಯ ತಿಳಿಸಿ..

ಈಗಾಗಲೇ ವಿಭಿನ್ನ ರೀತಿಯಲ್ಲಿ ಅದ್ಧೂರಿಯಾಗಿ ತನ್ನ ಸಿನಿಮಾವನ್ನು ಪ್ರಚಾರ ಮಾಡುತ್ತಿದೆ ಉತ್ಸಾಹಿ ಯುವಕರ ತಂಡ.‌ ಕನ್ನಡ ದೇಶದೊಳ್ ಎಂಬ ಶೀರ್ಷಿಕೆಯನ್ನು ಹೊಂದಿರುವ ಅಂಗಿಯನ್ನು ಸಿನಿಮಾ, ಕ್ರೀಡೆ, ಸಾಹಿತ್ಯ ಹೀಗೆ ಬೇರೆ ಬೇರೆ ಕ್ಷೇತ್ರದ ಸಾಧಕರಿಗೆ ನೀಡಿ ಅವರ ಶುಭಹಾರೈಕೆಯನ್ನು ಪಡೆಯುತ್ತಿದ್ದಾರೆ.   ಆಟೋ, ಬಸ್, ಅಂಗಡಿಯ ಮುಂಗಟ್ಟು, ಬೈಕ್, ಕ್ಯಾಬ್ ಹೀಗೆ ಎಲ್ಲಾ ಕಡೆ ಸಿನಿಮಾ ಶೀರ್ಷಿಕೆ ಪ್ರಚಾರ ಮಾಡಿದೆ ಚಿತ್ರತಂಡ.

ಕನ್ನಡ ದೇಶದೊಳ್ ಎಂಬ ಶೀರ್ಷಿಕೆಯಲ್ಲೇ ಕನ್ನಡದ ಗಟ್ಟಿತನವಿದೆ, ಅಭಿಮಾನವಿದೆ…ಶೀರ್ಷಿಕೆಯೇ ಆಕರ್ಷಣೀಯವಾಗಿದ್ದು, ಜನರನ್ನು ಸೆಳೆಯುತ್ತಿದ್ದು ದೊಡ್ಡಮಟ್ಟಿನ ನಿರೀಕ್ಷೆ ಹುಟ್ಟುಹಾಕಿದೆ.
ಅವಿರಾಮ್ ಕಂಠೀರವ ಎಂಬ ನವ ನಿರ್ದೇಶಕ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಸಿನಿರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಜೆ ಎಸ್ ಎಮ್ ಪ್ರೊಡಕ್ಷನ್ ನವರು ಸಿನಿಮಾ ನಿರ್ಮಿಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article