ಇಂದಿನಿಂದ ಬೆಂಗಳೂರಲ್ಲಿ ಹೆಲಿ ಟ್ಯಾಕ್ಸ್ ಸೇವೆ ಆರಂಭ….! ಇದು ದೇಶದಲ್ಲೇ ಮೊದಲು…!

Date:

ಟ್ರಾಫಿಕ್ ಸಮಸ್ಯೆ ತಪ್ಪಿಸಲು ಹಾಗೂ ಪ್ರಯಾಣ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಲ್ಲಿ ಇಂದಿನಿಂದ ಹೆಲಿ ಟ್ಯಾಕ್ಸಿ ಸೇವೆ ಆರಂಭವಾಗಿದೆ. ಇದು ದೇಶದಲ್ಲಿ ಆರಂಭವಾದ ಮೊದಲ ಹೆಲಿ ಟ್ಯಾಕ್ಸಿ ಸೇವೆ‌.


ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ಹೆಲಿ ಟ್ಯಾಕ್ಸಿ ಸೇವೆ ಆರಂಭಾವಗಿದೆ. ಬೆಳಗ್ಗೆ 6.30ಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಮೊದಲ ಹೆಲಿ ಟ್ಯಾಕ್ಸಿ ಟೇಕ್ ಆಫ್ ಆಗಿದೆ. ಐವರು ಗ್ರಾಹಕರು ಮುಂಗಡವಾಗಿ ತಮ್ಮ ಸೀಟ್ ಬುಕ್ ಮಾಡಿದ್ದರು. ದಿನಕ್ಕೆ ಮೂರು ಟ್ರಿಪ್ ನಂತೆ ಈ ಸೇವೆ ಇರಲಿದೆ. ಈ ಸೇವೆ ಒದಗಿಸುತ್ತಿರುವುದು ಕೊಚ್ಚಿ ಮೂಲದ ತಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್. ‌ಮುಂದಿನ ದಿನಗಳಲ್ಲಿ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೂ ಈ ಸೇವೆ ವಿಸ್ತರಿಸಲಾಗುತ್ತದೆ. ದಿನಕ್ಕೆ ಮೂರು ಟ್ರಿಪ್ ನಂತೆ ಈ ಸೇವೆ ಇರಲಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ರಸ್ತೆ ಮಾರ್ಗದಲ್ಲಿ ಹೋಗಲು 1ಗಂಟೆಯಿಂದ 3 ಗಂಟೆ ಬೇಕು. ಆದರೆ, ಹೆಲಿ ಟ್ಯಾಕ್ಸಿಯಲ್ಲಿ ಕೇವಲ 15 ನಿಮಿಷ ಸಾಕಾಗುತ್ತದೆ. ಗ್ರಾಹಕರು ಹೆಲಿಟ್ಯಾಕ್ಸಿ ಕ್ಯಾಬ್ ಆ್ಯಪ್ ಮೂಲಕ ಹೆಲಿ ಟ್ಯಾಕ್ಸಿ ಯನ್ನು ಬುಕ್ ಮಾಡಿಕೊಳ್ಳಬಹುದು. ಒಬ್ಬರಿಗೆ ತೆರಿಗೆ ಸೇರಿ 4 ಸಾವಿರ ರೂ‌ ನಿಗಧಿ ಮಾಡಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ ನಡುವಿನ ಪ್ರಯಾಣಕ್ಕೆ 1500ರೂ ನಿಂದ 2000 ರೂ ಖರ್ಚಾಗುತ್ತದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...